ಚಿಕ್ಕಮಗಳೂರು,ಡಿ.11- ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪ ತಾಲೂಕಿನ ಅಮಡಿ ಎಸ್ಟೇಟ್‌ನಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಸುನೀತಾ ಎಂಬುವರ ಮಕ್ಕಳಾದ ಸೀಮಾ (6), ರಾಧಿಕಾ (2) ಮೃತರು.
ಕೂಲಿಗಾಗಿ ಮಧ್ಯಪ್ರದೇಶದಿಂದ ಬಂದು ತೋಟದ ಮನೆಯಲ್ಲಿದ್ದುಕೊಂಡಿದ್ದ ತಾಯಿ ಮಕ್ಕಳನ್ನು ಮನೆಯಲ್ಲೇ ಬಿಟ್ಟು ತೋಟದ ಕೆಲಸಕ್ಕೆ ಹೋಗಿದ್ದರು.ಸಂಜೆ ಮನೆಗೆ ಬಂದಾಗ ಮಕ್ಕಳು ಇಲ್ಲದ್ದನ್ನು ಕಂಡು ತಾಯಿ ಆತಂಕಗೊಂಡಿದ್ದು, ಇತರೆ ಕಾರ್ಮಿಕರು ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.