Thursday, May 2, 2024
Homeರಾಷ್ಟ್ರೀಯನಾಗ್ಪುರ ನ್ಯಾಯಾಧೀಶರಿಗೆ ಬೆದರಿಕೆ ಪತ್ರ

ನಾಗ್ಪುರ ನ್ಯಾಯಾಧೀಶರಿಗೆ ಬೆದರಿಕೆ ಪತ್ರ

ನಾಗ್ಪುರ, ಅ.15- ಆಸ್ತಿ ತೆರಿಗೆ ಪ್ರಕರಣದಲ್ಲಿ ಪ್ರತಿಕೂಲ ತೀರ್ಪು ನೀಡಿದರೆ ಇಬ್ಬರು ನ್ಯಾಯಾಧೀಶರ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠಕ್ಕೆ ಬೆದರಿಕೆ ಪತ್ರವೊಂದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾಗ್ಪುರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 11 ರಂದು ನಾಗ್ಪುರ ಪೀಠಕ್ಕೆ ಬೆದರಿಕೆ ಪತ್ರ ತಲುಪಿದೆ. ವರುದ್ ನಗರ ಪರಿಷತ್ತಿನ ಆಸ್ತಿ ತೆರಿಗೆ ಹೆಚ್ಚಳವನ್ನು ಪ್ರಶ್ನಿಸಿ ಪ್ರಭಾಕರ್ ಕಾಳೆ ಎಂಬವರು ಸಲ್ಲಿಸಿದ ಅರ್ಜಿಯ ಮೇಲೆ ಪ್ರತಿಕೂಲವಾದ ತೀರ್ಪು ನೀಡಿದರೆ ಇಬ್ಬರು ನ್ಯಾಯಾಧೀಶರ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ಐಟಿ ದಾಳಿ, ಮತ್ತೆ 45 ಕೋಟಿ ರೂ. ಪತ್ತೆ!

ಈ ಪತ್ರವನ್ನು ಕಾಳೆ ಹೆಸರಿಗೆ ಕಳುಹಿಸಲಾಗಿದ್ದು, ನ್ಯಾಯಾಲಯದ ಅಧಿಕಾರಿಗಳು ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ. ಅಮರಾವತಿ ಗ್ರಾಮಾಂತರ ಪೊಲೀಸರು ಅರ್ಜಿದಾರರಿಂದ ಮಾಹಿತಿ ಕಲೆ ಹಾಕಿದ್ದು, ಬೆದರಿಕೆ ಪತ್ರ ಬರೆಯುವುದರಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

ಕಾಳೆ ಅವರ ವಕೀಲರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಪತ್ರಕ್ಕೂ ಕಾಳೆ ಅವರಿಗೂ ಯಾವುದೇ ಸಂಬಂಧ ಇಲ್ಲ. ಕಾಳೆ ಅವರ ಪ್ರತಿಷ್ಠೆಗೆ ಕಳಂಕ ತರುವ ಸಲುವಾಗಿ ಈ ಕೃತ್ಯ ನಡೆಸಲಾಗಿದೆ. ಪತ್ರದ ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಮತ್ತು ನಿರ್ಣಾಯಕ ಸುಳಿವುಗಳಿಗಾಗಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Latest News