ಬೆಂಗಳೂರು,ನ.23- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾದ ಮೇಲೆ ಅಸಮಾಧಾನ ಶಮನಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು ಇನ್ನಷ್ಟು ಅತೃಪ್ತಿ ಸೋಟಗೊಳ್ಳುವ ಲಕ್ಷಣಗಳು ಗೋಚರಿಸಿವೆ.
ಮಾಜಿ ಸಚಿವರಾದ ವಿ.ಸೋಮಣ್ಣ, ಅರವಿಂದ ಲಿಂಬಾವಳಿ ಅವರುಗಳು ಬಹಿರಂಗವಾಗಿಯೇ ವರಿಷ್ಠರ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರವಾಗಿದೆ. ಅದರಲ್ಲೂ ವೀರಶೈವ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕನೆಂದೇ ಗುರುತಿಸಿಕೊಂಡಿರುವ ವಿ.ಸೋಮಣ್ಣ ಗುರುವಾರ ಮೈಸೂರಿನಲ್ಲಿ ಹೇಳಿರುವ ಮಾತುಗಳು ಬಿಜೆಪಿಯಲ್ಲಿ ಇನ್ನಷ್ಟು ಅಸಮಾಧಾನ ಸೋಟಗೊಳ್ಳುವುದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಬಿಜೆಪಿ ಯಾವುದೋ ಒಂದು ಕುಟುಂಬಕ್ಕೆ ಸೀಮಿತವಾಗಬಾರದು. ಡಿ.6ರ ನಂತರ ನಾನು ಅನೇಕ ಮಾಹಿತಿಗಳನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಹೇಳಿರುವುದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದವರ ವಿರುದ್ಧ ಸಿಡಿದೇಳುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
ಡಿಸೆಂಬರ್ 6ರವರೆಗೆ ಯಾವುದೇ ಹೇಳಿಕೆ ನೀಡದಂತೆ ತಿಳಿಸಿರುವುದರಿಂದ ಅಲ್ಲಿಯವರೆಗೂ ಏನೂ ಮಾತಾಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದ ಸಂಘಪರಿವಾರದ ನಿಷ್ಠೆಯ ಅರವಿಂದ ಲಿಂಬಾವಳಿ ಕೂಡ ವರಿಷ್ಠರ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಹಕಾರ ನೀಡುತ್ತೇವೆ : ರಮೇಶ್ ಜಾರಕಿಹೊಳಿ
ವಿಜಯೇಂದ್ರ ಅವರ ಪಕ್ಷದ ವರಿಷ್ಠರು ಸಾಮಥ್ರ್ಯದ ಮೇಲೆ ಆಯ್ಕೆ ಮಾಡಿಲ್ಲ. ಇಲ್ಲಿ ವಿರೋಧ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ಅವರ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ವಿಜಯೇಂದ್ರ ಆಯ್ಕೆಗೆ ತಮ್ಮ ಸಹಮತ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಅರವಿಂದ ಲಿಂಬಾವಳಿ, ಸೋಮಣ್ಣ ಮಾತ್ರವಲ್ಲದೆ, ಪಕ್ಷದೊಳಗೆ ಇನ್ನೊಂದು ಬಣ ಕೂಡ ಮುನಿಸಿಕೊಂಡಿದೆ.
ಶಾಸಕಾಂಗ ಸಭೆಯನ್ನೇ ಬಹಿಷ್ಕಾರ ಮಾಡಿ ಹೊರನಡೆದಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಹೀಗೆ ಪಕ್ಷದೊಳಗಿರುವ ವಿರೋ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆರ್.ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಮೇಲೆ ಈ ಇಬ್ಬರ ಆಯ್ಕೆ ಕುರಿತು ಅನೇಕರು ಒಳಗೊಳಗೆ ಕುದಿಯುತ್ತಿದ್ದಾರೆ. ಏಕೆಂದರೆ ಇಬ್ಬರು ಕೂಡ ಯಡಿಯೂರಪ್ಪನವರ ಬಣಕ್ಕೆ ಸೇರಿದ್ದು ಸಂಘಪರಿವಾರದ ನಿಷ್ಠರಿಗೆ ಪ್ರಮುಖ ಸ್ಥಾನ ನೀಡಲು ವರಿಷ್ಠರು ನಿರ್ಲಕ್ಷ್ಯ ಮಾಡಿದ್ದಾರೆಂಬ ಅಸಮಾಧಾನ ಮಡುಗಟ್ಟಿದೆ.
ವರದಿ ಜಾರಿಗೂ ಮುನ್ನವೇ ಅವೈಜ್ಞಾನಿಕ ಎಂಬುದು ಸರಿಯಲ್ಲ : ಕಾಂತರಾಜು
ಸದ್ಯಕ್ಕೆ ಒಂದಿಬ್ಬರು ಮಾತ್ರ ವರಿಷ್ಠರ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿದ್ದರಾದರೂ ಅನೇಕರು ಬಹಿರಂಗವಾಗಿ ಏನೂ ಹೇಳಲೂ ಆಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‍ಗೆ ಗಾಳ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದರೂ ಸ್ಥಳೀಯ ನಾಯಕರ ಸಹಕಾರ ಸಿಗದಿರುವುದು ವಿಜಯೇಂದ್ರಗೆ ಹಿನ್ನಡೆ ಎಂದು ಹೇಳಲಾಗುತ್ತಿದೆ.