Thursday, February 13, 2025
Homeಅಂತಾರಾಷ್ಟ್ರೀಯ | Internationalಅಮೆರಿಕದ ಮಿಲಿಟರಿ ವಿಮಾನ ಪತನ, ಪೈಲೆಟ್‌ಗೆ ಗಾಯ

ಅಮೆರಿಕದ ಮಿಲಿಟರಿ ವಿಮಾನ ಪತನ, ಪೈಲೆಟ್‌ಗೆ ಗಾಯ

ಅಲ್ಬುಕರ್ಕ್‌, ಮೇ .29- ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕದ ಮಿಲಿಟರಿ ವಿಮಾನ ಪತನಗೊಂಡು ಪೈಲೆಟ್‌ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ನಂತರ ವಿಮಾನದಲ್ಲಿ ಏಕೈಕ ಪೈಲಟ್‌ ಇದ್ದರು ಅವರು ಹೊರಗೆ ಜಿಗಿದು ಪಾರಾಗಿದ್ದಾರೆ, ಗಂಭೀರವಾದ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಲ್ಬುಕರ್ಕ್‌ನ ಅಗ್ನಿಶಾಮಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಅಲ್ಬುಕರ್ಕ್‌ನ ದಕ್ಷಿಣದ ತುದಿಯಲ್ಲಿ 377ನೇ ಏರ್‌ ಬೇಸ್‌‍ ವಿಂಗ್‌ ಸೇನಾ ನೆಲೆಯಾಗಿದ್ದು ಅಲ್ಲಿನ ವಿಮಾನವೇ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ವಿಮಾನನಿಲ್ದಾಣದ ರಸ್ತೆಯಲ್ಲಿ ಅಪಘಾತ ವಿಮಾನ ತುಂಡು ಕಂಡಿತು ಎಂದು ಅಮೆರಿಕ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ದಕ್ಷಿಣ ಭಾಗದಲ್ಲಿ ಪತನ ಸಂಭವಿಸಿದೆ ಎಂದು ವಕ್ತಾರ ಡಯಾನಾ ಲೋಪೆಜ್‌ ಹೇಳಿದ್ದಾರೆ. ಹತ್ತಿರದ ಕಿರ್ಟ್‌ಲ್ಯಾಂಡ್‌ ಏರ್‌ ಫೋರ್ಸ್‌ ಬೇಸ್‌‍ ಅಪಘಾತದ ತನಿಖೆಯನ್ನು ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು.

ವಿಮಾನ ನೆಲದ ಏತಿ ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು ಈ ವೇಳೆ ದೂಳು ಏೕರುತ್ತಿತ್ತು ಕೆಲವೇಕ್ಷಣದಲ್ಲಿ ಹೊಗೆ ಹಾಗು ಬೆಂಕಿ ಜ್ವಾಲೆ ಕಾಣಿಸಿತು ಎಂದು ಪ್ಯಾರಾಜುಟ್‌ನಲ್ಲಿದ್ದ ವ್ಯಕ್ತಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.ಸದ್ಯ ಪತನದ ವಿಮಾನ ಯಾವುದು ಎಂದು ಮಾಹಿತಿಯನ್ನು ಸೇನೆ ನೀಡಿಲ್ಲ.

RELATED ARTICLES

Latest News