ರಿಷಿ ಸುನಕ್‍ ಮತ್ತು ಮೋದಿ ಮೊದಲ ಭೇಟಿ

ಬಾಲಿ,ನ.15- ಇಂಡೋನೆಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರಮೋದಿ, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರಿಗೆ ಶುಭ ಹಾರೈಸಿದ್ದಾರೆ. ಶೃಂಗಸಭೆಯ ಮೊದಲ ದಿನವೇ ಉಭಯ ನಾಯಕರು ಪರಸ್ಪರ ಭೇಟಿಯಾಗಿದ್ದು, ಮೋದಿಯವರು ರಿಷಿ ಸುನಕ್‍ರನ್ನು ಅಭಿನಂದಿಸಿದ್ದಾರೆ. ಭಾರತದ ಸಂಜಾತ ಹಾಗೂ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಇತ್ತೀಚೆಗೆ ಇಂಗ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಇದು ಮೊದಲ ಅಂತಾರಾಷ್ಟ್ರೀಯ ಸಮ್ಮೇಳನವಾಗಿದೆ. ಪ್ರಧಾನಿ ನರೇಂದ್ರಮೋದಿ ಇಂದು ಎಂಟು ರಾಷ್ಟ್ರಗಳ ಪ್ರಮುಖರ ಜೊತೆ ದ್ವಿಪಕ್ಷೀಯ […]

ಜಿ-20 ಶೃಂಗಸಭೆಗೆ ಆಗಮಿಸಿದ್ದ ಕಾಂಬೋಡಿಯಾ ಪ್ರಧಾನಿಗೆ ಕೊರೋನಾ ಪಾಸಿಟಿವ್

ನುಸಾ ದುವಾ (ಇಂಡೋನೇಷ್ಯಾ), ನವೆಂಬರ್ 15 – ಜಿ-20 ಸಮ್ಮೇಳನಕ್ಕೆ ಆಗಮಿಸಿದ ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಕೂಡಲೆ ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ತನ್ನ ಫೇಸ್‍ಬುಕ್ ಪುಟದಲ್ಲಿ ವಿವರವಾದ ಮಾಹಿತಿ ಪೋಸ್ಟ್ ಮಾಡಿದ ಅವರು ಕಳೆದ ರಾತ್ರಿ ಆರೋಗ್ಯ ಪರೀಕ್ಷೆ ಮಾಡಲಾಗಿತ್ತು,ಇಂಡೋನೇಷ್ಯಾದ ವೈದ್ಯರು ಕೋವಿಡ್ ಇರುವುದು ದೃಢೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಎ-20 ಮತ್ತು ಬ್ಯಾಂಕಾಕ್‍ನಲ್ಲಿನ ಆರ್ಥಿಕ ವೇದಿಕೆ ಸಭೆಗಳನ್ನು ರದ್ದುಗೊಳಿಸುತ್ತಿದ್ದಾರೆ. ಕಳೆದ ಭಾನುವಾರದಂದು ಕೊನೆಗೊಂಡ ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ […]