ಭೂಪಾಲ್,ಡಿ.23-ಮಧ್ಯಪ್ರದೇಶದ ಉಮಾರಿಯಾ ಮತ್ತು ಬಾಲಘಾಟ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಹುಲಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಖಿಟೋಲಿ ವ್ಯಪ್ತಿಯಲ್ಲಿ ಖೈರುಹಾ ಬೈಗಾ (45) ಎಂಬ ಹುಲಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಕಳೆದ ಶುಕ್ರವಾರ ತನ್ನ ಸೋದರಮಾವನ ನಿವಾಸದಿಂದ ಕೆಲಸದ ನಿಮಿತ್ತ ಬೈಗಾ ತೆರಳಿ ನಾಪತ್ತೆಯಾಗಿದ್ದಾರು ಭಾನುವಾರ ಹುಲಿ ದಾಳಿಗೆ ಒಳಗಾಗಿರಬಹುದು ಎಂದು ಅರಣ್ಯಅಧಿಕಾರಿ ಸ್ವಸ್ತಿ ಶ್ರೀ ಜೈನ್ ತಿಳಿಸಿದ್ದಾರೆ.
ಕುಲುಹಾಬಾ ಪ್ರದೇಶದ ರೆಸಾರ್ಟ್‌ನ ಹಿಂದೆ ತಲೆಬುರುಡೆ, ಕೈ ತುಣುಕುಗಳು ಮತ್ತು ಬಟ್ಟೆ ಪತ್ತೆಯಾಗಿದೆ. ಅವಶೇಷಗಳು ಬೈಗಾ ಅವರದ್ದು ಎಂದು ಕುಟುಂಬ ಸದಸ್ಯರು ದೃಢಪಡಿಸಿದ್ದು,ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಹೆಜ್ಜೆಗಳು ಪತ್ತೆಯಾಗಿವೆ
ಮೊತ್ತೊಂದು ಘಟನೆಯಲ್ಲಿ ತಿರೋಡಿ ತಹಸಿಲ್ ವ್ಯಾಪ್ತಿಯ ಅಂಬೇಝರಿ ಗ್ರಾಮದ ತನ್ನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಗ 55 ವರ್ಷದ ರೈತ ಸುಖರಾಮ್ ಉಯ್ಕೆ ಅವರು ಬಾಲಾಘಾಟ್‌ನಲ್ಲಿ ಹುಲಿ ದಾಳಿ ಮಾಡಿ ಕೊಂದುಕಾಕಿದೆ.
ಕುಟುಂಬ ಸದಸ್ಯರು ಗದ್ದೆಗೆ ಬಂದಾಗ ಹುಲಿಯು ಉಕೆಯ ದೇಹವನ್ನು ತಿನ್ನುತ್ತಿರುವುದನ್ನು ಕಂಡು ಆತಂಕದಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಲಿಯನ್ನು ಸ್ಥಳದಿಂದ ಓಡಿಸಿದ್ದಾರೆ.ಭವಿಷ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳನ್ನು ತಡೆಯಲು ಹುಲಿ ಪತ್ತೆಗೆ ತಂಡವನ್ನು ನಿಯೋಜಿಸಲಾಗಿದೆ ಎಂದು ರೇಂಜ್ ಆಫೀಸರ್ ವರದಿ ಮಾಡಿದ್ದಾರೆ.