Friday, February 23, 2024
Homeರಾಜ್ಯಕ್ರೈಮ್ ಕಂಟ್ರೋಲ್​ಗೆ ಎಐ ಮತ್ತು ಚಾಟ್‍ಬಾಟ್ ಮೊರೆಹೋದ ಕರ್ನಾಟಕ ಪೊಲೀಸರು

ಕ್ರೈಮ್ ಕಂಟ್ರೋಲ್​ಗೆ ಎಐ ಮತ್ತು ಚಾಟ್‍ಬಾಟ್ ಮೊರೆಹೋದ ಕರ್ನಾಟಕ ಪೊಲೀಸರು

ಬೆಂಗಳೂರು,ಜ.16- ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವಾದ ಆರ್ಟಿಫಿಶಿಯಲ್ ಇಂಟಿಲಿಜೆನ್ಸ್(ಎಐ) ಮಿಷನ್ ಲರ್ನಿಂಗ್(ಎಂಎಲ್) ಮತ್ತು ಚಾಟ್‍ಜಿಪಿಟಿ ತಂತ್ರಜ್ಞಾನ ಚಾಟ್‍ಬಾಟ್ ಸೇವೆಗಳನ್ನು ಬಳಸಿ ಅಪರಾಧ ಚಟುವಟಿಕೆಗಳ ನಿಯಂತ್ರಣ ಮತ್ತು ದತ್ತಾಂಶ ಸಂಗ್ರಹಿಸಲು ಮುಂದಾಗಿದೆ.

ರಾಜ್ಯ ಪೋಲೀಸ್ ಇಲಾಖೆಯು ಗಣಕೀಕರಣಗೊಳಿಸುವಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದ್ದು, ಈಗ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪೊಲೀಸ್ ಐಟಿ ವಿ2 ತಂತ್ರಾಂಶ, ಐಟಿಪಿಎ ಸರಳ ಮೊಬೈಲ್ ಆಪ್, ಪೊಲೀಸ್ ಮಿತ್ರ ಚಾಟ್‍ಬಾಟ್, ಅನುಕಂಪದ ಆಧಾರದ ನೇಮಕಾತಿ ಪೋರ್ಟಲ್, ಕೆಎಸ್‍ಪಿಎಐ, ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಡೇಟಾಥಾನ್-2024 ಮತ್ತು ರಾಜ್ಯಪೊಲೀಸ್ ಹ್ಯಾಕಥಾನ್-2024ನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ನೆರವೇರಿಸಿದರು.

ಪೊಲೀಸ್ ಐಟಿ ವಿ2 ತಂತ್ರಾಂಶ: ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ಣ ಪ್ರಮಾಣದಲ್ಲಿ ತನಿಖಾ ಪ್ರಕ್ರಿಯೆಯನ್ನು ಸಮಗ್ರವಾಗಿ ಕೈಗೊಳ್ಳಲು FIR ನೋಂದಣಿಯಿಂದ ಪ್ರಕರಣದ ವಿಲೇವಾರಿವರೆಗಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತಡೆರಹಿತವಾಗಿ ನಿರ್ವಹಿಸುತ್ತದೆ.

ಐಟಿಪಿಎ ಸರಳ ಮೊಬೈಲ್ ಆಪ್: ಮಾನವ ಕಳ್ಳಸಾಗಾಣಕೆಯು ಆಧುನಿಕ ಯುಗದ ಗುಲಾಮಗಿರಿ ರೂಪಕವಾಗಿದ್ದು, ಇದು ಜನರ ಘನತೆ ಮತ್ತು ಭದ್ರತೆಗೆ ಮಾರಕವಾಗಿದೆ. ಮಾನವ ಕಳ್ಳಸಾಗಾಣಿಕೆಯ ವಿರುದ್ಧದ ಕಾನೂನುಗಳು ನಿರ್ಣಾಯಕವಾಗುತ್ತದೆ. ಅದ್ದರಿಂದ ಅಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳು, ಕಾರ್ಯ ವಿಧಾನಗಳು, ಅನ್ವಯವಾಗುವ ಕಾನೂನುಗಳು ಮತ್ತು ಸಂತ್ರಸ್ತರಿಗೆ ಆಶ್ರಯ ತಂಗುದಾಣಗಳ ಕುರಿತು ಸುಲಭವಾದ ಮಾರ್ಗದರ್ಶನ ನೀಡಲು ಸಹಕಾರಿಯಾಗಿರುತ್ತದೆ.

