Wednesday, February 26, 2025
Homeರಾಜ್ಯಯುಪಿ ಸರ್ಕಾರ ಕುಂಭಮೇಳದ ಕಲುಷಿತ ನೀರಿನ್ನು ಮಾರಾಟ ಮಾಡುತ್ತಿದೆ : ಪ್ರಿಯಾಂಕ ಖರ್ಗೆ

ಯುಪಿ ಸರ್ಕಾರ ಕುಂಭಮೇಳದ ಕಲುಷಿತ ನೀರಿನ್ನು ಮಾರಾಟ ಮಾಡುತ್ತಿದೆ : ಪ್ರಿಯಾಂಕ ಖರ್ಗೆ

UP government is selling polluted water from Kumbh Mela: Priyanka Kharge

ಬೆಂಗಳೂರು, ಫೆ.26- ಕುಂಭಮೇಳದ ನೀರು ಯೋಗ್ಯವಲ್ಲವೆಂದು ಕೇಂದ್ರ ಸರ್ಕಾರದ ಮಾಲೀನ್ಯ ನಿಯಂತ್ರಣ ಮಂಡಳಿ ವರದಿಯೇ ಹೇಳಿದೆ. ಉತ್ತರ ಪ್ರದೇಶ ಸರ್ಕಾರದ ಸಂಸ್ಥೆಗಳು ಅದನ್ನೇ ಪ್ರತಿಪಾದಿಸುತ್ತಿವೆ. ಆದರೂ ಆ ನೀರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾನದಿಯಲ್ಲಿ ಮನುಷ್ಯ ಹಾಗೂ ಪ್ರಾಣಿಯ ದೇಹಗಳು ತೇಲುವುದರಿಂದ ಕಲುಷಿತಗೊಂಡಿದೆ, ಶೇ.12ರಷ್ಟು ರೋಗಗಳ ಮೂಲವಾಗಿದೆ ಎಂದು ಕುಂಭಮೇಳಕ್ಕೂ ಮೊದಲೇ ವರದಿ ಬಂದಿತ್ತು. ಅದೇ ನೀರನ್ನು ಖಾಸಗಿ ಕಂಪನಿಗಳು ಧರ್ಮದ ಹೆಸರಿನಲ್ಲಿ ಮಾರಾಟ ಮಾಡುತ್ತಿವೆ ಎಂದು ಕಿಡಿಕಾರಿದರು.
ನಮ್ಮ ಸಂಪ್ರದಾಯಗಳನ್ನು ಕಾಪಾಡಬೇಕಿದೆ. ಆದರೆ ಭಕ್ತಿಯ ಹೆಸರಿನಲ್ಲಿ ವಾಣಿಜ್ಯಕರಣ ಮಾಡುತ್ತಿದ್ದಾರೆ.

ಅದಕ್ಕೆ ನನ್ನ ವಿರುದ್ಧ ಇದೆ. ನಿಮ್ಮ ಭಾವಚಿತ್ರ ಕೊಡಿ. ಅದನ್ನು ಕುಂಭಮೇಳದಲ್ಲಿ ಮುಳುಗಿಸುತ್ತೇನೆ. ಅದರಿಂದ ನಿಮ್ಮ ಪಾಪ ಪರಿಹಾರ ಆಗುತ್ತದೆ ಎಂದು ನಂಬಿಸಿ ಹಣ ವಸೂಲಿ ಮಾಡಲಾಗುತ್ತಿದೆ. ಪಾಪ ಪರಿಹಾರಕ್ಕೆ ಯಾವ ದಾರಿಯನ್ನಾದರೂ ಕಂಡುಕೊಳ್ಳಲಿ. ಎಲ್ಲಿಯಾದರೂ ಮುಳಗಲಿ, ಅದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ ಜಲಮೂಲಗಳ ರಕ್ಷಣೆ ನಮ್ಮ ಮೂಲ ಉದ್ದೇಶ ಎಂದರು.

ಮಹಾಕುಂಭಮೇಳ, ತಲಕಾಡು ಮೇಳ ಯಾವುದೇ ಇರಲಿ. ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ನೀರು ಮೂಲದಿಂದ ಬಂದಿದೆ ಎಂದು ನಂಬಿಸಲಾಗುತ್ತಿದೆ. ಅದು ಶುದ್ಧವಾಗಿದೆಯೇ ಎಂದು ಪರೀಕ್ಷೆ ಒಳಪಡಿಸದೆ ಮಾರಾಟ ಮಾಡುವುದು ಸರಿಯಲ್ಲ. ಮನುಕುಲದ ಇತಿಹಾಸ ಆರಂಭವಾಗುವುದೇ ನೀರಿನ ಜೊತೆಗೆ, ಕೃಷಿ, ದೈನಂದಿನ ಜೀವನ ಎಲ್ಲದಕ್ಕೂ ನೀರು ಅತ್ಯಗತ್ಯ. ಅದನ್ನು ಸಂರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು ಗಂಗಾನದಿ ನೀರಿ ಮಾಲೀನ್ಯವಾಗಿದೆ ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳೆರಡಕ್ಕೂ ಗೊತ್ತಿದೆ. ಈ ಹಿಂದೆ ಗಂಗಾ ನಮಾಮಿ ಯೋಜನೆಗೆ 38 ಸಾವಿರ ಕೋಟಿ ಖರ್ಚು ಮಾಡಿದೆ.

