Wednesday, May 22, 2024
Homeರಾಷ್ಟ್ರೀಯಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ, ಇಬ್ಬರು BSF ಯೋಧರಿಗೆ ಗಾಯ

ಶ್ರೀನಗರ,ಅ.18- ಜಮ್ಮುವಿನ ಅರ್ನಿಯಾ ಸೆಕ್ಟರ್‌ನಲ್ಲಿ ಪಾಕಿಸ್ತಾನ ರೇಂಜರ್‍ಗಳು ಕದನ ವಿರಾಮ ಉಲ್ಲಂಸಿ ಗುಂಡಿನ ದಾಳಿ ನಡೆಸಿರುವುದರಿಂದ ಇಬ್ಬರು ಗಡಿ ಭದ್ರತಾ ಪಡೆ (BSF) ಯೋಧರು ಗಾಯಗೊಂಡಿದ್ದಾರೆ ಎಂದು BSF ತಿಳಿಸಿದೆ. ಅಂತರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಗಡಿ ಕಾವಲುಗಾರರ ಮೇಲೆ ಪಾಕಿಸ್ತಾನ ರೇಂಜರ್‍ಗಳು ಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ ನಂತರ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅರ್ನಿಯಾ ಸೆಕ್ಟರ್‍ನ ವಿಕ್ರಮ್ ಪೋಸ್ಟ್‍ನಲ್ಲಿ ಪಾಕಿಸ್ತಾನ್ ರೇಂಜರ್‍ಗಳು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು, ನಂತರ BSF ಜವಾನರು ಪ್ರತೀಕಾರವಾಗಿ ಗುಂಡು ಹಾರಿಸಿದ್ದಾರೆ ಎಂದು BSF ಹೇಳಿಕೆಯಲ್ಲಿ ತಿಳಿಸಿದೆ.

ಛತ್ತೀಸ್‍ಗಢದಲ್ಲಿ 5.5 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳ ವಶ

ಫೆಬ್ರವರಿ 2021 ರ ಭಾರತ ಮತ್ತು ಪಾಕಿಸ್ತಾನ ಸೇನೆಯ ನಡುವಿನ ಕದನ ವಿರಾಮ ತಿಳುವಳಿಕೆಯ ನಂತರ ಇದು ಕದನ ವಿರಾಮ ಉಲ್ಲಂಘನೆಯ ಮೊದಲ ಪ್ರಮುಖ ಘಟನೆಯಾಗಿದೆ. ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ ಪಾಕ್ ರೇಂಜರ್‍ಗಳು BSF ಪಡೆಗಳ ಕಡೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು, ಇದನ್ನು ಆರ್ನಿಯಾ ಸೆಕ್ಟರ್‍ನಲ್ಲಿ ಎಚ್ಚರಿಕೆಯ BSF ಪಡೆಗಳು ಸೂಕ್ತವಾಗಿ ಪ್ರತಿದಾಳಿ ನಡೆಸಿದರು. ಇಬ್ಬರು BSF ಸಿಬ್ಬಂದಿಗೆ ಬುಲೆಟ್ ಗಾಯಗಳಾಗಿವೆ, ಅವರಿಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಗಿದೆ ಎಂದು ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 25, 2021 ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ವಲಯಗಳಲ್ಲಿ ನಿಯಂತ್ರಣ ರೇಖೆಯ (ಎಲ್‍ಒಸಿ) ಉದ್ದಕ್ಕೂ ಕದನ ವಿರಾಮದ ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಗಮನಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿದ್ದವು.

ಮತ್ತೊಂದು ಘಟನೆಯಲ್ಲಿ, ಪಂಜಾಬ್‍ನ ತರ್ನ್ ತರನ್ ಜಿಲ್ಲಾಯಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಅಜಾಗರೂಕತೆಯಿಂದ ಭಾರತದ ಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದೆ ಎಂದು ವರದಿಯಾಗಿದೆ. ವಿಚಾರಣೆ ವೇಳೆ ಬಂಧಿತ ಪಾಕಿಸ್ತಾನಿ ಪ್ರಜೆ ಅಚಾತುರ್ಯದಿಂದ ಭಾರತಕ್ಕೆ ನುಗ್ಗಿರುವುದು ಗಮನಕ್ಕೆ ಬಂದಿದೆ. ಅವನಿಂದ ಆಕ್ಷೇಪಾರ್ಹವಾದ ಯಾವುದನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ.

RELATED ARTICLES

Latest News