ಚಾಟ್‍ಬಾಟ್: ನಾಗರೀಕರ ಸಮಕಾಲಿನ ಸಮಸ್ಯೆಗಳಾದ ಸೈಬರ್ ಅಪರಾಧ ಸಂಚಾರ, ಮಹಿಳೆ ಮತ್ತು ಮಕ್ಕಳ ಮೇಲಿನ ಸಮಸ್ಯೆಗಳು ಮತ್ತು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಂಬಂಸಿದಂತೆ ಕೇಳುವ ಪ್ರಶ್ನಾರ್ಥಕ ಅಂಶಗಳಿಗೆ ಉತ್ತರ ನೀಡಲು ಅನುಕೂಲಕರವಾಗುವಂತೆ ಪೊಲೀಸ್ ಮಿತ್ರ ಎಂಬ ಚಾಟ್‍ಬಾಟ್ ಸೇವೆಯನ್ನು ಚಾಟ್‍ಜಿಪಿಐ ತಂತ್ರಜ್ಞಾನದೊಂದಿಗ ಸಂಯೋಜನೆಗೊಳಿಸಿ ಅನುಷ್ಠಾನಪಡಿಸಲಾಗಿದೆ.

ಅನುಕಂಪ ಆಧಾರದ ನೇಮಕಾತಿ ಪೋರ್ಟಲ್: ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅನುಕಂಪತ ನೇಮಕಾತಿಯನ್ನು ನೀಡಲು ಇಲಾಖೆಯು ಬದ್ದವಾಗಿರುತ್ತದೆ.
ಕೆಎಸ್‍ಪಿ.ಎಐ: ಪೊಲೀಸ್ ಇಲಾಖೆಯ ಹೊಸದಾಗಿ ಅನುಷ್ಠಾನಗೊಳಿಸುತ್ತಿರುವ ಕೆಎಸ್‍ಪಿಎಐ ತಂತ್ರಾಂಶವು ಎ1 ಮತ್ತು ಎಂಎಲ್ ತಂತ್ರಜ್ಞಾನಗಳನ್ನು ಬಳಸಿ ಪ್ರಕರಣ ಸಂಕ್ಷಿಪ್ತ ಸಂಗತಿಗಳನ್ನು ಉಪಸಂಗತಿಗಳಾಗಿ ವಿಭಜಿಸುವ, ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳ ಸಿಕೊಳ್ಳುವ ಮೂಲಕ ಪ್ರಕರಣದ ವಿಶ್ಲೇಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತದೆ.

ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ: ಆಧುನಿಕ ಪ್ರಪಂಚದಲ್ಲಿ ಆನ್‍ಲೈನ್ ಹಣಕಾಸು ವಹಿವಾಟುಗಳು ಹೆಚ್ಚುತ್ತಿರುವ ಆರ್ಥಿಕ ಅಪರಾಧಗಳು, ದತ್ತಾಂಶವನ್ನು ವಿಶ್ಲೇಷಿಸಲು ಈ ತಂತ್ರಾಂಶವು ಸಹಕಾರಿಯಾಗುತ್ತದೆ.
ಡೇಟಾಥಾನ್ 2024: ಪೆÇಲೀಸ್ ಇಲಾಖೆಯಲ್ಲಿ ಸಂಗ್ರಹವಾಗಿರುವ ದತ್ತಾಂಶವನ್ನು ಬಳಸಿಕೊಂಡು ಪೊಲೀಸ್ ಡೇಟಾಥಾನ್ ಆಯೋಜಿಸಲಾಗುತ್ತಿದ್ದು, ನೋಂದಣಿ ಕಾರ್ಯ ಇಂದಿನಿಂದ ಪ್ರಾರಂಭ ಮಾಡಲಾಗಿದೆ.
ಈ ದತ್ತಾಂಶವನ್ನು ಬಳಸಿಕೊಂಡು ಡಾಟಾ ಅನಾಲಿಟಿಕ್ಸ್ , ಡಾಟಾ ವಿಸುಲೇಷನ್ ಮತ್ತು ಪ್ರಿಡೆಕ್ಟಿವ್ ಕ್ರೈಂ ಅನಾಲಿಟಿಕ್ಸ್ ಮಾಡಲು ಅನುಕೂಲವಾಗುವಂತೆ ಡೇಟಾಥಾನ್ ಪ್ರಾರಂಭಿಸಲಾಗಿದೆ.
ಪೊಲೀಸ್ ಹ್ಯಾಕಥಾನ್-2024: ಪೊಲೀಸ್ ಇಲಾಖೆಯು ಡಾರ್ಕ್ ವೆಬ್ ಮಾನಿಟರಿಂಗ್, ಕ್ರಿಫ್ಟೋ ಕರೆನ್ಸಿ ಅನಾಲಿಸಿಸ್ ಮತ್ತು ಓಸಿಂಟ್ ಟೂಲ್ ಡೆವೆಲಪ್‍ಮೆಂಟ್ ವಿಷಯಗಳ ಮೇಲೆ ಕರ್ನಾಟಕ ರಾಜ್ಯ ಪೊಲೀಸ್ ಹ್ಯಾಕಥಾನ್ ಆಯೋಜಿಸಲಾಗುತ್ತಿದ್ದು, ಹ್ಯಾಕಥಾನ್‍ನ ನೋಂದಣಿ ಕಾರ್ಯವನ್ನು ಇಂದಿನಿಂದ ಪ್ರಾರಂಭ ಮಾಡಲಾಗಿದೆ.


ಬಾಂಬ್ ಪತ್ತೆಮೊಬೈಲ್ ಲ್ಯಾಬ್‍ಪರಿಶೀಲಿಸಿದ ಸಿಎಂ
ಬೆಂಗಳೂರು, ಜ.16- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೆಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಬಳಿಕ ಪೊಲೀಸ್ ಐಟಿ-ಗಿ2, ಐಟಿಪಿಎ ಸರಳ ಆಪ್, ಪೊಲೀಸ್ ಮಿತ್ರ ಚಾಟ್ ಬಾಟ್, ಸಿಜಿ ನೋಂದಣಿ ಪೋರ್ಟಲ್, ರಾಜ್ಯ ಪೊಲೀಸ್ ಕೃತಕ ಬುದ್ದಿ ಮತ್ತೆ ತಂತ್ರಾಂಶ, ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶಗಳನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಸಂಕ್ಷಿಪ್ತ ಸೈಬರ್ ಅಪರಾಧ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಗೃಹಸಚಿವ ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಉಪಸ್ಥಿತರಿದ್ದರು.


206 ಎಸ್‍ಒಸಿಒಗಳ ನೇಮಕ..
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿಧಿವಿಜ್ಞಾನ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದ 206 ಸೀನ್ ಆಫ್ ಕ್ರೈಮ್ ಆಫೀಸರ್ (ಎಸ್‍ಒಸಿಒ)ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂರಕ್ಷಿಸಿ, ಸಂಗ್ರಹಿಸಿ ವೈಜ್ಞಾನಿಕವಾಗಿ ಪ್ಯಾಕ್ ಮಾಡಲು ಈ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ. ಈಗಾಗಲೇ ಇವರಿಗೆ ಎಫ್‍ಎಸ್‍ಎಲ್, ಎನ್‍ಎಫ್‍ಎಸ್‍ಯು ಗುಜರಾತ್, ಕೆಪಿಎ, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್, ಸಿಐಡಿ, ಫೋರೆನ್ಸಿಕ್ ಮೆಡಿಸನ್ ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ನೀಡಲಾಗಿದ್ದು , ಇವರು ಜಿಲ್ಲೆಗಳ ಡಿಪಿಒ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು , ಕೃತ್ಯ ನಡೆದ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಲು ಸ್ಥಳೀಯ ಪೆÇಲೀಸರಿಗೆ ಸಹಾಯ ನೀಡಲಿದ್ದಾರೆ.