ಆ ಬಳಿಕವೂ ಮಾಲೀನ್ಯ ಇರುವ ವರದಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳ ನೀಡಿದೆ ಎಂದರು.ರಾಜ್ಯದಲ್ಲಿ ಕಲುಷಿತ ನೀರಿನ ಪ್ರಕರಣಗಳು ವರದಿಯಾದಾಗ ನನ್ನ ವಿರುದ್ದ ಟೀಕೆ ಮಾಡಲಾಯಿತು. ಜಲಮೂಲಗಳನ್ನು ರಕ್ಷಣೆ ಮಾಡಬೇಕಿದೆ. ಸತ್ಯ ಹೇಳಿದರೆ ಅದನ್ನು ಭಾವನಾತ್ಮಕವಾಗಿ ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ರಾಸಾಯನಿಕ ಹಾಗೂ ಜೈವಿಕ ಮಿಶ್ರಣದಿಂದ ಜಲಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಯಲು ನಮ್ಮ ಸರ್ಕಾರ ಕಳೆದ ನಾಲ್ಕು ತಿಂಗಳ ಹಿಂದೆ ಜಲ ಸಮ್ಮೇಳನ ನಡೆಸಿತ್ತು. ಅದರಲ್ಲಿ 120ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಿದ್ದವು. ಅದರಲ್ಲಿ ಒಳ್ಳೆಯ ಆಲೋಚನೆಗಳನ್ನು ಸರ್ಕಾರ ಅಳವಡಿಸಿಕೊಳ್ಳುತ್ತಿದೆ. ಅಂತರ್ಜಲ ಮಟ್ಟ ಸುಧಾರಣೆಗೆ ಪ್ರಯತ್ನಿಸುತ್ತಿದೆ ಎಂದರು.

ಕಳೆದ ಬಾರಿ ಅಳವಡಿಸಲಾಗಿದ್ದ ನೀರಿನ ಶುದ್ದೀಕರಣ ಘಟಕಗಳನ್ನು ಸುಧಾರಣೆ ಮಾಡಲಾಗುತ್ತಿದೆ. ಅವುಗಳ ನಿರ್ವಹಣೆಗೆ ಯಾರು ಮುಂದೆ ಬರುತ್ತಿಲ್ಲ, ಆ ಸಮಸ್ಯೆಯನ್ನು ಬಗೆ ಹರಿಸಬೇಕಿದೆ. ಪ್ರತಿ ಗ್ರಾಮಕ್ಕೂ ನೀರು ಮತ್ತು ಇಂಧನ ಖಾತ್ರಿ ನೀಡುವುದು ಸರ್ಕಾರದ ಗುರಿಯಾಗಿದೆ ಎಂದರು.ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಅನ್ನು ನಾಲ್ಕನೇ ಹಂತಕ್ಕೆ ಐದು ವರ್ಷ ವಿಸ್ತರಣೆ ಮಾಡಿದೆ. ರಾಜ್ಯದಿಂದ ಹೊಸದಾಗಿ 23 ಪ್ರಸ್ತಾವನೆ ಸಲ್ಲಿಸಿ ಶೇ.50ರಷ್ಟು ಹಣವನ್ನೂ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿ ಹಣ ಬಿಡುಗಡೆ ಮಾಡಿದರೆ ಆ ಯೋಜನೆ ಮುಂದುವರೆಯಲಿದೆ.

