Friday, October 11, 2024
Homeರಾಜಕೀಯ | Politicsಸಿಎಂ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ

ಸಿಎಂ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು,ಸೆ.14- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾರ ಜಾಗದಲ್ಲಿ ಮನೆಯನ್ನು ಕಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ 15 ನಿವೇಶನ ಪಡೆದಿರುವುದು ಒಂದು ಭಾಗವಾದರೆ, ದಲಿತರ, ವಿಕಲಚೇತನರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದರು ಎಂದು ಆರೋಪಿಸಿದರು.

ಮಾತೆತ್ತಿದರೆ ತಮದು ತೆರೆದ ಪುಸ್ತಕ ಎನ್ನುವ ಅವರು, ಮನೆ ಕಟ್ಟಿದ್ದ ಜಾಗ ಯಾರದೆಂಬುದನ್ನು ಹೇಳಲಿ. ಸಾಕಮ ಎಂಬುವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಮನೆ ಕಟ್ಟಿದ್ದರು. ಆ ಮನೆ ಮಾರಾಟವಾಗಿದ್ದರೂ ಇದು ಯಾರ ಸ್ವಾಧೀನದಲ್ಲಿದೆ ಎಂಬುದು ಗೊತ್ತಿದೆ, ಈ ಸಂಬಂಧ ದಾಖಲೆಗಳು ತಮ ಬಳಿ ಇವೆ ಎಂದು ಹೇಳಿದರು.

ಆಕ್ರೋಶ : ರೈತರ ಹೆಸರಿನಲ್ಲಿ ಗ್ರಾಹಕರಿಗೆ ಹೊರೆಯಾಗುವಂತೆ ಹಾಲಿನ ದರ ಹೆಚ್ಚಳ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಆದರೆ ವಿವಿಧ ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ಗೆ ಒಂದೂವರೆಯಿಂದ ಎರಡು ರೂಪಾಯಿವರೆಗೂ ಕಡಿಮೆ ಮಾಡಲಾಗಿದೆ. ರೈತರ ಹಿತ ಕಾಪಾಡುವ ಸರ್ಕಾರ ಏಕೆ ರೈತರ ಹಾಲಿನ ಖರೀದಿ ದರವನ್ನು ಕಡಿಮೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿನ ದರ ಏರಿಕೆಯಿಂದ ರೈತರಿಗೂ ಅನುಕೂಲವಿಲ್ಲ. ಗ್ರಾಹಕರಿಗೂ ಲಾಭವಿಲ್ಲ. ಆದರೆ ಸರ್ಕಾರ ಮಾತ್ರ ಹಾಲಿನ ದರ ಏರಿಕೆ ಮಾಡುತ್ತಿದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪ ಅವರು ಪ್ರತಿ ಲೀಟರ್‌ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ನೀಡುವುದನ್ನು ಪ್ರಾರಂಭಿಸಿದರು. ಆನಂತರ 5 ರೂಪಾಯಿಗೆ ಏರಿಕೆಯಾಗಿತ್ತು. ತಾವು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಪ್ರತೀ ಲೀಟರ್‌ಹಾಲಿಗೆ 6 ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿ ಮೈತ್ರಿ ಸರ್ಕಾರವನ್ನೇ ಪತನಗೊಳಿಸಿದರು ಎಂದರು.

ರೈತರ ಸಾಲಮನ್ನಾ ಮಾಡಿದವರು ಯಾರು?, ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಶಕ್ತಿ ತುಂಬಿದರು. ಇಷ್ಟಾದರೂ ರೈತರಿಗೆ ಏನು ಮಾಡಿದ್ದೀರಿ ಎಂದು ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓಲೈಕೆ ರಾಜಕಾರಣದ ಬಗ್ಗೆ ಎಚ್ಚರಿಕೆಯಿಂದ ಇರಿ:
ನಿನ್ನೆ ನಾಗಮಂಗಲಕ್ಕೆ ಭೇಟಿ ನೀಡಿದ್ದು, ಸರ್ವಜನಾಂಗದ ಶಾಂತಿಯ ತೋಟ ನೆಮದಿಯಿಂದ ಇರಬೇಕೆಂಬ ಉದ್ದೇಶದಿಂದಲೇ ಹೊರತು ಬೆಂಕಿ ಹಚ್ಚಲು ಹೋಗಿರಲಿಲ್ಲ. ನಾಗಮಂಗಲದ ಎರಡೂ ಸಮುದಾಯದವರನ್ನು ಭೇಟಿ ಮಾಡಿ ಅವರ ಸಂಕಷ್ಟವನ್ನು ಆಲಿಸಿದ್ದೇನೆ. ಓಲೈಕೆ ರಾಜಕಾರಣ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ.

ನಾಗಮಂಗಲದಲ್ಲಿ ಸ್ಥಳ ಪರಿಶೀಲನೆ ಮಾಡಿ ಆಗಿರುವ ಅನಾಹುತದ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಾಡಿನ ಜನತೆಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ. ನಮದು ಪ್ರಗತಿ ಪರ ರಾಜ್ಯ, ಓಲೈಕೆ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಿ ಎಂದರು.

ನಾನು ಕೇಂದ್ರ ಸಚಿವನಾಗಿರುವುದನ್ನು ಸಹಿಸಲಾಗುತ್ತಿಲ್ಲ. ಕರ್ನಾಟಕಕ್ಕೆ ಬಂದರೆ ಸಹಿವುದಿಲ್ಲ, ಮುಗಿದೇ ಹೋಯಿತು ಎನ್ನುತ್ತಿದ್ದರು. ಅಂತಹ ಸಂದರ್ಭದಲ್ಲೇ ಕೇಂದ್ರ ಸಚಿವನಾಗಿರುವುದು ಅವರಿಗೆ ನೋವು ತಂದಿದೆ. ಇದಕ್ಕೆ ಔಷಧಿಯನ್ನು ಎಲ್ಲಿಂದ ತರಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್‌‍ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ವಾರಕ್ಕೊಮೆ ಬರುವುದು ನಾನು ಗಲಾಟೆ ಮಾಡಿಸುವುದಕ್ಕಲ್ಲ, ಯಾರ್ಯಾರಿಗೆ, ಯಾವ್ಯಾವಾಗ ಧಮ್ಕಿ ಹಾಕಿ ಆಸ್ತಿಗಳನ್ನು ಲೂಟಿ ಮಾಡಿದ್ದಾರೆ, ಅವರ ಹಿನ್ನೆಲೆ ಏನು ಎಂದು ಜಗಜ್ಜಾಹೀರಾಗಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಮಾಗಡಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ, ನಾನೇನು ಮಾಡಿದ್ದೇನೆಂದು ಜನರೇ ಉತ್ತರ ಕೊಡುತ್ತಾರೆ. 2009 ರಿಂದ 2013 ರ ನಡುವೆ ನಡೆದ ಅವ್ಯವಹಾರವನ್ನು ಏಕೆ
ಮುಚ್ಚಿ ಹಾಕಿದರು ಎಂದು ಪ್ರಶ್ನಿಸಿದರು.

RELATED ARTICLES

Latest News