ರಾಜ್ಯದಲ್ಲಿ 13 ಮೊಬೈಲ್ ಫೋರೆನ್ಸಿಕ್ ವಾಹನಗಳಿದ್ದು ವಿಶೇಷವಾಗಿ ಪ್ರಯೋಗಾಲಯದಿಂದ ಪರಿಸರವನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 16 ಬಗೆಯ ಕಿಟ್‍ಗಳು ಕ್ರೈಮ್ ಸೀನ್‍ಗಳಾದ ಕೊಲೆ, ಅತ್ಯಾಚಾರ, ಸ್ಪೋಟ, ಬೆಂಕಿ ಅವಘಡ, ಮಾದಕ ವಸ್ತು ಸೇರಿದಂತೆ ಹಲವು ಪ್ರಕರಣಗಳನ್ನು ಬೇಸಲು ಬಳಸಿಕೊಳ್ಳಲಾಗುತ್ತದೆ.


ಸಿಎಂ ಅವರಿಂದ ಸೈಬರ್ ಹ್ಯಾಕಥಾನ್ ಘೋಷಣೆ
ಬೆಂಗಳೂರು,ಜ.16- ನಗರದಲ್ಲಿಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಬರ್ ಹ್ಯಾಕಥಾನ್‍ನ್ನು ಘೋಷಿಸಿದರು. ಸಿಐಡಿ-ಡಿಕೋಡ್ ಎಂಬ ಶೀರ್ಷಿಕೆಯಡಿ ಹ್ಯಾಕಥಾನ್ ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವಲ್ಲಿ ಸ್ವಯಂಪ್ರೇರಿತವಾಗಿ ತನಿಖಾ ಸಂಸ್ಥೆಗಳ ಸಾಮಥ್ರ್ಯಗಳನ್ನು ವೃದ್ಧಿಗೊಳಿಸುವ ಪ್ರಮುಖ ಉದ್ದೇಶದಿಂದ ಕೂಡಿದೆ. ರಾಜ್ಯದ ಸಿಐಡಿಯವರು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆ-ï ಇಂಡಿಯಾ(ಡಿಎಸ್‍ಸಿಐ), ಇನೋಸಿಸ್ -ಫಂËಂಡೇಷನ್ ಅವರ ಸಹಯೋಗದೊಂದಿಗೆ ಸ್ಥಾಪಿಸಲಾದ ಸೆಂಟರ್ -Áರ್ ಸೈಬರ್ ಕ್ರೈಂ ಟ್ರೈನಿಂಗ್ ಅಂಡ್ ರಿಸರ್ಚ್(ಸಿಸಿಐಟಿಆರ್) ನಿಂದ ಯೋಜಿಸಿ ಕಾರ್ಯಗತಗೊಳಿಸಲಾಗಿದೆ.

