ಬೆಂಗಳೂರು,ನ.23- ರೈಲ್ವೆ ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟು ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿರುವ ಘಟನೆ ಚನ್ನಪಟ್ಟಣದ ಬಳಿ ನಡೆದಿದೆ.ಲೊಕೊಪೈಲೆಟ್ ಕೂಟಲೆ ರೈಲು ನಿಲ್ಲಿಸಿದ್ದು ಅದೃಷ್ಣವಶಾತ್ ಯಾವುದೇ ದುರಂತ ಸಂಭವಿಸಿಲ್ಲ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ.
ಹಳಿಯ ಮೇಲೆ ಇಡಲಾಗಿದ್ದ ಕಬ್ಬಿಣದ ರಾಡ್ ಇಂಜಿನ್‌ಗೆ ಬಡಿದು ಸಿಕ್ಕಿಹಾಕಿಕೊಂಡಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲು ಅರ್ಧದಲ್ಲೇ ನಿಲ್ಲಿಸಲಾಗಿತ್ತು ಕೂಡಲೆ ರೈಲ್ಲೆ ಪೊಲೀಸರು ಹಾಗು ರಕ್ಷಣಾ ತಂಡ ಸ್ಥಳಕ್ಕೆ ಬಂದು ದುರಸ್ಥಿಗೆ ಮುಂದಾದರು.
ನಂತರ ಬದಲಿ ಇಂಜಿನ್ ವ್ಯವಸ್ಥೆ ಮಾಡಿ ರೈಲು ಬೆಂಗಳೂರು ಕಡೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಇನ್ನು ದುರಸ್ಥಿ ಮಾಡಿ ರೈಲನ್ನು ಮಂಡ್ಯ ಕಡೆಗೆ ಸಾಗಿಸಲಾಗಿದೆ.
