Monday, June 17, 2024
Homeರಾಜ್ಯವಾಲ್ಮೀಕಿ ಅಭಿವೃದ್ದಿ ನಿಗಮದ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು : ಆರ್‌.ಆಶೋಕ್‌

ವಾಲ್ಮೀಕಿ ಅಭಿವೃದ್ದಿ ನಿಗಮದ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು : ಆರ್‌.ಆಶೋಕ್‌

ಬೆಂಗಳೂರು,ಜೂ.1- ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ಅವ್ಯವಹಾರ ಪ್ರಕರಣವನ್ನು ತಕ್ಷಣವೇ ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ, ದೆಹಲಿಗೂ ಕೊಂಡಯ್ಯುವುದಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಿಕ್‌ ಬ್ಯಾಕ್‌ ಹಣ ದೆಹಲಿವರೆಗೂ ಮುಟ್ಟಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರಲ್ಲಿ ಮುಂದೆ ಕಾಂಗ್ರೆಸ್‌‍ ನ ದೆಹಲಿ ನಾಯಕರ ತಲೆದಂಡವೂ ಆಗಲಿದೆ. ಹೀಗಾಗಿ ಇದನ್ನು ಸರ್ಕಾರ ಅವರನ್ನು ರಕ್ಷಿಸಲು ಎಸ್‌‍ಐಟಿ ಮೂಲಕ ತನಿಖೆಗೆ ಆದೇಶ ನೀಡಿದೆ. ಸಿಬಿಐಗೆ ಕೊಡದಿದ್ದರೆ ದೆಹಲಿವರೆಗೂ ಪ್ರಕರಣ ಕೊಂಡೊಯ್ತುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌‍ ಪಕ್ಷದ ಅಽನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರೆಗೂ ಈ ಹಣ ಹೋಗಿದೆ. ಜೊತೆಗೆ 9 ಐಟಿ ಕಂಪೆನಿಗಳಿಗೆ ದಲಿತರ ಹಣ ವರ್ಗಾವಣೆ ಮಾಡಲಾಗಿದೆ.ದಲಿತರ ಹಣವನ್ನೇ ಲೂಟಿ ಹೊಡೆಯುವಷ್ಟು ಚಂಡಾಳರು ಇವರು. ಈ ಹಣವನ್ನು ಒಬ್ಬರೇ ತಿಂದಿಲ್ಲ, ಎಲ್ಲರಿಗೂ ಪಾಲು ಹೋಗಿದೆ ಎಂದು ದೂರಿದರು.

ವಾಲೀಕಿ ಹಗರಣದ ಸಂಪೂರ್ಣ ದಾಖಲೆಗಳನ್ನು ಕೇಂದ್ರದ ನಮ ನಾಯಕರಿಗೆ ಕಳಿಸಿಕೊಟ್ಟಿದ್ದೇವೆ. ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಎಸ್‌‍ಐಟಿಗೆ ತನಿಖೆ ವಹಿಸಿದ್ದಾರೆ.ಸಿಬಿಐ ತನಿಖೆ ತಪ್ಪಿಸಿಕೊಳ್ಳೋದು ಹೇಗೆ ಎಂದು ಸಿಎಂ, ಡಿಸಿಎಂ, ಸಚಿವರು ಸಭೆಗಳ ಸಭೆ ನಡೆಸುತ್ತಾಲೇ ಇದ್ದಾರೆ. ಸರ್ಕಾರಕ್ಕೆ ಉಂಟಾಗುವ ಮುಜುಗರ ತಪ್ಪಿಸಿಕೊಳ್ಳಲು ಪ್ರಕರಣವನ್ನು ಏನಾದರೂ ಮಾಡಿ ಮುಚ್ಚಿ ಹಾಕಿ ಎಂದು ಸಿಎಂ ಅವರು ಎಸ್‌‍ಐಟಿ ಗೆ ಹೇಳಿದ್ದಾರೆಂದು ನಮಗೆ ಮಾಹಿತಿ ಬಂದಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

