Saturday, December 21, 2024
Homeರಾಷ್ಟ್ರೀಯ | Nationalಮಹಾರಾಷ್ಟ್ರ : ಪೊಲೀಸರಿಗೆ ಶರಣಾದ ಇಬ್ಬರು ನಕ್ಸಲರು

ಮಹಾರಾಷ್ಟ್ರ : ಪೊಲೀಸರಿಗೆ ಶರಣಾದ ಇಬ್ಬರು ನಕ್ಸಲರು

Two Naxalites with cumulative bounty of Rs 8 lakh surrender in Gadchiroli

ಗಡ್ಚಿರೋಲಿ, ಡಿ 21 (ಪಿಟಿಐ) ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಇಬ್ಬರು ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಡ್ಚಿರೋಲಿ ನಿವಾಸಿ ರಾಮಸು ಪೋಯಂ ಅಲಿಯಾಸ್‌‍ ನರಸಿಂಗ್‌ (55) ಮತ್ತು ನೆರೆಯ ಛತ್ತೀಸ್‌‍ಗಢದ ನಾರಾಯಣಪುರ ಮೂಲದ ರಮೇಶ್‌ ಕುಂಜಮ್‌ ಅಲಿಯಾಸ್‌‍ ಗೋವಿಂದ್‌ (25) ಗಡ್‌ಚಿರೋಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್‌‍ ಪಡೆಯ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1992 ರಲ್ಲಿ ತಿಪಗಡ ಎಲ್‌ಒಎಸ್‌‍ ಸದಸ್ಯರಾಗಿ ನೇಮಕಗೊಂಡ ಪೋಯಂ 2010 ರಿಂದ ಕುತುಲ್‌ ಮತ್ತು ನೆಲ್ನಾರ್‌ ನಲ್ಲಿ ಪ್ರದೇಶ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಇವರ ತಲೆಗೆ ಪೊಲೀಸರು 6 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದರು.

ಪೋಯಮ್‌ ತನ್ನ ಹೆಸರಿನಲ್ಲಿ ಆರು ಎನ್‌ಕೌಂಟರ್‌ಗಳು, ಐದು ಕೊಲೆಗಳು ಮತ್ತು ಡಕಾಯಿತಿ ಅಪರಾಧ ಸೇರಿದಂತೆ 12 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಗುರಿಯಾಗಿದ್ದರು.
ಕುಂಜಮ್‌‍, 2019 ರಲ್ಲಿ ಮಿಲಿಟಿಯ ಸದಸ್ಯರಾಗಿ ಸೇರಿಕೊಂಡರು. ಅವರು 2020 ರಲ್ಲಿ ಚೇತನ ನಾಟ್ಯ ಮಂಚ್‌ ಸದಸ್ಯರಾಗಿ ನೇಮಕಗೊಂಡಿದ್ದ ಕುಂಜಮ್‌ 2021 ರಲ್ಲಿ ಕುತುಲ್‌ ಎಲ್‌ಒಎಸ್‌‍ನ ಸದಸ್ಯರಾಗಿದ್ದು ಅವರ ತಲೆಗೆ ಪೊಲೀಸರು ಎರಡು ಲಕ್ಷ ರೂ.ಗಳ ಬಹುಮಾನ ಪ್ರಕಟಿಸಿದ್ದರು.

ಮಾವೋವಾದಿ ಚಟುವಟಿಕೆಗಳ ಮೇಲೆ ಗಡ್ಚಿರೋಲಿ ಪೊಲೀಸರ ಆಕ್ರಮಣಕಾರಿ ದಮನದಿಂದಾಗಿ ಇಬ್ಬರೂ ಶರಣಾಗಿದ್ದಾರೆ. ತಮ ಸಹೋದ್ಯೋಗಿಗಳ ಬಂಧನದ ನಂತರ ಅವರ ಕುಟುಂಬ ಸದಸ್ಯರು ಶಸಾ್ತ್ರಸ್ತ್ರಗಳನ್ನು ತ್ಯಜಿಸುವಂತೆ ಮನವೊಲಿಸಿದ್ದರು. ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರವು ಘೋಷಿಸಿರುವಂತೆ ನಕ್ಸಲರ ಪುನರ್ವಸತಿಗಾಗಿ ತಲಾ 4.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.

ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ನಿಷೇಧಿತ ಸಿಪಿಐ (ಮಾವೋವಾದಿ) ಯ ಹೆಚ್ಚಿನ ಸಂಖ್ಯೆಯ ಸದಸ್ಯರು ಆಮಿಷಕ್ಕೆ ಒಳಗಾಗುತ್ತಿದ್ದಾರೆ ಮತ್ತು 680 ಸಕ್ರಿಯ ಮಾವೋವಾದಿಗಳು ಇಲ್ಲಿಯವರೆಗೆ ಶರಣಾಗಿದ್ದಾರೆ ಎಂದು ಗಡ್ಚಿರೋಲಿ ಪೊಲೀಸರು ತಿಳಿಸಿದ್ದಾರೆ.

ಈ ವರ್ಷವಷ್ಟೇ 20 ಹಾರ್ಡ್‌ಕೋರ್‌ ಮಾವೋವಾದಿಗಳು ಶರಣಾಗಿದ್ದಾರೆ. ಶರಣಾಗಲು ಮತ್ತು ಮುಖ್ಯವಾಹಿನಿಯ ಸಮಾಜಕ್ಕೆ ಸೇರಲು ಇಚ್ಛಿಸುವವರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಗಡ್ಚಿರೋಲಿ ಪೊಲೀಸ್‌‍ ವರಿಷ್ಠಾಧಿಕಾರಿ ನೀಲೋತ್ಪಾಲ್‌ ಭರವಸೆ ನೀಡಿದ್ದಾರೆ.

RELATED ARTICLES

Latest News