ಈ ಕಾರ್ಯಕ್ರಮದ ಅತಿಥೇಯ ಸಂಸ್ಥೆಯಾಗಿ ಪಿಇಎಸ್ ವಿಶ್ವವಿದ್ಯಾಲಯ ಪಾಲುದಾರಿಕೆ ಹೊಂದಿದೆ. 24 ಗಂಟೆಯ ಅವಧಿಗೆ ನಿರ್ಧಿಷ್ಟಪಡಿಸಲಾದ ಹ್ಯಾಕಥಾನ್‍ನಲ್ಲಿ ಡಾರ್ಕ್‍ವೆಬ್ ಮೇಲ್ವಿಚಾರಣೆ ಮತ್ತು ಪತ್ತೆ, ಕ್ರಿಫ್ಟೋ ಕರೆನ್ಸಿಗಳು ಮತ್ತು ಓಪನ್ ಸೋರ್ಸ್ ಇಂಟೆಲೆಜಿನ್ಸ್ ವಿಷಯ ಆಧಾರಿತ ಏಕೀಕೃತ ವೇದಿಕೆಯನ್ನು ಒಳಗೊಂಡಿದೆ.
ತಾಂತ್ರಿಕ ಹಿನ್ನಲೆ ಹೊಂದಿರುವ ವಿದ್ಯಾರ್ಥಿಗಳು ಹ್ಯಾಕಥಾನ್‍ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹ್ಯಾಕಥಾನ್ ಕುರಿತಂತೆ ಹೆಚ್ಚಿನ ಮಾಹಿತಿಯನ್ನು www.cidecode.in ನಲ್ಲಿ ಕಾಣಬಹುದಾಗಿದೆ.


27 ಕೋಟಿ ಮೌಲ್ಯದ ಗಾಂಜಾ-ಮಾದಕ ನಾಶಕ್ಕೆ ಸೂಚನೆ
ಬೆಂಗಳೂರು,ಜ.16- ಸುಮಾರು 27 ಕೋಟಿ ಮೌಲ್ಯದ 4484 ಕೆಜಿ ಗಾಂಜಾ ಹಾಗೂ 23 ಕೆಜಿ ರಾಸಾಯನಿಕ ಮಾದಕ ವಸ್ತುಗಳನ್ನು ಫೆಬ್ರವರಿ ಮೊದಲ ವಾರದಂದು ರಾಜ್ಯಾದ್ಯಂತ ನಾಶಪಡಿಸಬೇಕಾಗಿ ಪೆÇಲೀಸ್ ಇಲಾಖೆಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಕಳೆದ ಆರು ತಿಂಗಳಿನಲ್ಲಿ ರಾಜ್ಯಾದ್ಯಂತ ವಿವಿಧ ಕಡೆ ದಾಳಿ ನಡೆಸಿದ್ದ ಪೆÇಲೀಸರು ಗಾಂಜಾ ಹಾಗೂ ರಾಸಾಯನಿಕ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಈ ಒಂದು ದಿಟ್ಟ ಹೆಜ್ಜೆ ಇಟ್ಟಿದೆ.


ಅತ್ಯಾಧುನಿಕ ಬಾಂಬ್ ನಿಷ್ಕ್ರಿಯ ವಾಹನ ಹಸ್ತಾಂತರ
ಬೆಂಗಳೂರು,ಜ.16-ಬಾಂಬ್ ಪತ್ತೆ ನಿಷ್ಕ್ರಿಯ ಕಾರ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೊಸ ತಂತ್ರಜ್ಞಾನವುಳ್ಳ ಮೂರು ಹೊಸ ಬಸ್‍ಗಳನ್ನು ರಾಜ್ಯ ಗುಪ್ತವಾರ್ತೆ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸ್ತಾಂತರಿಸಿದರು. ಪ್ರಸ್ತುತ ರಾಜ್ಯದ್ಯಂತ 4 ಬಿಡಿಡಿಎಸ್ ಘಟಕಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವುಗಳ ಜೊತೆಗೆ ಈ ಮೂರು ಹೊಸ ಬಸ್‍ಗಳು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ಉಪಕರಣಗಳನ್ನು ಹೊಂದಿದೆ. ಬಾಂಬ್ ಬೆದರಿಕೆ ಅಥವಾ ಸ್ಪೋಟದಂತಹ ಅವಘಡಗಳು ನಡೆದ ಘಟನಾ ಸ್ಥಳಕ್ಕೆ ತ್ವರಿತವಾಗಿ ಕೊಂಡಯ್ಯಲು ಇದರಿಂದ ಸಾಧ್ಯವಾಗುತ್ತದೆ.

RELATED ARTICLES

Latest News