Thursday, September 19, 2024
Homeಕ್ರೀಡಾ ಸುದ್ದಿ | Sports0.005 ಸೆಕೆಂಡ್‌ ಅಂತರದಲ್ಲಿ ಚಿನ್ನದ ಪದಕ ಗೆದ್ದ ಅಮೇರಿಕಾ ಅಥ್ಲಿಟ್

0.005 ಸೆಕೆಂಡ್‌ ಅಂತರದಲ್ಲಿ ಚಿನ್ನದ ಪದಕ ಗೆದ್ದ ಅಮೇರಿಕಾ ಅಥ್ಲಿಟ್

ಪ್ಯಾರಿಸ್‌‍, ಆ.5- ಚಿರತೆಯಷ್ಟೇ ವೇಗವಾಗಿ ಓಡುವ ಉಸೇನ್‌ ಬೋಲ್ಟ್ ಅವರ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದ ಅಮೇರಿಕಾದ ನೋವಾ ಲೈಲ್ಸ್ ಪ್ಯಾರಿಸ್‌‍ ಒಲಿಂಪಿಕ್ಸ್ ನ 100 ಮೀಟರ್‌ ಓಟದಲ್ಲಿ 0.005 ಸೆಕೆಂಡ್‌ ಕಡಿಮೆ ಅಂತರದಲ್ಲಿ ಗುರು ಮುಟ್ಟುವ ಮೂಲಕ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.

ಜಮೈಕಾದ ಕಿಸಾನೆ ಥಾಮ್‌ಸನ್‌ ಬೆಳ್ಳಿ ಹಾಗೂ ಅಮೇರಿಕಾದವರೇ ಆದ ಫ್ರೆಡ್‌ ಕ್ರೆಡ್ಲೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಇಟಲಿಯ ಜೋಕಬ್ಸ್ ಲಾಮೊಂಟ್‌ ಮಾರ್ಸೆಲ್‌ 5ನೇ ಸ್ಥಾನಿಯಾಗಿ ಗುರಿ ತಲುಪಿ ನಿರಾಸೆ ಅನುಭವಿಸಿದರು.

2004ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಜಸ್ಟಿನ್‌ ಗಲ್ಟಿನ್‌ ಅವರು ಚಿನ್ನದ ಪದಕ ಗೆದ್ದ ನಂತರ 100 ಮೀಟರ್‌ ಪುರುಷರ ಓಟದಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಅಥ್ಲೀಟ್‌ ಎಂಬ ದಾಖಲೆಯನ್ನು ನೋವಾ ಲೈಲ್ಸ್ ನಿರ್ಮಿಸಿದ್ದಾರೆ.

2024ರ ಪ್ಯಾರಿಸ್‌‍ ಒಲಿಂಪಿಕ್ಸ್ ನ 100 ಮೀಟರ್‌ ಫೈನಲ್ಸ್ ನಲ್ಲಿ ಆರಂಭದಲ್ಲಿ ನಿಧಾನಗತಿಯ ಓಟಕ್ಕೆ ನೋವಾ ಲೈಲ್ಸ್ ಮುಂದಾದರೂ, ನಂತರ ತಮ ಓಟದ ವೇಗವನ್ನು ಹಂತ ಹಂತವಾಗಿ ಹೆಚ್ಚಿಸಿಕೊಂಡು ಸಾಗಿ 9.784 ಸೆಕೆಂಡ್‌ನಲ್ಲೇ ಗೆಲುವಿನ ಗೆರೆ ದಾಟಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರೆ, ಜಮೈಕಾದ ಕಿಸಾನೆ ಥಾಮ್ಸನ್‌ 9.789 ಸೆಕೆಂಡ್‌ನಲ್ಲಿ ಗುರಿ ತಲುಪಿದರೆ, ಅಮೇರಿಕಾದ ಫ್ರೆಡ್‌ ಕೆರ್ಲೆ 9.810 ಸೆಕೆಂಡ್‌ನಲ್ಲಿ ತಮ ಓಟವನ್ನು ಮುಕ್ತಾಯಗೊಳಿಸುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮದಾಗಿಸಿಕೊಂಡರು.

ಅಂತಿಮ ಗುರಿ ತಲುಪಿದ ಮೊದಲ 7 ಅಥ್ಲೀಟ್‌ಗಳ ದೃಶ್ಯವನ್ನು ಕ್ರೀಡಾಂಗಣದಲ್ಲಿ ಅಳವಡಿಸಿದ್ದ ದೊಡ್ಡ ಟಿವಿ ಪರದೆಯ ಮೇಲೆ ಪ್ರದರ್ಶಿಸಿದಾಗ ನೋವಾ ಹಾಗೂ ಕಿಸಾನೆ ನಡುವಿನ ಅಂತರ ಕೇವಲ 0.005 ಸೆಕೆಂಡ್‌ ಇರುವುದನ್ನು ಗಮನಿಸಿದ ಪ್ರೇಕ್ಷಕರು ಮಂತ್ರಮುಗ್ಧರಾದರು.

RELATED ARTICLES

Latest News