Wednesday, July 23, 2025
Homeಬೆಂಗಳೂರುಯುಎಸ್‌‍ಡಿಟಿ ಕರೆನ್ಸಿಗೆ ಪರಿವರ್ತನೆ ಆಮಿಷ : 15 ಮಂದಿ ಸೆರೆ, 1.11 ಕೋಟಿ ರೂ. ನಗದು...

ಯುಎಸ್‌‍ಡಿಟಿ ಕರೆನ್ಸಿಗೆ ಪರಿವರ್ತನೆ ಆಮಿಷ : 15 ಮಂದಿ ಸೆರೆ, 1.11 ಕೋಟಿ ರೂ. ನಗದು ಜಪ್ತಿ

USDT currency conversion scam: 15 arrested, Rs. 1.11 crore cash seized

ಬೆಂಗಳೂರು,ಜು.22- ಯುಎಸ್‌‍ಡಿಟಿ ಡಿಜಿಟಲ್‌ ಕರೆನ್ಸಿಗೆ ಪರಿವರ್ತಿಸಿ ಆರ್‌ಟಿಜಿಎಸ್‌‍ ಮೂಲಕ ಜಿಎಸ್‌‍ಟಿ ಸಮೇತ ದ್ವಿಗುಣಗೊಳಿಸಿ, ಹಣ ಹಿಂದಿರುಗಿಸುವುದಾಗಿ ಶ್ರೀಮಂತರನ್ನು ನಂಬಿಸಿ ಹಣ ತರಿಸಿಕೊಂಡು ಸಹಚರರಿಂದಲೇ ದರೋಡೆ ಮಾಡಿಸಿದಂತೆ ನಟಿಸಿ, 2 ಕೋಟಿ ಹಣ ದೋಚಿದ್ದ 15 ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ನಗದು ಸೇರಿದಂತೆ 1.40 ಕೋಟಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ 1.11 ಕೋಟಿ ರೂ. ನಗದು,ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರ ವಾಹನಗಳು, 2 ಆಟೋಗಳು, 8 ಮೊಬೈಲ್‌ ಫೋನುಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀಮಂತರ ಬಳಿಯಿಂದ ಹಣವನ್ನು ಪಡೆದು ಅದನ್ನು ಯುಎಸ್‌‍ಡಿಟಿ ಡಿಜಿಟಲ್‌ ಕರೆನ್ಸಿಗೆ ಪರಿವರ್ತಿಸಿ, ಆ ಹಣವನ್ನು ಆರ್‌ಟಿಜಿಎಸ್‌‍ ಪ್ರೀಮಿಯಂ ಮೂಲಕ ಜಿಎಸ್‌‍ಟಿ ಸಮೇತ ದ್ವಿಗುಣಗೊಳಿಸಿ ಹಿಂದಿರುಗಿಸುವುದಾಗಿ ನಂಬಿಸಿ, ಹಣ ತರಿಸಿಕೊಳ್ಳುತ್ತಿದ್ದ ಗ್ಯಾಂಗ್‌, ನಂತರ ಆ ಹಣವನ್ನು ಅವರ ಸಹಚರರಿಂದಲೇ ದರೋಡೆ ಮಾಡಿಸಿದಂತೆ ನಟಿಸಿ ಮೋಸದಿಂದ ಹಣ ದೋಚುತ್ತಿತ್ತು.

ಎಂಎಸ್‌‍ ಪಾಳ್ಯ ಸರ್ಕಲ್‌ನಲ್ಲಿರುವ ಮಳಿಗೆಯೊಂದರ ಮಾಲೀಕರಿಂದ 2 ಕೋಟಿ ಹಣ ದರೋಡೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹೆಗಡೆ ನಗರದ ಜಾಮೀಯಾ ಮಸೀದಿ ಬಳಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಮ ಜೊತೆ 17 ಮಂದಿ ಸಹಚರರು ಭಾಗಿಯಾಗಿರುವುದಾಗಿ ಹೇಳಿದ್ದಾರೆ.

ಆರೋಪಿಗಳ ಮಾಹಿತಿಯಂತೆ ತನಿಖೆ ಮುಂದುವರೆಸಿದ ಪೊಲೀಸರು ಬಾಗಲಗುಂಟೆ, ಚಿಕ್ಕಮಗಳೂರು ಜಿಲ್ಲೆಯ ಹಾಲೇನಹಳ್ಳಿ, ಮಂಗಳೂರು, ಅಜೀರ್‌ ಹಾಗೂ ಬೀದರ್‌ನ ಓಲ್‌್ಡ ಸಿಟಿಯಿಂದ 7 ಮಂದಿಯನ್ನು ಬಂಧಿಸಿದ್ದಾರೆ.

ಉಳಿದ ಆರೋಪಿಗಳಿಗಾಗಿ ಮತ್ತೆ ಶೋಧ ಮುಂದುವರೆಸಿದ ಪೊಲೀಸರು ಕೆರೆಗುಡ್ಡದಹಳ್ಳಿ, ಬನ್ನೇರುಘಟ್ಟದ ವಸಂತನಗರ ಮತ್ತು ಕೊಟರಗೆರೆಯ ಲಾಡ್‌್ಜವೊಂದರ ಬಳಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಒಟ್ಟಾರೆ ಈ ಪ್ರಕರಣದಲ್ಲಿ 15 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿ 1.11 ಕೋಟಿ ನಗದು, ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರ ವಾಹನಗಳು, 2 ಆಟೋಗಳು, 8 ಮೊಬೈಲ್‌ ಫೋನುಗಳು ಹಾಗೂ 2 ಚಾಕು, ಲಾಂಗ್‌, ಮಚ್ಚು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 1.40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಹಾಗೂ ಉಳಿದ ಹಣ ಮತ್ತು ಕಾರುಗಳ ಪತ್ತೆಗಾಗಿ ತನಿಖೆ ಪ್ರಗತಿಯಲ್ಲಿದೆ.

ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಶಿವಸ್ವಾಮಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ದೂರುದಾರನೇ ಆರೋಪಿ:ಈ ಪ್ರಕರಣದಲ್ಲಿ ದೂರುದಾರನೇ ಆರೋಪಿ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಈ ಪ್ರಕರಣದ ವಿವರ ನೀಡಿದ ಅವರು, ಆರೋಪಿಗಳು ಎರಡು ತಂಡಗಳನ್ನಾಗಿ ಕೃತ್ಯ ವೆಸಗುತ್ತಿದ್ದರು, ಕೆಆರ್‌ಪುರ, ಬಾಗಲೂರು ವ್ಯಾಪ್ತಿಯಲ್ಲಿ ಈ ರೀತಿಯ ವಂಚನೆ ಮಾಡಿರುವ ಬಗ್ಗೆ ಶಂಕೆ ಇದೆ ಎಂದರು. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಿ, ಉಳಿದ ಹಣವನ್ನು ವಶಪಡಿಸಿಕೊಳ್ಳುವುದಾಗಿ ಅವರು ತಿಳಿಸಿದರು.

RELATED ARTICLES

Latest News