Friday, April 19, 2024
Homeಜಿಲ್ಲಾ ಸುದ್ದಿಗಳುಹಾಸನ : ರಸ್ತೆ ಬದಿ ನಿಂತಿದ್ದ ಟ್ರಕ್‍ಗೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು

ಹಾಸನ : ರಸ್ತೆ ಬದಿ ನಿಂತಿದ್ದ ಟ್ರಕ್‍ಗೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು

ಹಾಸನ ,ಏ.1- ರಸ್ತೆ ಬದಿ ನಿಂತಿದ್ದ ಟ್ರಕ್‍ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.

ಅರಕಲಗೂಡು ತಾಲೂಕಿನ ಚಿಕ್ಕಆಲದಹಳ್ಳಿಯ ಅಶ್ವಥ್(42) ಹಾಗೂ ಆಲದಹಳ್ಳಿಯ ನಿವಾಸಿ ಸಾಗರ್(42) ಮೃತಪಟ್ಟ ಬೈಕ್ ಸವಾರರು. ರಸ್ತೆಬದಿ ಟ್ರಕ್ ನಿಲ್ಲಿಸಿಕೊಂಡು ಚಾಲಕ ಹಾಗೂ ಕ್ಲಿನರ್ ಅಡುಗೆ ಮಾಡುತ್ತಿದ್ದು ಈ ವೇಳೆ ಚೆನ್ನರಾಯಪಟ್ಟಣ ಕಡೆಯಿಂದ ಹಾಸನ ಕಡೆಗೆ ಬರುತ್ತಿದ್ದ ಬೈಕ್ ಏಕಾಏಕಿ ಟ್ರಕ್‍ಗೆ ಹಿಂದಿನಿಂದ ಡಿಕ್ಕಿಹೊಡೆದು ಸವಾರರು ರಸ್ತೆಗೆ ಉರುಳಿ ಬಿದ್ದಿದ್ದಾರೆ.

ಇಬ್ಬರ ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಪರಿಣಾಮ ಅಶ್ವಥ್ ಮತ್ತು ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಹೊಡೆದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಸುದ್ದಿ ತಿಳಿದ ಕೂಡಲೆ ಶಾಂತಿ ಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

RELATED ARTICLES

Latest News