Friday, December 13, 2024
Homeರಾಷ್ಟ್ರೀಯ | Nationalಡೇಟಾ ನಾಶ, ಫೋನ್ ಕದ್ದಾಲಿಕೆ ಆರೋಪದಲ್ಲಿ ಮತ್ತಿಬ್ಬರು ತೆಲಂಗಾಣ ಪೊಲೀಸರ ಬಂಧನ

ಡೇಟಾ ನಾಶ, ಫೋನ್ ಕದ್ದಾಲಿಕೆ ಆರೋಪದಲ್ಲಿ ಮತ್ತಿಬ್ಬರು ತೆಲಂಗಾಣ ಪೊಲೀಸರ ಬಂಧನ

ಹೈದರಾಬಾದ್, ಮಾ 24 (ಪಿಟಿಐ) -: ಫೋನ್ ಟ್ಯಾಪಿಂಗ್ ಮತ್ತು ಕೆಲವು ಕಂಪ್ಯೂಟರ್ ಸಿಸ್ಟಮ್‍ಗಳು ಮತ್ತು ಅಧಿಕೃತ ಡೇಟಾವನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಮತ್ತಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ, ಹೆಚ್ಚುವರಿ ಡಿಸಿಪಿ ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಎನ್ ಭುಜಂಗ ರಾವ್ ಅವರನ್ನು ಬಂಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಈ ಹಿಂದೆ ಕ್ರಮವಾಗಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ (ಎಸ್‍ಐಬಿ) ಮತ್ತು ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕೆಲಸ ಮಾಡಿದ್ದರು.

ಹಿಂದಿನ ಬಿಆರ್‍ಎಸ್ ಆಡಳಿತದ ಅವಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ ಆರೋಪದಲ್ಲಿ ಹಾಗೂ ಆಪಾದಿತ ಫೋನ್ ಟ್ಯಾಪಿಂಗ್ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ಈ ಹಿಂದೆ ಬಂಸಲ್ಪಟ್ಟಿದ್ದ ಎಸ್‍ಐಬಿಯ ಅಮಾನತುಗೊಂಡ ಡಿಎಸ್‍ಪಿ ಡಿ ಪ್ರಣೀತ್ ರಾವ್ ಅವರೊಂದಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

RELATED ARTICLES

Latest News