Homeಕ್ರೀಡಾ ಸುದ್ದಿಏಷ್ಯನ್‌ ಗೇಮ್ಸ್ : ವೇಟ್‌ಲಿಫ್ಟಿಂಗ್‌ನಲ್ಲಿ 28 ವರ್ಷಗಳ ನಂತರ ಭಾರತಕ್ಕೆ ಬೆಳ್ಳಿ ಪದಕ

ಏಷ್ಯನ್‌ ಗೇಮ್ಸ್ : ವೇಟ್‌ಲಿಫ್ಟಿಂಗ್‌ನಲ್ಲಿ 28 ವರ್ಷಗಳ ನಂತರ ಭಾರತಕ್ಕೆ ಬೆಳ್ಳಿ ಪದಕ

ಅಚಿ-ನಗೋಯಾ, ಸೆ.23- ಏಷ್ಯನ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ 28 ವರ್ಷಗಳ ನಂತರ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ.ಇಂದಿಲ್ಲಿ ನಡೆದ 49 ಕೆ.ಜಿ. ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಸುದೀರ್ಘ ಕಾಯುವಿಕೆಗೆ ತೆರೆ ಎಳೆದಿದ್ದಾರೆ.

ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹ್ಯಾಟ್ರಿಕ್‌ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದರು.1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಬೆಳ್ಳಿ ಪದಕ ಗೆದ್ದ ಬಳಿಕ, ಈ ಸಾಧನೆ ಮಾಡಿದ ಭಾರತದ ವೇಟ್‌ಲಿಫ್ಟರ್‌ ಆಗಿ ಮೀರಾಬಾಯಿ ಚಾನು ಗುರುತಿಸಿಕೊಂಡಿದ್ದಾರೆ.

ಇದು ಏಷ್ಯನ್‌ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಗೆದ್ದ ಮೊದಲ ಪದಕವಾಗಿದೆ. ಸ್ಪರ್ಧೆಯಲ್ಲಿ ಅವರು ಒಟ್ಟಾರೆ 198 ಕೆ.ಜಿ. ಭಾರ ಎತ್ತಿದ್ದು, 87 ಕೆ.ಜಿ. ಸ್ನ್ಯಾಚ್‌ ಹಾಗೂ 111 ಕೆ.ಜಿ. ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ ಸಾಧನೆ ಮಾಡಿದ್ದಾರೆ. ದಕ್ಷಿಣ ಕೊರಿಯಾದ ರಿ ಸಾಂಗ್‌ (215 ಕೆ.ಜಿ.) ಚಿನ್ನದ ಪದಕ ಗೆದ್ದರೆ, ಇಂಡೋನೇಷ್ಯಾದ ವಿಯಾನಾ ಲುಲುಕ್‌ ದೆಯಾನಾ ಕಂಚಿನ ಪದಕಕ್ಕೆ ಪಾತ್ರರಾದರು.

RELATED ARTICLES
spot_img

Latest News