Thursday, April 3, 2025
Homeಬೆಂಗಳೂರುಸತ್ತು ಹೋಗಿದ್ದಾನೆಂದು ನಂಬಿಸಿದ್ದ ರೌಡಿ ಪೊಲೀಸ್ ಬಲೆಗೆ

ಸತ್ತು ಹೋಗಿದ್ದಾನೆಂದು ನಂಬಿಸಿದ್ದ ರೌಡಿ ಪೊಲೀಸ್ ಬಲೆಗೆ

ಬೆಂಗಳೂರು, ನ.21- ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸತ್ತು ಹೋಗಿರುವುದಾಗಿ ನಂಬಿಸಿ ಸುಳ್ಳು ಹೇಳಿ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಟ್‍ಫೀಲ್ಡ್ ಪೊಲೀಸ್ ಠಾಣೆಯ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ. ಈತ ರಾಜಾನುಕುಂಟೆ ಠಾಣೆಯ ಕೊಲೆ ಪ್ರಕರಣ ಹಾಗೂ ಕಾಡು ಬೀಸನಹಳ್ಳಿ ಡ್ರೈವರ್ ಸೋಮನ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ವಿದ್ಯುತ್ ಅವಘಡದಿಂದ ತಾಯಿ-ಮಗು ಸಾವು ಪ್ರಕರಣ 4 ಮಾದರಿಯ ತನಿಖೆ: ಕೆ.ಜೆ.ಜಾರ್ಜ್

ಆರೋಪಿ ರೌಡಿಯು ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದನು. ಸ್ನೇಹಿತರಿಗೂ ಮಲ್ಲಿಕಾರ್ಜುನ ಸತ್ತಿದ್ದಾನೆಂದು ನಂಬಿಸಲಾಗಿದೆ. ಅಲ್ಲದೆ, ಪೆಪೊಲೀಸರು ಕಾರ್ಯಾಚರಣೆ ವೇಳೆ ಮಲ್ಲಿಯ ಬಗ್ಗೆ ಮಾಹಿತಿ ಕಲೆ ಹಾಕಲು ಆತನ ಮನೆ ಬಳಿ ಹೋದಾಗ ಕುಟುಂಬಸ್ಥರು ಆತ ಸತ್ತಿದ್ದಾನೆಂದು ಹೇಳಿ ನಂಬಿಸಿದ್ದಾರೆ.

ಆದರೂ ಪೊಲೀಸರು ಈತನ ಸಾವಿನ ಬಗ್ಗೆ ಅನುಮಾನಗೊಂಡು ಬಂಧನ ಕಾರ್ಯ ಮುಂದುವರೆಸಿದಾಗ ರೌಡಿ ಮಲ್ಲಿ ಅಮೃತಳ್ಳಿ ಬಳಿ ಸುತ್ತಾಡುತ್ತಿದ್ದಾನೆಂಬ ಹೆಚ್ಚಿನ ಮಾಹಿತಿ ಕಲೆ ಹಾಕಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News