Friday, September 20, 2024
Homeಇದೀಗ ಬಂದ ಸುದ್ದಿಬೂದಿ ಮುಚ್ಚಿದ ಕೆಂಡದಂತಿರುವ ಉತ್ತರಾಖಂಡದ ಬಂಭುಲ್‍ಪುರದಲ್ಲಿ ಬಿಗಿ ಬಂದೋಬಸ್ತ್

ಬೂದಿ ಮುಚ್ಚಿದ ಕೆಂಡದಂತಿರುವ ಉತ್ತರಾಖಂಡದ ಬಂಭುಲ್‍ಪುರದಲ್ಲಿ ಬಿಗಿ ಬಂದೋಬಸ್ತ್

ಡೆಹ್ರಾಡೂನ್,ಫೆ.11- ಕೆಲವು ದಿನಗಳ ಹಿಂದೆ ಜಿಲ್ಲಾಡಳಿತದ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಹಿಂಸಾಚಾರ ಭುಗಿಲೆದ್ದಿದ್ದ ಹಲ್ದ್ವಾನಿಯ ಬಂಭುಲ್‍ಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತರಾಖಂಡ ಸರ್ಕಾರ ನಾಲ್ಕು ಹೆಚ್ಚುವರಿ ಕೇಂದ್ರೀಯ ಅರೆಸೇನಾ ಪಡೆಗಳನ್ನು ಕರೆಸಿಕೊಂಡಿದೆ.

ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಅವರು, ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ನಗರದ ಬನ್‍ಭುಲ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಲಿಕ್ ಕಾ ಬಗಿಚಾದಲ್ಲಿ ಫೆ.8ರಂದು ನಡೆದ ಅತಿಕ್ರಮಣ ಅಭಿಯಾನದ ದೃಷ್ಟಿಯಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ಅರಾಜಕತಾವಾದಿ ಅಂಶಗಳಿಂದ ಮಾಡಲ್ಪಟ್ಟಿದೆ, ಆದ್ದರಿಂದ ಹೆಚ್ಚುವರಿ ಅರೆಸೈನಿಕ ಪಡೆಗಳ 04 ಕಂಪನಿಗಳ ಅವಶ್ಯಕತೆಯಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

“ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಮಕ್ಕಳೇ 2 ದಿನ ಊಟ ಬಿಡಿ” ಎಂದ ಶಾಸಕ

ಗುರುವಾರ ನಡೆದ ಅತಿಕ್ರಮಣ ವಿರೋಧಿ ಅಭಿಯಾನದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದು, ನಂತರ ಈ ಪ್ರದೇಶದಲ್ಲಿ ಕಫ್ರ್ಯೂ ವಿಸಲಾಗಿದೆ. ಹಿರಿಯ ಪೊಲೀಸ್ ಅೀಧಿಕ್ಷಕ (ಎಸ್‍ಎಸ್‍ಪಿ) ನೈನಿತಾಲ್ ಪಿಎನ್ ಮೀನಾ ಅವರು ಮೂರು ಪ್ರಕರಣಗಳನ್ನು ದಾಖಲಿಸಿದ್ದು, 19 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಪ್ರಕರಣಗಳಲ್ಲಿ ಸುಮಾರು 5,000 ಅಪರಿಚಿತರನ್ನು ಹೆಸರಿಸಲಾಗಿದೆ.

ಇದಕ್ಕೂ ಮೊದಲು, ಬನ್‍ಭೂಲ್‍ಪುರದಲ್ಲಿ ಗುರುವಾರ ಹಿಂಸಾಚಾರ ಭುಗಿಲೆದ್ದ ನಂತರ ಗೃಹ ಸಚಿವಾಲಯವು ನಾಲ್ಕು ಕಂಪನಿಗಳ ಅರೆಸೇನಾ ಪಡೆಗಳನ್ನು ನೈನಿತಾಲ್ ಜಿಲ್ಲೆಯ ಹಲ್ದ್ವಾನಿಗೆ ಧಾವಿಸಿವೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಲ್ದ್ವಾನಿಗೆ ಭೇಟಿ ನೀಡಿದ್ದು, ಮಹಿಳಾ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಅತ್ಯಂತ ಖಂಡನೀಯ ಎಂದು ಹೇಳಿz್ದದ್ದಾರೆ. ದೇವಭೂಮಿಯಲ್ಲಿ ಕೆಲವರು ಕಾನೂನನ್ನು ಕೈಗೆತ್ತಿಕೊಂಡು ವಾತಾವರಣ ಹಾಳು ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News