Saturday, September 14, 2024
Homeಜಿಲ್ಲಾ ಸುದ್ದಿಗಳು | District Newsಹಸುಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವು

ಹಸುಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವು

ಬೇಲೂರು,ಆ.16- ಹಸುಗಳಿಗೆ ನೀರು ಕುಡಿಸಲು ಹೋಗಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೇಲೂರು ಪೊಲೀಸ್‌‍ ಠಾಣೆ ವ್ಯಾಪ್ತಿಯ ಬಳ್ಳೂರು ಗ್ರಾಮದಲ್ಲಿ ನಡೆದಿದೆ.ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಶ್ರೀಕಾಂತ್‌(15) ಹಾಗೂ ವಿಜಯ (13) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಈ ಬಾರಿ ಬಂದ ಮುಂಗಾರು ಮಳೆಗೆ ಕೆರೆ ಕಟ್ಟೆಗಳೆಲ್ಲ ತುಂಬಿ ಹರಿದಿದ್ದು,ಹಾಗೇ ಬಳ್ಳೂರು ಗ್ರಾಮದ ದೊಡ್ಡೆಕೆರೆಯೂ ಸಹ ತುಂಬಿತ್ತು. ಆದರೆ ಇಬ್ಬರೂ ಬಾಲಕರು ಇಲ್ಲಿಗೆ ನಿನ್ನೆ ಸಂಜೆ 3-45 ಗಂಟೆಯಲ್ಲಿ ಹಸುಗಳಿಗೆ ನೀರು ಕುಡಿಸಲೆಂದು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಬೆದರಿದ ಹಸುಗಳು ಎಲೆಂದರಲ್ಲಿ ಸಾಗಿದೆ.

ಈ ವೇಲೆ ವಿಜಯ ಕಾಲು ಜಾರಿ ಕೆರೆ ಬಿದ್ದಿದ್ದಾನೆ. ಇದನ್ನು ನೋಡಿದ ಶ್ರೀಕಾಂತ್‌, ಆತನನ್ನು ಕಾಪಾಡಲು ನೀರಿಗಿಳಿದಾಗ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.ರಕ್ಷಣೆಗಾಗಿ ಕೂಗಿದಾಗ ಸಮೀಪದಲ್ಲಿದ್ದ ಬಳ್ಳೂರು ಗ್ರಾಮದ ಸಂಜಯ್‌ ಮತ್ತು ದರ್ಶನ್‌ ಎಂಬುವವರು ಕೂಗಿಕೊಂಡು ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತಿದ್ದವರನ್ನು ಕರೆತಂದಿದ್ದಾರೆ.

ಈ ವೇಲೆಗಾಗಲೆ ವಿಜಯ ಮತ್ತು ಶ್ರೀಕಾಂತ್‌ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಈ ಸಂದರ್ಭ ಮೃತರ ಸಂಭಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಘಟನೆ ಸಂಬಂಧ ಬೇಲೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಹಾಸನದ ಹಿಮ್ಸೌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

RELATED ARTICLES

Latest News