ನವದೆಹಲಿ,ಡಿ 29-ಪಶ್ಚಿಮ ದಿಲ್ಲಿಯಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ದರೋಡೆ ಸೇರಿದಂತೆ ಸುಮಾರು 80 ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ಕುಖ್ಯಾತ ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮಾದಿಪುರದಲ್ಲಿ ಇವರಿಬ್ಬರ ಅಡಗಿರುವ ಸುಳಿವಿನ ಮೇರೆಗೆ ಪೊಲೀಸ್ ತಂಡ ಕಾರ್ಯಪ್ರವೃತ್ತರಾಗಿ ಆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ವಿಚಿತ್ರಾ ವೀರ್ ಹೇಳಿದ್ದಾರೆ.
ಮುಂಜಾನೆ ಸುಮಾರು 4:30 ರ ಸುಮಾರಿಗೆ ಆರೋಪಿಗಳು ಕಂಡುಬಂದಿದ್ದು ಅವರನ್ನು ಶರಣಾಗಲು ತಿಳಿಸಿದಾಗ ಪೊಲೀಸರ ಮೇಲೆ ಗುಂಡು ಹಾರಿಸಿದರು, ಕೆಲವು ಪೊಲೀಸ್ ಸಿಬ್ಬಂದಿಯ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಯಾರಿಗೂ ಗಾಯವಾಗಿಲ್ಲ ಎಂದು ಡಿಸಿಪಿ ಹೇಳಿದರು.
ಪೊಲೀಸರು ಪ್ರತಿಯಾಗಿ ಆತರಕ್ಷಣೆಗಾಗಿ ಗುಂಡು ಹಾರಿಸಿದಾಗ ಆರೋಪಿಗಳಿಬ್ಬರ ಕಾಲಿಗೆ ಗುಂಡು ತಾಗಿ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳನ್ನು ದ್ವಾರಕಾ ಜಿಲ್ಲೆಯ ಖ್ಯಾತ ಕ್ರಿಮಿನಲ್ ರೋಹಿತ್ ಕಪೂರ್ ಮತ್ತು ಪಶ್ಚಿಮ ದೆಹಲಿಯ ಖ್ಯಾಲಾದಿಂದ ರೌಡಿ ಶೀಟರ್ ರಿಂಕು ಎಂದು ಗುರುತಿಸಲಾಗಿದೆ.
ಒಟ್ಟಾರೆಯಾಗಿ, ಅವರು ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಸಶಸ್ತ್ರ ದರೋಡೆ ಸೇರಿದಂತೆ ಸುಮಾರು 80 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದರು.