Friday, November 22, 2024
Homeಅಂತಾರಾಷ್ಟ್ರೀಯ | Internationalತೈವಾನ್‌ ಅಧ್ಯಕ್ಷ ಮೋದಿ ಶುಭಾಷಯ ಕೋರಿದ್ದಕ್ಕೆ ಚೀನಾ ಪ್ರತಿಭಟಿಸುತ್ತಿರುವುದು ಸರಿಯಲ್ಲ ; ಅಮೆರಿಕ

ತೈವಾನ್‌ ಅಧ್ಯಕ್ಷ ಮೋದಿ ಶುಭಾಷಯ ಕೋರಿದ್ದಕ್ಕೆ ಚೀನಾ ಪ್ರತಿಭಟಿಸುತ್ತಿರುವುದು ಸರಿಯಲ್ಲ ; ಅಮೆರಿಕ

ವಾಷಿಂಗ್ಟನ್‌,ಜೂ. 7 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಮತ್ತು ತೈವಾನ್‌ ಅಧ್ಯಕ್ಷ ಲಾಯ್‌ ಚಿಂಗ್‌-ಟೆ ನಡುವಿನ ಶುಭಾಶಯ ವಿನಿಮಯದ ಬಗ್ಗೆ ಚೀನಾದ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಇಬ್ಬರು ವಿದೇಶಿ ನಾಯಕರ ನಡುವಿನ ಇಂತಹ ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಒಂದು ಭಾಗವಾಗಿದೆ ಎಂದು ಹೇಳಿದೆ.

ಇಂತಹ ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಸಾಮಾನ್ಯ ಕೋರ್ಸ್‌ ಎಂದು ನಾನು ಹೇಳುತ್ತೇನೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವ್ಯಾಥ್ಯೂ ಮಿಲ್ಲರ್‌ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದೀಗ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ನಂತರ ತೈವಾನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಎದುರು ನೋಡುತ್ತಿದ್ದೇನೆ ಎಂಬ ಮೋದಿಯವರ ಹೇಳಿಕೆಗೆ ಚೀನಾ ಪ್ರತಿಭಟಿಸುತ್ತಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ತೈವಾನ್‌ ಅಧ್ಯಕ್ಷ ಲೈ ಚಿಂಗ್‌-ಟೆ ಅವರ ಚುನಾವಣಾ ಗೆಲುವಿನ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮೋದಿಯವರು ತೈವಾನ್‌ನೊಂದಿಗಿನ ನಿಕಟ ಸಂಬಂಧ ಮುಂದುವರೆಸುವುದಾಗಿ ಹೇಳಿದ್ದರು.

ಕಳೆದ ತಿಂಗಳು ತೈವಾನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಲೈ ಅವರು ಎಕ್‌್ಸನಲ್ಲಿ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ವಿಜಯಕ್ಕಾಗಿ ನನ್ನ ಪ್ರಾಮಾಣಿಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್‌‍-ಭಾರತದ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ, ಇಂಡೋಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮದ್ಧಿಗೆ ಕೊಡುಗೆ ನೀಡಲು ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ನಮ ಸಹಯೋಗವನ್ನು ವಿಸ್ತರಿಸುತ್ತೇವೆ ಎಂದಿದ್ದರು.

ನಿಮ ಬೆಚ್ಚಗಿನ ಸಂದೇಶಕ್ಕಾಗಿ ಧನ್ಯವಾದಗಳು. ನಾವು ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಪಾಲುದಾರಿಕೆಗಾಗಿ ಕೆಲಸ ಮಾಡುವಾಗ ನಾನು ನಿಕಟ ಸಂಬಂಧಗಳನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಪ್ರತಿಕ್ರಿಯಿಸಿದ್ದರು.

ತೈವಾನ್‌ ಅನ್ನು ಬಂಡುಕೋರ ಪ್ರಾಂತ್ಯವೆಂದು ಪರಿಗಣಿಸಲಾಗಿದೆ ಅದನ್ನು ಮತ್ತೆ ನಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಇಂತಹ ಸಂದರ್ಭದಲ್ಲಿ ಭಾರತ ಮತ್ತು ತೈವಾನ್‌ ನಾಯಕರ ನಡುವಿನ ವಿನಿಮಮಯ ಸರಿಯಲ್ಲ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿತ್ತು.

RELATED ARTICLES

Latest News