Friday, September 20, 2024
Homeಅಂತಾರಾಷ್ಟ್ರೀಯ | Internationalಎಲಾನ್ ಮಸ್ಕ್ ಜೊತೆ ಗುಂಡಿನ ದಾಳಿಯ ಅನುಭವ ಹಂಚಿಕೊಂಡ ಟ್ರಂಪ್

ಎಲಾನ್ ಮಸ್ಕ್ ಜೊತೆ ಗುಂಡಿನ ದಾಳಿಯ ಅನುಭವ ಹಂಚಿಕೊಂಡ ಟ್ರಂಪ್

ವಾಷಿಂಗ್ಟನ್,ಆ.13– ತಮ್ಮ ಮೇಲೆ ನಡೆದ ಹತ್ಯಾ ಯತ್ನವು ಹಾರ್ಡ್ ಹಿಟ್ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಿಮಂಥವರ ಮೇಲೆ ಗುಂಡಿನ ದಾಳಿ ನಡೆದಿದ್ದರ ಬಗ್ಗೆ ನಿಮ ಅಭಿಪ್ರಾಯ ಏನು ಎಂದು ಎಕ್ಸ್ ಮಾಲೀಕ ಎಲಾನ್ ಮಸ್ಕ್ ಕೇಳಿದ ಪ್ರಶ್ನೆಗೆ ಅದು ಅತ್ಯಂತ ಹಾರ್ಡ್ ಹಿಟ್ ಆಗಿತ್ತು ಎಂದು ಹೇಳಿದ್ದಾರೆ.

ಬಿಲಿಯನೇರ್ ಉದ್ಯಮಿ ಎಲಾನ್ಮಸ್ಕ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅದು ಅತೀ ವಾಸ್ತವಿಕ ಅನುಭವ ಎಂದು ಹೇಳಬಹುದು. ಆದರೆ ನನಗೆ ಈ ರೀತಿ ಅನ್ನಿಸಲಿಲ್ಲ. ಬುಲೆಟ್ ನನ್ನ ಕಿವಿಗೆ ತಾಗಿದೆ ಎಂದು ತಿಳಿಯಿತು. ಆದರೂ ನಾನು ಧೃತಿಗೆಡಲಿಲ್ಲ. ಬುಲೆಟ್ ತಾಗಿ ಕೆಳಗೆ ಬೀಳುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಮೂಡಿದ ಏಕೈಕ ಪ್ರಶ್ನೆ – ಎಷ್ಟು ಜನರ ಹತ್ಯೆಯಾಗಿದೆ ಎಂಬುದಷ್ಟೇ ಎಂದು ಹೇಳಿದ್ದಾರೆ.

ಏಕೆಂದರೆ ಗುಂಡಿನ ದಾಳಿ ನಡೆದ ನನ್ನ ಪ್ರಚಾರ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಸೇರಿದ್ದರು. ಹಾಗಾಗಿ ಎಷ್ಟು ಜನರ ಹತ್ಯೆಯಾಗಿದೆ ಎಂದು ನಾನು ಕೇಳಿದೆ. ಏಕೆಂದರೆ ಪಕ್ಕದಲ್ಲಿ ಮತ್ತಷ್ಟು ಗುಂಡು ಹಾರಿಸಿರುವುದು ನನಗೆ ತಿಳಿಯಿತು ಎಂದು ಟ್ರಂಪ್ ಹೇಳಿದ್ದಾರೆ.

ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಪ್ರಚಾರದ ವೇಳೆ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂಡಲೇ ವೇದಿಕೆಗೆ ನುಗ್ಗಿ ಸೀಕ್ರೆಟ್ ಏಜೆನ್ಸಿಗಳು ಭದ್ರತೆ ಒದಗಿಸಿದ್ದರು. ಬುಲೆಟ್ ಟ್ರಂಪ್ ಅವರ ಕಿವಿಯ ಮೇಲ್ಭಾಗಕ್ಕೆ ತಾಗಿತ್ತು.

ಬೆತೆಲ್ ಪಾರ್ಕ್ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಪ್ಸ್ ಶೂಟರ್ ಎಂದು ಎಫ್ಡಿಐ ಗುರುತಿಸಿತ್ತು. ಎಕ್ಸ್ಸ ಲೈವ್ ಸ್ಕ್ರೀಮಿಂಗ್ ಟ್ರಂಪ್ ಸಂದರ್ಶನವು ತಾಂತ್ರಿಕ ದೋಷದಿಂದ ರಾತ್ರಿ 8 ಗಂಟೆಗೆ ಬದಲಾಗಿ 8.45 ಕ್ಕೆ ಶುರುವಾಗಿತ್ತು. ಸೈಬರ್ ದಾಳಿಯಿಂದ ಸಂದರ್ಶನ ವಿಳಂಬವಾಯಿತು ಎಂದು ಮಸ್ಕ್ ಹೇಳಿದ್ದಾರೆ. ಟ್ರಂಪ್ ಹೇಳುವುದನ್ನು ಜನರು ಕೇಳದಂತೆ ತಡೆಯುವ ಯತ್ನ ಇದಾಗಿತ್ತು ಎಂದಿದ್ದಾರೆ.

RELATED ARTICLES

Latest News