Sunday, June 30, 2024
Homeರಾಜಕೀಯಕಲ್ಪತರು ನಾಡಲ್ಲಿ ಹೊರಗಿನವರು ಗೆಲ್ಲಲ್ಲ ಎಂಬುದನ್ನು ಸುಳ್ಳಾಗಿಸಿದ ವಿ.ಸೋಮಣ್ಣ

ಕಲ್ಪತರು ನಾಡಲ್ಲಿ ಹೊರಗಿನವರು ಗೆಲ್ಲಲ್ಲ ಎಂಬುದನ್ನು ಸುಳ್ಳಾಗಿಸಿದ ವಿ.ಸೋಮಣ್ಣ

ತುಮಕೂರು,ಜೂ.10- ಕಲ್ಪತರು ನಾಡಿಗೆ ಹೊರಗಿನ ಬಂದು ಗೆದ್ದವರಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಅವರು ಅದನ್ನು ಸುಳ್ಳು ಮಾಡಿ ತೋರಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರೂ ತಮ ಛಲ ಬಿಡದೆ ಎದೆಗುಂದದೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾಗಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ತುಮಕೂರಿಗೂ ಹಾಗೂ ಸೋಮಣ್ಣನವರಿಗೂ ಮೊದಲಿನಿಂದಲೂ ಅವಿನಾಭಾವ ಸಂಬಂಧ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ವರಿಷ್ಠರ ತೀರ್ಮಾನದಂತೆ ಕಣಕ್ಕಿಳಿದು ಜಿಲ್ಲೆಯ ಜನರ ಮನಗೆದ್ದಿದ್ದಾರೆ. ಇಲ್ಲಿಯವರೆಗೂ ಕಲ್ಪತರು ನಾಡಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಸೋಮಣ್ಣನವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ಜಿಲ್ಲೆಗೆ ಹೆಮೆಯ ವಿಷಯ.

ಈ ಹಿಂದೆ ಮಲ್ಲಿಕಾರ್ಜುನಯ್ಯ ಅವರು ಡೆಪ್ಯೂಟಿ ಸ್ಪೀಕರ್‌ ಆಗಿದ್ದರು. ಅದಾದ ಬಳಿಕ ಯಾರೊಬ್ಬರಿಗೂ ಕೇಂದ್ರದಲ್ಲಿ ದೊಡ್ಡ ಹುದ್ದೆ ಸಿಕ್ಕಿರಲಿಲ್ಲ. ಆದರೆ ಈಗ ಸೋಮಣ್ಣ ಅವರಿಗೆ ಸಿಕ್ಕಂತಾಗಿದೆ.

ತುಮಕೂರು ಸಾರ್ಟ್‌ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಸೋಮಣ್ಣ ಅವರು ಕೇಂದ್ರ ಸಚಿವರಾಗಿರುವುದರಿಂದ ಕೆಲಸದ ವೇಗ ಮತ್ತಷ್ಟು ಹೆಚ್ಚಲಿದೆ ಎಂಬ ದೊಡ್ಡ ಮಟ್ಟದ ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿದೆ.

ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಇದೀಗ ಅವುಗಳಿಗೆ ಟೇಕ್‌ಆಫ್‌ ಅಗಲಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸಿದರೆ ಜಿಲ್ಲೆಯನ್ನು ಎರಡನೇ ಕಾಶಿ ಮಾಡುತ್ತೇನೆಂದು ಹೇಳಿದ್ದರು. ಇದೀಗ ಕೇಂದ್ರ ಸಚಿವ ಸ್ಥಾನ ಕೂಡ ಸಿಕ್ಕಿದ್ದು ಅವರ ಆಲೋಚನೆಗೆ ದೊಡ್ಡಮಟ್ಟದ ಇಂಬು ಕೊಟ್ಟಂತಾಗಿದೆ.ರಾಜಧಾನಿಗೆ ಉಪನಗರದಂತಿರುವ ತುಮಕೂರು ಚಿತ್ರಣ ಇನ್ನೂ ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆಯಿದೆ.

ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ :
ತುಮಕೂರು ಕ್ಷೇತ್ರದಿಂದ ಸ್ಪರ್ಽಸಿ ಗೆದ್ದು ಕೇಂದ್ರಸಚಿವರಾಗುತ್ತಿರುವ ಕ್ಷಣಗಳನ್ನು ಕಣ್ಣು ತುಂಬಿಕೊಳ್ಳಲು ತುಮಕೂರಿನ ಭದ್ರಮ ಕಲ್ಯಾಣ ಮಂಟಪದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎಲ್‌ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಜೆಡಿಎಸ್‌‍ ಮತ್ತು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

RELATED ARTICLES

Latest News