Thursday, November 21, 2024
Homeಬೆಂಗಳೂರುಅನಧಿಕೃತ ರಿಫೀಲ್ಲಿಂಗ್ : 8 ಲಕ್ಷ ಮೌಲ್ಯದ 110 ಸಿಲಿಂಡರ್‌ಗಳ ವಶ

ಅನಧಿಕೃತ ರಿಫೀಲ್ಲಿಂಗ್ : 8 ಲಕ್ಷ ಮೌಲ್ಯದ 110 ಸಿಲಿಂಡರ್‌ಗಳ ವಶ

ಬೆಂಗಳೂರು, ಫೆ.13- ಗೃಹಬಳಕೆ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿ ಎಂಟು ಲಕ್ಷ ಮೌಲ್ಯದ 110 ಸಿಲಿಂಡರ್‍ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹ ಬಳಕೆ ಸಿಲಿಂಡರ್ ಏಜೆನ್ಸಿ ಹಾಗೂ ಉಗ್ರಾಣದಲ್ಲಿ ಅಕ್ರಮವಾಗಿ ಗ್ಯಾಸ್ ರಿಫೀಲಿಂಗ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಸಿಲಿಂಡರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ಸಮಯದಲ್ಲಿ ರಾಡ್‍ಗಳ ಮೂಲಕ ಬೇರೆ ಸಿಲಿಂಡರ್‍ಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ಕಂಪೆನಿಗಳ ಲೇಬಲ್‍ಗಳನ್ನು ಸಿಲಿಂಡರ್‍ಗಳಿಗೆ ಅಂಟಿಸಿ ಇವು ಕಂಪೆನಿಗಳ ಅಧಿಕೃತ ಸಿಲಿಂಡರ್‍ಗಳೆಂದು ಸಾರ್ವಜನಿಕರಿಗೆ ನಂಬಿಸಿ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಜನನಿಬಿಡ ಪ್ರದೇಶದಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಗ್ಯಾಸ್ ರಿಫೀಲಿಂಗ್ ಮಾಡುತ್ತಿದ್ದುದ್ದಾಗಿ ತಿಳಿಸಿದ್ದಾನೆ.

ದಾಳಿ ಸಮಯದಲ್ಲಿ ಅಧಿಕೃತ ಕಂಪೆನಿಗಳಾದ ಭಾರತ್ ಹಾಗೂ ಇಂಡಿಯನ್ ಗ್ಯಾಸ್ ಕಂಪೆನಿಗಳ ಸಿಲಿಂಡರ್‍ಗಳನ್ನು ವಶಕ್ಕೆ ಪಡೆದಿದ್ದು, ಇದರಲ್ಲಿ 19 ಕೆಜಿ ತೂಕದ 31 ಹಾಗೂ 14.2 ಕೆಜಿ ತೂಕದ 71 ಸಣ್ಣ ಸಿಲಿಂಡರ್‍ಗಳು ಸೇರಿದಂತೆ ಒಟ್ಟು 110 ಸಿಲಿಂಡರ್ ಹಾಗೂ ರಿಫಿಲ್ಲಿಂಗ್‍ಗೆ ಬಳಸಲಾಗುತ್ತಿದ್ದ ರಾಡ್‍ಗಳು ಮತ್ತು ಎರಡು ಗೂಡ್ಸ್ ಕ್ಯಾಂಟರ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಎನ್‍ಸಿಪಿ ಹೆಸರು, ಚಿಹ್ನೆಗಾಗಿ ಸುಪ್ರೀಂ ಮೊರೆ ಹೋದ ಶರದ್‍ಪವಾರ್


ತಲೆಮರೆಸಿಕೊಂಡಿದ್ದ 10 ರೌಡಿಗಳ ವಿರುದ್ಧ ಕಾನೂನು ಕ್ರಮ
ಬೆಂಗಳೂರು, ಫೆ.13- ನಗರ ಪೊಲಿಸರು ತಲೆ ಮರೆಸಿಕೊಂಡಿರುವ ರೌಡಿಗಳ ಪೈಕಿ 10 ಮಂದಿ ರೌಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ. ರೌಡಿಗಳ ವಿರುದ್ಧ ಮುಂಜಾಗ್ರತಾ ಕ್ರಮದಡಿ ಒಟ್ಟು 115 ಪಿಎಆರ್ ಪ್ರಕರಣಗಳನ್ನು ದಾಖಲಿಸಿ, 229 ಎ ಐಪಿಸಿ ಕಾಯ್ದೆಯಡಿ 5 ಪ್ರಕರಣಗಳನ್ನು ಹಾಗೂ 174 ಎ ಐಪಿಸಿ ಅಡಿಯಲ್ಲಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ.

ನ್ಯಾಯಾಲಯದ ಎಲ್‍ಪಿಆರ್ ಪ್ರಕರಣಗಳಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಪೋಕ್ಸೊ ಪ್ರಕರಣ ಸೇರಿದಂತೆ 13 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿರುವ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಲೆಮರೆಸಿಕೊಂಡಿದ್ದ 9 ಆರೋಪಿಗಳನ್ನು ಪತ್ತೆ ಮಾಡಿ 174ಎ ಐಪಿಸಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 24 ಆರೋಪಿಗಳನ್ನು ಪತ್ತೆ ಮಾಡಿ 229ಎ ಐಪಿಸಿ ಪ್ರಕರಣದಡಿ ಬಂಧಿಸಿ ಕ್ರಮ ಜರುಗಿಸಲಾಗಿರುತ್ತದೆ. ಒಟ್ಟಾರೆ 1308 ಪ್ರಕರಣಗಳು ವಿಚಾರಣೆ ಪೂರೈಸಿ, 762 ಪ್ರಕರಣಗಳು ಶಿಕ್ಷೆಗೆ ಘನ ನ್ಯಾಯಾಲಯವು ಆದೇಶಿಸಿರುತ್ತದೆ.

RELATED ARTICLES

Latest News