ಮೋಹನ ದಾಸ ಪೈ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಅವರು, ಕೀ ಬೋರ್ಡ್ ವಾರಿಯರ್‌ಗಳ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದರು. ಚೆನ್ನೈ, ಮುಂಬೈ ಸೇರಿ ಎಲ್ಲಾ ನಗರಗಳಲ್ಲೂ ಸಮಸ್ಯೆ ಇದೆ. ಆದರೆ ಅಲ್ಲಿನ ಪ್ರಮುಖರು ಬಂಡವಾಳ ಹೂಡಿಕೆಗೆ ಹಾನಿಯಾಗುವಂತೆ ಹೇಳಿಕೆ ನೀಡುವುದಿಲ್ಲ. ನಮ್ಮ ಸರ್ಕಾರ ಸುಧಾರಣಾ ಸಮಿತಿಗಳಿಗೆ ಉದ್ಯಮ ಪ್ರಮುಖರನ್ನು ಸದಸ್ಯರನ್ನಾಗಿ ಮಾಡಿದೆ. ಅವರು ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಬೆಂಗಳೂರಿಗೆ ಐಟಿ-ಬಿಟಿಯವರಿಂದ ಒಳ್ಳೆಯ ಹೆಸರು ಬಂದಿದೆ. ಅದಕ್ಕೆ ಉದ್ಯಮಿಗಳು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಸರ್ಕಾರದ ನೀತಿ ಹಾಗೂ ಕಾರ್ಯಕ್ರಮಗಳು ಕಾರಣ ಎಂಬುದನ್ನು ಮರೆಯಬಾರದು. ಆರಂಭದಲ್ಲೇ ಸರ್ಕಾರ ಐಟಿ ಬಿಟಿಯನ್ನು ಉದಯೋನ್ಮುಖ ಉದ್ಯಮ ಎಂದು ಪರಿಗಣಿಸದೆ, ಒಂದು ವೇಳೆ ತೆರಿಗೆ ಹಾಕಿದ್ದರೆ ಅದು ಬೆಳೆಯಲು ಸಾಧ್ಯವಿತ್ತೆ ?ಎಂದು ಪ್ರಶ್ನಿಸಿದರು.

ಕಾಲಕಾಲಕ್ಕೆ ಎಲ್ಲಾ ಸರ್ಕಾರಗಳು ಮೂಲಸೌಲಭ್ಯ ಸೃಷ್ಟಿ ಸೇರಿದಂತೆ ಅಗತ್ಯ ನೆರವು ನೀಡಿವೆ. ಮೋಹನ್ ದಾಸ್ ಪೈ ರಂತಹ ಕೀ ಬೋರ್ಡ್ ವಾರಿಯರ್ ಗಳು ಸಲಹೆ ನೀಡದೆ ಕನ್ನಡಿಗರನ್ನು ಕರ್ನಾಟಕವನ್ನು ಪದೇ ಪದೇ ಅಪಮಾನ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಮ್ಮಿಂದ ಏನು ತಪ್ಪಾಗಿದೆ.

ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೇ, ಮೇಟ್ರೋಗೆ ಹಣ ಕಡಿಮೆ ಮಾಡಿದ್ದೇವೆಯೇ. ಇವರೆಲ್ಲಾ ಕೇಂದ್ರ ಸರ್ಕಾರದ ವಿರುದ್ದ ಏಕೆ ಮಾತನಾಡುತ್ತಿಲ್ಲ, ತೆರಿಗೆ ಅನ್ಯಾಯದ ಬಗ್ಗೆ ಮೌನವಾಗಿರುವುದೇಕೆ ಎಂದು ಕಿಡಿಕಾರಿದರು.

ತಮ್ಮ ಹೇಳಿಕೆಯಿಂದ ರಾಜ್ಯಕ್ಕೆ ಏನು ನಷ್ಟವಾಗುತ್ತದೆ ಎಂದು ಅರಿವಿದ್ದೂ ಮಾತನಾಡುತ್ತಿದ್ದಾರೆ. ಅವರೇನು ಅನನುಭವಿಗಳಲ್ಲ, ಬಿಜೆಪಿ ಹೈಕಮಾಂಡ್ ಅನ್ನು ಓಲೈಕೆ ಮಾಡುವ ಯತ್ನದಲ್ಲಿ ರಾಜ್ಯದ ಘನತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ತರುತ್ತಿದ್ದಾರೆ. ಕನ್ನಡಿಗರ ಶ್ರಮಕ್ಕೆ ಅಪಮಾನ ಮಾಡುತ್ತಿದ್ದಾರೆ. ಯಾವ ತಟ್ಟೆಯಲ್ಲಿ ತಿನ್ನುತ್ತಿದ್ದೀರೋ ಅದರಲ್ಲೇ ಹೇಸಿಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಸುರಂಗ ಮಾರ್ಗ ಯೋಜನೆಗೆ ಬಿಜೆಪಿ ಅಡ್ಡಿ ಪಡಿಸುವುದನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ, ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆಗಳು ಅವರಿಗೆ ಬೇಕಿಲ್ಲ. ಸ್ಟೀಲ್‌ ಬ್ರಿಡ್ಜ್, ಸುರಂಗ ರಸ್ತೆ ಸೇರಿದಂತೆ ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

RELATED ARTICLES

Latest News