ನ್ಯೂಯಾರ್ಕ್,ನ.6- ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (DonaldTrump) ಹೇಳಿದ್ದಾರೆ.
ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ನ. 22 ಮತ್ತು 23 ರಂದು ಜೋಹಾನ್್ಸಬರ್ಗ್ನಲ್ಲಿ ಶೃಂಗಸಭೆಯನ್ನು ಆಯೋಜಿಸಿದ್ದು,ಇದೇ ಮೊದಲ ಬಾರಿಗೆ ಜಿ.20 ನಾಯಕರ ಸಭೆ ಆಫ್ರಿಕನ್ ನೆಲದಲ್ಲಿ ನಡೆಯಲಿದೆ.ಫ್ಲೋರಿಡಾದಲ್ಲಿ ನಡೆದ ಅಮೇರಿಕಾ ಬಿಸಿನೆಸ್ ಫೋರಂ ಸಮೇಳನದಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ನಾನು ಹೋಗುತ್ತಿಲ್ಲ.ಏಕೆಂದರೆ ಅಲ್ಲಿ ಎಲ್ಲವೂ ಸೆರಿಯಿಲ್ಲ ನಮ ದೇಶವನ್ನು ಪ್ರತಿನಿಧಿಸುವುದಿಲ್ಲ ಎಂದು ಟ್ರಂಪ್ ಹೇಳಿದರು. ಡಿಸೆಂಬರ್.1ರಂದು ದಕ್ಷಿಣ ಆಫ್ರಿಕಾದಿಂದ ಜಿ20 ಅಧ್ಯಕ್ಷತೆಯನ್ನು ಅಮೆರಿಕ ವಹಿಸಿಕೊಳ್ಳಲಿದ್ದು, ನವೆಂಬರ್ 30, 2026 ರವರೆಗೆ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಟ್ರಂಪ್ ಈ ಹಿಂದೆ 2026 ರ ಜಿ.20 ಶೃಂಗಸಭೆಯನ್ನು ಮಿಯಾಮಿ ಬಳಿಯ ತಮ ಗಾಲ್್ಫ ಕ್ಲಬ್ನಲ್ಲಿ ಆಯೋಜಿಸುವುದಾಗಿ ಹೇಳಿದ್ದರು.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್ , ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ ಮತ್ತು ಯುಎಸ್ ಹಾಗೂ ಯುರೋಪಿಯನ್ ಒಕ್ಕೂಟ ಮತ್ತು ಆಫ್ರಿಕನ್ ಒಕ್ಕೂಟ ಸೇರಿ ಜಿ.20ಯಲ್ಲಿ 19 ದೇಶಗಳಿವೆ.
ಟ್ರಂಪ್ ಕಮ್ಯುನಿಸ್ಟ್ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಜೋಹ್ರಾನ್ ಮಮ್ದಾನಿಯನ್ನು ಟೀಕಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕಮ್ಯುನಿಸ್ಟ್ ದಬ್ಬಾಳಿಕೆಯಿಂದ ಪಲಾಯನ ಮಾಡುವ ಜನರಿಗೆ ಮಿಯಾಮಿ ಬಹಳ ಹಿಂದಿನಿಂದಲೂ ಸ್ವರ್ಗವಾಗಿದೆ ಎಂದು ಹೇಳಿದರು
