ಬಲ್ಲಿಯಾ (ಯುಪಿ), ಮಾ 25– ವಿವಾಹದಲ್ಲಿ ತೆಗೆದ ವಧುವಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಕ್ಕಾಗಿ ಛಾಯಾಗ್ರಾಹಕನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ಸಹೋದರ ಮತ್ತು ಸೋದರ ಸಂಬಂಧಿಯನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳು ಕಳೆದ ಮಾ. 18 ರ ರಾತ್ರಿ ಚಂದನ್ ಬಿಂದ್ (24) ಎಂಬುವ ಛಾಯಾಗ್ರಾಹಕನನ್ನು ತೋಟಕ್ಕೆ ಕರೆಸಿಕೊಂಡು ಮನಬಂದಂತೆ ಅನೇಕ ಬಾರಿ ಚಾಕುವಿನಿಂದ ಇರಿದು ದೇಹವನ್ನು ಹೊಲದಲ್ಲಿ ಎಸೆದರು.ಐದು ದಿನಗಳ ನಂತರ ಮಾ.23 ರಂದು ಶವ ಪತ್ತೆಯಾಗಿದೆ ನಂತರ ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಯಿತು. ಭಿಂದ್ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂದನ್ ಪ್ರಮುಖ ಆರೋಪಿ ಸುರೇಂದ್ರ ಯಾದವ್ ಅವರ ಸಹೋದರಿಯ ಮದುವೆಯಲ್ಲಿ ಛಾಯಾಚಿತ್ರ ತೆಗೆದಿದ್ದನು ವಧುವನ್ನು ಅತ್ತೆಯ ಮನೆಗೆ ಕಳಿಸುವಾಗ ವಧುವನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನು.ನಂತರ ತನ್ನ ಹಾಗು ವಧುವಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾನೆ. ಇದರಿಂದಾಗಿ ಆಕೆಯ ಅತ್ತೆಯ ಮನೆಯಲ್ಲಿ ಜಗಳವಾಗಿದೆ. ಹೋಳಿ ಹಬ್ಬದಂದು ಸುರೇಂದ್ರ ಚಂದನ್‌ನೊಂದಿಗೆ ಸ್ನೇಹ ಬೆಳೆಸುವಂತೆ ನಟಿಸಿ, ನಂತರ ಬೇರೆಯವರ ಫೋನ್ ಬಳಸಿ ಮಾರ್ಚ್ 18 ರ ರಾತ್ರಿ ಅವನನ್ನು ಕರೆದೊಯ್ದಿದ್ದಾನೆ .
ಅಲ್ಲಿ ಸುರೇಂದ್ರ ಮತ್ತು ಆತನ ಸೋದರ ಸಂಬಂಧಿ ರೋಹಿತ್ ಯಾದವ್ ಹೊಂಚುಹಾಕಿ ಚಾಕುವಿನಿಂದ ಇರಿದು ಹತ್ಯೆಗೈದು ಶವವನ್ನು ಗದ್ದೆಗೆ ಎಸೆದಿದ್ದಾರೆ. ಬಿಹಾರದ ಸರನ್ ಜಿಲ್ಲೆಯ ಸುರೇಂದ್ರ, ಭಗವಾನ್, ಬಾಲಿ ಯಾದವ್, ದೀಪಕ್ ಯಾದವ್, ಮತ್ತು ಮಹಿಳೆಯ ಸೋದರ ಸಂಬಂಧಿ ರೋಹಿತ್ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ.