Thursday, April 3, 2025
Homeರಾಷ್ಟ್ರೀಯ | Nationalಗಡಿಯಲ್ಲಿ ಹೆರಾಯಿನ್ ಸಾಗಿಸುತ್ತಿದ್ದ ಎರಡು ಡ್ರೋಣ್ ಪತ್ತೆ

ಗಡಿಯಲ್ಲಿ ಹೆರಾಯಿನ್ ಸಾಗಿಸುತ್ತಿದ್ದ ಎರಡು ಡ್ರೋಣ್ ಪತ್ತೆ

ಚಂಡೀಗಢ, ಡಿ 19 (ಪಿಟಿಐ) ಪಂಜಾಬ್‍ನ ಅಮೃತಸರದ ಭಾರತ-ಪಾಕಿಸ್ತಾನ ಗಡಿಯ ಬಳಿ ಎರಡು ಡ್ರೋನ್‍ಗಳು ಮತ್ತು ಸುಮಾರು ಒಂದು ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‍ಎಫ್ ವಕ್ತಾರರು ತಿಳಿಸಿದ್ದಾರೆ.

ಇಂದು ಮುಂಜಾನೆ ಅಮೃತಸರದ ಧನೋ ಖುರ್ದ್ ಗ್ರಾಮದ ಬಳಿ ಡ್ರೋನ್ ಗಮನಕ್ಕೆ ಬಂದಿತ್ತು. ಪಂಜಾಬ್ ಪೊಲೀಸರೊಂದಿಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಚೀನಾ ನಿರ್ಮಿತ ಡ್ರೋನ್ ಮತ್ತು 430 ಗ್ರಾಂ ತೂಕದ ಹೆರಾಯಿನ್ ಪ್ಯಾಕೆಟ್ ಅನ್ನು ಮೈದಾನದಿಂದ ವಶಪಡಿಸಿಕೊಳ್ಳಲಾಗಿದೆ. ಪ್ಯಾಕೆಟ್‍ಗೆ ನೈಲಾನ್ ರಿಂಗ್ ಮತ್ತು ಸಣ್ಣ ಟಾರ್ಚ್ ಅನ್ನು ಸಹ ಜೋಡಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಸಂಸತ್‍ನಲ್ಲಿ ಮತ್ತೆ ಪ್ರತಿಧ್ವನಿಸಿದ ಭದ್ರತಾ ಲೋಪ, ಕಲಾಪ ಮುಂದೂಡಿಕೆ

ನಿನ್ನೆ ಸಂಜೆ ಅದೇ ಧನೋಯ್ ಖುರ್ದ್ ಗ್ರಾಮದಲ್ಲಿ ಬಿಎಸ್‍ಎಫ್ ಪಡೆಗಳು ಮತ್ತೊಂದು ಡ್ರೋನ್ ಅನ್ನು ತಡೆದವು. ಶೋಧ ಕಾರ್ಯಾಚರಣೆಯಲ್ಲಿ ಚೀನಾ ನಿರ್ಮಿತ ಕ್ವಾಡ್‍ಕಾಪ್ಟರ್ ಮತ್ತು 540 ಗ್ರಾಂ ತೂಕದ ಹೆರಾಯಿನ್ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

RELATED ARTICLES

Latest News