Wednesday, March 12, 2025
Homeಬೆಂಗಳೂರುಇರಾನಿ ಗ್ಯಾಂಗ್‌ನ ಇಬ್ಬರು ಸರಗಳ್ಳರ ಬಂಧನ

ಇರಾನಿ ಗ್ಯಾಂಗ್‌ನ ಇಬ್ಬರು ಸರಗಳ್ಳರ ಬಂಧನ

Two chain snatchers from Irani gang arrested

ಬೆಂಗಳೂರು,ಮಾ.11– ಮಳೆಯರ ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದ ಇರಾನಿ ಗ್ಯಾಂಗ್‌ನ ಇಬ್ಬರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ಮತ್ತು 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಇರಾನಿ ಗ್ಯಾಂಗ್‌ನ ಖರಾರ್‌ ಹುಸೇನ್‌(53) ಮತ್ತು ತಬರೇಜ್‌(39) ಬಂಧಿತ ಸರಗಳ್ಳರು. ಖರಾರ್‌ ಹುಸೇನ್‌ ವಿರುದ್ಧ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ.

ಸದಾನಂದ ನಗರದಲ್ಲಿ ವಾಸವಿರುವ ಮಹಿಳೆಯೊಬ್ಬರು ಸಂಜೆ ವೇಳೆಯಲ್ಲಿ ಒಂಟಿಯಾಗಿ ಮನೆಗೆ ನಡೆದು ಹೋಗುತ್ತಿದ್ದ ಸಮಯದಲ್ಲಿ ಹಿಂಬದಿಯಿಂದ ಬೈಕ್‌ನಲ್ಲಿ ಹಿಂಬಾಸಿಲಿಕೊಂಡು ಬಂದ ಇಬ್ಬರು ಸರಗಳ್ಳರು ಸಮಯ ಸಾಧಿಸಿ ಅವರ ಕತ್ತಿನಲ್ಲಿದ್ದ 12 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಇದೇ ವ್ಯಾಪ್ತಿಯಲ್ಲಿ ಮತ್ತೊಂದು ಸರ ಅಪಹರಣವಾಗಿರುವುದು ಗೊತ್ತಾಗಿದೆ.ಕೃಷ್ಣಯ್ಯನಪಾಳ್ಯದ ನಿವಾಸಿಯೊಬ್ಬರು ಸಂಜೆ ವೇಳೆ ಮನೆಯ ಹತ್ತಿರವಿರುವ ಗಣೇಶ ದೇವಸ್ಥಾನದ ಮುಖ್ಯರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದ ಸಮಯದಲ್ಲಿ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಸರ ಗಳ್ಳರು 18 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಎರಡು ಪ್ರಕರಣಗಳ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಖಚಿತ ಮಾಹಿತಿ ಕಲೆಹಾಕಿದ್ದಾರೆ.ಆರೋಪಿಗಳು ಮಹಾರಾಷ್ಟ್ರದ ಬಿವಾಂಡಿಯ ನಾರ್ಫೋಲಿ ಪೊಲೀಸ್‌‍ ಠಾಣೆಯೊಂದರ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಪೈಕಿ ಮಹಾರಾಷ್ಟ್ರದ ಕಲ್ಯಾಣಅದರಿವಾಡಿ ಕಾರಾಗೃಹದಲ್ಲಿದ್ದ ಒಬ್ಬನನ್ನು 20 ದಿನಗಳ ಕಾಲ ಪೊಲೀಸ್‌‍ ಅಭಿರಕ್ಷೆಗೆ ಪಡೆದು ವಿಚಾರಣೆಗೊಳಪಡಿಸಿದಾಗ ಸರ ಅಪಹರಣ ಮಾಡಿರುವುದಾಗಿ ಹೇಳಿದ್ದಾನೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋಬ್ಬ ಸಹಚರನ ಬಗ್ಗೆ ಮಾಹಿತ್ನಿ ನೀಡಿದ್ದು, ಈ ಮಾಹಿತಿಯ ಮೇರೆಗೆ ಬಾಗೇಪಲ್ಲಿಯಲ್ಲಿರುವ ರಾಮಸ್ವಾಮಿಪಲ್ಲಿಯ ಆತನ ವಾಸದ ಮನೆಯಿಂದ ವಶಕ್ಕೆ ಪಡೆದು ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ. ಸುಲಿಗೆ ಮಾಡಿದ್ದ ಚಿನ್ನದ ಸರಗಳನ್ನು ಆರೋಪಿಗಳಿಬ್ಬರ ಪೈಕಿ ಒಬ್ಬ ಬೇಗೂರಿನ ವಿಶ್ವಪ್ರಿಯ ಲೇಔಟ್‌ನಲ್ಲಿರುವ ಆತನ ತಾಯಿಗೆ ನೀಡಿದ್ದ, 12 ಗ್ರಾಂನ ಒಂದು ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಕಲ್ಯಾಣಅದರಿವಾಡಿ ಕಾರಾಗೃಹದಿಂದ ಕರೆತಂದಿದ್ದ ಆರೋಪಿಯು ಸಹ ಬಾಗೇಪಲ್ಲಿಯಲ್ಲಿರುವ ರಾಮಸ್ವಾಮಿಪಲ್ಲಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಸುಲಿಗೆ ಮಾಡಿದ್ದ 18 ಗ್ರಾಂನ ಒಂದು ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿ, ಸರ ಅಪಹರಣ ಕೃತ್ಯಗಳಿಗೆ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಸಹ ವಶಪಡಿಸಿಕೊಳ್ಳಲಾದೆ. ಆರೋಪಿಗಳ ವಶದಿಂದ ಒಟ್ಟು 30 ಗ್ರಾಂ ತೂಕದ ಎರಡು ಚಿನ್ನದ ಸರಗಳು ಮತ್ತು 1ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಬೈಯಪ್ಪನಹಳ್ಳಿ ಪೊಲೀಸ್‌‍ ಠಾಣೆಯ 2 ಸರ ಅಪಹರಣ ಪ್ರಕರಣಗಳು ಹಾಗೂ ಮಹಾರಾಷ್ಟ್ರದ ಶಹಾಪುರ ಪೊಲೀಸ್‌‍ ಠಾಣೆಯ 1 ದ್ವಿಚಕ್ರ ಕಳವು ಪ್ರಕರಣ ಪತ್ತೆಯಾಗಿರುತ್ತವೆ. ಮಹಾರಾಷ್ಟ್ರದ ಕಲ್ಯಾಣಅದರಿವಾಡಿ ಕಾರಾಗೃಹದಿಂದ ಪೊಲೀಸ್‌‍ ಅಭಿರಕ್ಷೆಗೆ ಪಡೆದಿದ್ದ ಆರೋಪಿಯನ್ನು ಕಾರಾಗೃಹಕ್ಕೆ ವಾಪಸ್‌‍ ಕಳಸಿ ಕೊಡಲಾಗಿರುತ್ತದೆ. ಇನ್ಸ್ ಪೆಕ್ಟರ್‌ ಶಿವಕುಮಾರ್‌ಹಾಗೂ ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News