Sunday, July 27, 2025
Homeರಾಷ್ಟ್ರೀಯ | National13 ದಿನಗಳ ನಂತರ ಸಮಾಧಿಯಿಂದ ಮಹಿಳೆ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆ

13 ದಿನಗಳ ನಂತರ ಸಮಾಧಿಯಿಂದ ಮಹಿಳೆ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆ

UP Woman's grave dug for body after husband accused of murder

ರಾಂಪುರ,ಜು.27-ಶವ ಸಂಸ್ಕಾರದ ನಡೆದ 13 ದಿನಗಳ ನಂತರ ಸಮಾದಿಯಿಂದ ಮಹಿಳೆ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಮುಂದಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಆಕೆಯ ಪತಿಯೇ ಕೊಂದಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದ ನಂತರ, ಸಮಾಧಿ ಮಾಡಿದ 13 ದಿನಗಳ ನಂತರ ಮರಣೋತ್ತರ ಪರೀಕ್ಷೆಗಾಗಿ ಮಹಿಳೆಯ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೌಲಾನಾ ಬಶೀರ್ ಎಂಬುವವರನ್ನು 12 ವರ್ಷಗಳ ಹಿಂದೆ ವಿವಾಹವಾಗಿದ್ದ ಸಲ್ಮಾ ಬೇಗಂ(37) ಎಂಬಾಕೆ ಕಳೆದ ಹದಿನೈದು ದಿನಗಳ ಹಿಂದೆ ರಾಂಪುರದಲ್ಲಿರುವ ಹಳ್ಳಿಯೊಂದರಲ್ಲಿ ಶವವಾಗಿ ಪತ್ತೆಯಾದ್ದಳು.ನಂತರ ಯಾವುದೇ ಮಾಹಿತಿ ನೀಡದೆ ಶವ ಸಂಸ್ಕಾರ ನಡೆಸಲಾಗಿತ್ತು.ಈ ನಡುವೆ ನೆರೆಯ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿರುವ ಸಲ್ಮಾ ಬೇಗಂ ಕುಟುಂಬವು ಪತಿ ಬಶೀರ್ ಮೇಲೆ ಕೊಲೆ ಆರೋಪ ಮಾಡಿದ್ದಾರೆ ಎಂದು ರಾಂಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ರಾಂಪುರ ಮೂಲದ ಬಶೀರ್ ಅವರು ಛತ್ತೀಸ್‌ಗಢದಲ್ಲಿ ವ್ಯವಹಾರವನ್ನು ಹೊಂದಿದ್ದಾರೆ ಮತ್ತು ಮದರಸಾವನ್ನು ಸಹ ನಡೆಸುತ್ತಿದ್ದಾರೆ. ಛತ್ತೀಸ್‌ಗಢದಲ್ಲಿರುವ ಅವರ ಕುಟುಂಬವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿತು, ಅವರು ರಾಂಪುರದಲ್ಲಿರುವ ತಮ್ಮ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು.

ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಪೊಲೀಸರು ಆಕೆಯ ಶವವನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲು ಕಾಯುತ್ತಿದ್ದಾರೆ ಎಂದು ಮಿಶ್ರಾ ಹೇಳಿದರು.

RELATED ARTICLES

Latest News