Tuesday, July 23, 2024
Homeರಾಷ್ಟ್ರೀಯಕಾರು ಹರಿದು ಇಬ್ಬರು ರೈತರ ದುರ್ಮರಣ

ಕಾರು ಹರಿದು ಇಬ್ಬರು ರೈತರ ದುರ್ಮರಣ

ಬರೇಲಿ,ಅ.2- ಉತ್ತರಪ್ರದೇಶದ ಸಿರೌಲಿ ಪ್ರದೇಶದ ಗದ್ದೆಯೊಂದರ ಬಳಿ ವಿಶ್ರಾಂತಿ ಪಡೆಯುತ್ತಿದ್ದ ರೈತರ ಮೇಲೆ ಕಾರು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಇಲ್ಲಿನ ಹರ್ದಾಸ್‍ಪುರ ಗ್ರಾಮದ ನಿವಾಸಿಗಳಾದ ಪುರಷೋತ್ತಮ್ ದಾಸ್ (35) ಮತ್ತು ವಿಶಾಲ್ ಕುಮಾರ್ (19) ಎಂದು ಗುರುತಿಸಲಾಗಿದೆ.

ಮೃತ ರೈತರು ಬಿಡಾಡಿ ದನಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ತಮ್ಮ ಜಮೀನಿನಲ್ಲಿ ಕಾವಲು ಕಾಯುತ್ತ ಗದ್ದೆ ಹೊರಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಸ್ತೆ ಬದಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ವೇಗವಾಗಿ ಬಂದ ಕಾರು ಅವರ ಮೇಲೆ ಹರಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಸಿರೌಲಿ ಪೊಲೀಸ್ ಠಾಣೆ ಎಸ್‍ಎಚ್‍ಒ ರಾಜೇಶ್ ಮೌರ್ಯ ತಿಳಿಸಿದ್ದಾರೆ.

ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸುತ್ತಿದ್ದ ಮಹಿಳೆಗೆ ದಾರಿಯಲ್ಲೇ ಹೆರಿಗೆ

ಕಾರು ಕಂದಕಕ್ಕೆ ಬೀಳುವ ಮೊದಲು ಇಬ್ಬರನ್ನು 10 ಮೀಟರ್‍ಗೂ ಹೆಚ್ಚು ಕಾಲ ಕಾರಿನ ಕೆಳಗೆ ಎಳೆದೊಯ್ದಿದೆ ಎಂದು ಮೌರ್ಯ ಹೇಳಿದರು.ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳೀಯ ಬಿಜೆಪಿ ಶಾಸಕ ಮತ್ತು ಸಚಿವ ಧರ್ಮಪಾಲ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿ ತಮ್ಮ ಶವಗಳನ್ನು ರಸ್ತೆಯಲ್ಲಿ ಇರಿಸಿ ಪ್ರತಿಭಟನೆ ನಡೆಸಿದರು.

ಘಟನೆ ವೇಳೆ ಪಾನಮತ್ತನಾಗಿದ್ದ ಎನ್ನಲಾದ ಕಾರು ಚಾಲಕ ಗಣೇಶ್ ಕೂಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

RELATED ARTICLES

Latest News