Friday, October 18, 2024
Homeಮನರಂಜನೆಡಿ.22ಕ್ಕೆ ಉಪೇಂದ್ರ ನಿರ್ದೇಶಿಸಿ, ನಟಿಸಿರುವ UI ಚಿತ್ರ ಬಿಡುಗಡೆ

ಡಿ.22ಕ್ಕೆ ಉಪೇಂದ್ರ ನಿರ್ದೇಶಿಸಿ, ನಟಿಸಿರುವ UI ಚಿತ್ರ ಬಿಡುಗಡೆ

U I release for December 22 : Real star Upendra announced

ಬೆಂಗಳೂರು, ಅ.14- ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ `ಯುಐ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಇಂದು (ಅಕ್ಟೋಬರ್ 14) ಉಪ್ಪಿ ಅವರು ಘೋಷಿಸುವ ಮೂಲಕ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ. 2015ರಲ್ಲಿ ಉಪ್ಪಿ 2 ಸಿನಿಮಾ ನಿರ್ದೇಶನದ ನಂತರ ಉಪೇಂದ್ರ ಅವರು ಯುಐ ಚಿತ್ರಕ್ಕೆ ಆ್ಯಕ್ಷನ ಕಟ್ ಹೇಳಿರುವುದರಿಂದ ಅಭಿಮಾನಿ ಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಅಲ್ಲದೆ ಈ ಚಿತ್ರದ ಪೋಸ್ಟರ್ ಡಿಸೈನ್ ಹಾಗೂ ಗೀತೆಗಳು ಕೂಡ ಈಗಾ ಗಲೇ ಸಾಕಷ್ಟು ಸದ್ದು ಮಾಡಿದೆ.

ಯುಐ – ಪ್ಯಾನ್ ಇಂಡಿಯಾ:
ವಿಶ್ವದಾದ್ಯಾಂತ ಅಭಿಮಾನಿಗಳ ಬಳಗ ಹೊಂದಿರುವ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಯುಐ ಚಿತ್ರವು -ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆ ಕಾಣಲಿದೆ.

ಡಿ.20ಕ್ಕೆ ಯುಐ ತೆರೆಗೆ:
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ ಟ್ವಿಟ್ ಮಾಡಿ ಚಿತ್ರದ ಬಿಡುಗಡೆಯ ಕುರಿತು ಸುಳಿವು ನೀಡಿದ್ದು, ಯುಐ ಸಿನಿಮಾ – ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಎಲ್ಲ ಚಿತ್ರರಂಗಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಡಿ.20 ರಂದು ಚಿತ್ರವನ್ನು ಬಿಡುಗಡೆ ಮಾಡು ತ್ತಿದ್ದೇವೆ ಎಂದು ಸುಳಿವು ನೀಡಿದ್ದಾರೆ. ಅಲ್ಲದೆ `ಇಷ್ಟ್ ದಿನ ಸಿನಿಮಾ ನೋಡಿ ನೀವ್ (ಪ್ರೇಕ್ಷಕರು) ಹಿಟ್, -ಪ್ಲಾಪ್ ಅಂತ ಹೇಳುತ್ತಿದ್ದೀರಿ, ಆದರೆ ನೀವು ಈ ಸಿನಿಮಾವನ್ನೊಮ್ಮೆ ನೋಡಿ’ ಎಂದು ಕ್ಯಾಪ್ಷನ್ ನೀಡುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಯುಐಗೆ ಶುಭ ಸೂಚನೆ:
ಉಪೇಂದ್ರ ನಟಿಸಿರುವ ಯುಐ ಚಿತ್ರವು ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿರುವುದು ಚಿತ್ರತಂಡಕ್ಕೆ ಶುಭವಾಗಲಿದ್ದು ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಡಿಸೆಂಬರ್ 20 ರಿಂದ 22ರವರೆಗೆ ವೀಕೆಂಡ್ ಇದ್ದರೆ, ನಂತರ ಕ್ರಿಸ್‌ಮಸ್ ಹಬ್ಬದ ರಜೆ ಬರುವುದರಿಂದ ಪ್ರೇಕ್ಷಕರನ್ನು ಆಕರ್ಷಿಸಲು ನೆರವಾಗಲಿದೆ ಎಂಬುದು ಚಿತ್ರತಂಡದ ಆಶಯ. ಜಿ.ಮನೋಹರ್ ನಿರ್ಮಾ ಣದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಎಚ್.ಸಿ.ವೇಣುಗೋಪಾಲ್ ಛಾಯಾಗ್ರಹಣವಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಉಪೇಂದ್ರ ಒದಗಿಸಿದ್ದಾರೆ.

RELATED ARTICLES

Latest News