Monday, November 3, 2025
Homeರಾಷ್ಟ್ರೀಯ | Nationalಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕುಲುಮೆಗೆ ಎಸೆದು ಕೊಂದಿದ್ದ ಇಬ್ಬರಿಗೆ ಮರಣದಂಡನೆ ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕುಲುಮೆಗೆ ಎಸೆದು ಕೊಂದಿದ್ದ ಇಬ್ಬರಿಗೆ ಮರಣದಂಡನೆ ಶಿಕ್ಷೆ

ಜೈಪುರ, ಮೇ 20 – ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸಜೀವ ದಹನ ಮಾಡಿದ್ದ ಇಬ್ಬರಿಗೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿದೆ.

ಕಾಲು ಮತ್ತು ಕನ್ಹಾ ಎಂಬ ಅಪರಾಧಿಗಳಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮಹಾವೀರ್‌ ಸಿಂಗ್‌ ಕಿಷ್ನಾವತ್‌ ಹೇಳಿದ್ದಾರೆ.ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಅಪರಾಧಕ್ಕಾಗಿ ಕಾಲು ಮತ್ತು ಕನ್ಹಾ ಅವರನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು ಇಂದು ಶಿಕ್ಷೆ ವಿದಿಸಿದೆ.

“ಕರ್ನಾಟಕದಿಂದ ಯಾರೂ ಪ್ರಧಾನಿ ಹುದ್ದೆಯ ರೇಸ್‌‍ನಲ್ಲಿಲ್ಲ” : ಸಿಎಂ ಸಿದ್ದರಾಮಯ್ಯ
- Advertisement -

ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರದ್ದ ಏಳು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.ಅದರೆ ಖುಲಾಸೆಗೊಳಿಸಿರುವ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಕಿಷ್ಣವತ್‌ ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್‌- 2 ರಂದು ದನ ಮೇಯಿಸಲು ಹೋಗಿದ್ದ 14 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಇಬ್ಬರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಕಲ್ಲಿದ್ದಲು ಕುಲುಮೆಗೆ ಎಸೆದು ಬೀಕರವಾಗಿ ಹತ್ಯೆ ಮಾಡಿದ್ದರು

- Advertisement -
RELATED ARTICLES

Latest News