ಹಾಸನ, ಏ.2- ಮಾಂಸಕ್ಕಾಗಿ ಕಾಡೆಮ್ಮೆಯನ್ನು ಬಂದೂಕಿನಿಂದ ಶೂಟ್ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಎಸ್ಟೇಟ್ನಲ್ಲಿ ನಡೆದಿದೆ.
ಕಾಡೆಮ್ಮೆಯನ್ನು ಕೊಂದ ಉಮೇಶ್, ರವಿ ಎಂಬ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದ್ದು, ಐವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.ಹೊಸೂರು ಎಸ್ಟೇಟ್ ಸಮೀಪ ಮಾಂಸಕ್ಕಾಗಿ ಬಂದೂಕಿನಿಂದ ಕಾಡೆಮ್ಮೆಯನ್ನು ಶೂಟ್ ಮಾಡಿದ್ದು, ಮಾಂಸ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ, ಕಾಡೆಮ್ಮೆಯ ಸುಮಾರು 10 ಕೆಜಿ ಮಾಂಸ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧ ಮಧು, ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳು ಇದೇ ಎಸ್ಟೇಟ್ಗೆ ಸೇರಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.