ಚಂಡೀಗಢ,ಫೆ.16- ಸುಮಾರು 116 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ವಿಮಾನವು ತಡರಾತ್ರಿ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ರಾತ್ರಿ 10 ಗಂಟೆಯ ನಿರೀಕ್ಷೆಯ ಸಮಯಕ್ಕೆ ಬದಲಾಗಿ ರಾತ್ರಿ 11.35 ರ ಸುಮಾರಿಗೆ ಅಮೆರಿಕ ಸೇನೆಯ ಸಿ-17 ವಿಮಾನವು ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಫೆ.5 ರ ನಂತರ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮದ ಭಾಗವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಗಡೀಪಾರು ಮಾಡುತ್ತಿರುವ ಭಾರತೀಯರ ಎರಡನೇ ಬ್ಯಾಚ್ ಇದಾಗಿದೆ. ಆದರೆ ಹಿಂದಿನ ಬ್ಯಾಚನಂತೆ ಗಡೀಪಾರು ಮಾಡಿದವರು ಸಂಕೋಲೆಯಲ್ಲಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಹೇಳಿದರು.
ವಲಸೆ ಮತ್ತು ಹಿನ್ನೆಲೆ ಪರಿಶೀಲನೆಯ ನಂತರ, ಪಂಜಾಬ್‌ನಿಂದ ಬಂದವರನ್ನು ಮುಂಜಾನೆ 4.30 ರ ಸುಮಾರಿಗೆ ಪೊಲೀಸ್ ವಾಹನಗಳಲ್ಲಿ ಅವರ ಮನೆಗಳಿಗೆ ಕರೆದೊಯ್ಯಲಾಯಿತು.
ಹರಿಯಾಣ ಸರ್ಕಾರವು ಸಾರಿಗೆ ವ್ಯವಸ್ಥೆಗಳನ್ನು ಸಹ ಮಾಡಿತು. ತಮ್ಮ ಕುಟುಂಬಗಳಿಗೆ ಉತ್ತಮ ಜೀವನಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಲು ಬಯಸಿದ್ದರು. ಆದರೆ ಅವರ ಏಜೆಂಟರಿಂದ ಮೋಸ ಹೋಗಿದ್ದರು. ಅವರನ್ನು ಅಮೆರಿಕದ ಗಡಿಯಲ್ಲಿ ಹಿಡಿದು ಸಂಕೋಲೆಯಲ್ಲಿ ವಾಪಸ್ ಕಳುಹಿಸಿದಾಗ ಅವರ ಕನಸುಗಳು ಭಗ್ನಗೊಂಡವು.
ಗಡೀಪಾರು ಮಾಡಿದ ಹೊಸ ಗುಂಪಿನಲ್ಲಿ, 65 ಜನರು ಪಂಜಾಬ್‌ನವರು, 33 ಜನರು ಹರಿಯಾಣದವರು, 8 ಜನರು ಗುಜರಾತ್ ನವರು, ತಲಾ ಇಬ್ಬರು ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನ.ನಂತರ ತಲಾ ಒಬ್ಬರು ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬಂದವರು. ಮೂಲಗಳ ಪ್ರಕಾರ, ಅವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷ ವಯಸ್ಸಿನವರು.
ಏತನ್ಮಧ್ಯೆ, ಗಡೀಪಾರು ಮಾಡಲಾದ ಎರಡನೇ ಗುಂಪಿನ ಕುಟುಂಬ ಸದಸ್ಯರು ಆಘಾತಕ್ಕೊಳಗಾದ ಸ್ಥಿತಿಯಲ್ಲಿ ಕಾಣಿಸಿಕೊಂಡರು, ಅನೇಕರು ಉಜ್ವಲ ಭವಿಷ್ಯಕ್ಕಾಗಿ ವಿದೇಕ್ಕೆ ಕಳುಹಿಸಲು ಕೃಷಿ ಭೂಮಿ ಮತ್ತು ದನಗಳನ್ನು ಒತ್ತೆ ಇಡುವ ಮೂಲಕ ಹಣವನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ 157 ಗಡೀಪಾರುದವರನ್ನು ಹೊತ್ತಮೂರನೇ ವಿಮಾನ ಇಂದು ಇಳಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.