Wednesday, September 11, 2024
Homeರಾಷ್ಟ್ರೀಯ | Nationalಮೂರು ಚೀಲಗಳಲ್ಲಿ ಮಹಿಳೆಯ ಮೃತದೇಹದ ಭಾಗಗಳು ಪತ್ತೆ

ಮೂರು ಚೀಲಗಳಲ್ಲಿ ಮಹಿಳೆಯ ಮೃತದೇಹದ ಭಾಗಗಳು ಪತ್ತೆ

ಗುನ,ಆ.13-ಮೂರು ಚೀಲಗಳಲ್ಲಿ ತುಂಬಿದ ಅಪರಿಚಿತ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿರುವ ಭಯಾನಕ ಮಧ್ಯಪ್ರದೇಶದ ಗುನ ಜಿಲ್ಲೆಯಲ್ಲಿ ನಡೆದಿದೆ.ಗುನ ಜಿಲ್ಲೆಯ ಕತೋಲಿ ಗ್ರಾಮದ ಪಡಿತರ ಅಂಗಡಿಯೊಂದರ ಬಳಿ ಅನುಮಾನಾಸ್ಪದ ಚೀಲಗಳು ಕಂಡುಬಂದಿದ್ದವು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಚೀಲಗಳನ್ನು ಪರಿಶೀಲಿಸಿದಾಗ ಮಹಿಳೆಯ ಮೃತದೇಹದ ಭಾಗಗಳು ಮೂರು ಚೀಲಗಳಲ್ಲಿ ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪತ್ತೆಯಾಗಿರುವ ಚೀಲಗಳನ್ನು ಗಮನಿಸಿದಾಗ ಕೆಲವೇ ಗಂಟೆಗಳ ಹಿಂದಷ್ಟೇ ಕೊಲೆ ನಡೆದಿರುವುದು ಕಂಡುಬಂದಿದೆ. ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಚಂಚೋಡ ಉಪವಿಭಾಗೀಯ ಪೊಲೀಸ್ ಅಧಿಕಾರಿ ದಿವ್ಯ ರಾಜಾವತ್ ಹೇಳಿದ್ದಾರೆ.

ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

RELATED ARTICLES

Latest News