187 ಕೋಟಿ ಮೊತ್ತದ ಬ್ರಹಾಂಡ ಅವ್ಯವಹಾರ ಇದು. ಯಾರು ಎಲ್ಲಿಗೆ ಬೇಕಾದರೂ ಸರ್ಕಾರದ ಹಣ ವರ್ಗಾವಣೆ ಮಾಡುವ ಆದೇಶ ಕೊಟ್ಟಿದ್ದಾರಾ ಸಿಎಂ? ಎಂದು ಪ್ರಶ್ನೆಸಿದ ಅಶೋಕ್‌ ಅವರು, ಆರ್ಥಿಕ ಸಚಿವರಾಗಿ ಸಿಎಂ ಅಡಿಯೇ ಈ ಅಕ್ರಮ ನಡೆದಿದೆ. ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ. ಒಬ್ಬರು ಸಿಎಂ, ಇನ್ನೊಬ್ಬರು ಸೂಪರ್‌ ಸಿಎಂ. ನಿಷ್ಟಾವಂತ ಅಧಿಕಾರಿಗಳಿಗೆ ಈ ಸರ್ಕಾರ ಸಾವಿನ ಭಾಗ್ಯ ಕಲ್ಪಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಆರ್ಥಿಕ ಇಲಾಖೆ ಅಡಿಯಲ್ಲೇ ಅಕ್ರಮ ನಡೆದಿದ್ದರೂ ಸಿದ್ದರಾಮಯ್ಯ ಕಣುಚ್ಚಿ ಕೂತಿದ್ದಾರೆ. ಈ ಹಣ ದಲಿತರಿಗೆ ತಲುಪಬೇಕು. ಸಿಎಂ ರಾಜೀನಾಮೆ ಕೊಡಬೇಕು. ಬಿಜೆಪಿ ಇದನ್ನು ಇಲ್ಲಿಗೇ ಬಿಡುವುದಿಲ್ಲ. ಹಣ ವರ್ಗಾವಣೆಯಾಗಿರುವ ಈ ಕಂಪೆನಿಗಳು ಕಾಂಗ್ರೆಸ್‌‍ನ ಹಿಂಬಾಲಕರದ್ದು.

ಕಾಂಗ್ರೆಸ್‌‍ ಮಾಯಾಜಾಲದ ಸ್ವರೂಪ ಬಯಲಾಗಿದೆ. ಅಕ್ರಮ ಆಗಿರುವುದು ನಿಗಮದ ಅಧ್ಯಕ್ಷರಿಗೇ ಗೊತ್ತಿಲ್ಲ. ಇಲಾಖೆ ಸಚಿವರಿಗೆ ಗೊತ್ತಿಲ್ಲ ಎಂದಿದ್ದಾರೆ. ಇಬ್ಬರೂ ಅಧಿಕಾರ ಸ್ವೀಕಾರ ನಂತರ ಅಧಿಕಾರಿಗಳ ಸಭೆ ನಡೆಸಿದರಲ್ಲ, ಆಗ ಯಾಕೆ ಕೇಳಲಿಲ್ಲ? ಸಿಎಂಗೂ ಕೇಳಿದರೆ ಗೊತ್ತಿಲ್ಲ ಅಂತಿದ್ದಾರೆ. ಆದರೆ, ಎಲ್ಲರೂ ಭ್ರಷ್ಟಾಚಾರ ನಡೆದಿದೆ ಎನ್ನುತ್ತಾರೆ. ಅಸಲಿಗೆ ಯಾರ ಮಾತನ್ನು ನಂಬಬೇಕು ಎಂದು ಆಶೋಕ್‌ ಆಶ್ಚರ್ಯ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರು ರಿಸರ್ವ್‌ ಬ್ಯಾಂಕ್‌ ಅ್‌‍ ಇಂಡಿಯಾಗೆ ಪತ್ರ ಬರೆದು ಬ್ಯಾಂಕ್‌ನ ಹಣ ಫ್ರೀಜ್‌ ಮಾಡಿ ಎಂದು ಪತ್ರ ಬರೆದಿದ್ದಾರೆ. ಆದರೆ, ಲಿತಾಂಶ ಶೂನ್ಯ, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ.
ದಲಿತರ ಹಣ ನುಂಗಿ ಹಾಕುವ ಕಪ್ಪು ಚುಕ್ಕೆ ಸರ್ಕಾರಕ್ಕೆ ಅಂಟಿದೆ. ಸರ್ಕಾರದ ಮೇಲಿನ ಈ ಕಳಂಕ ನಿರ್ಮಾ ಹಾಕಿದರೂ ಹೋಗುವುದಿಲ್ಲ, ರ್ಸ್‌ ಎಕ್ಸೆಲ್‌ ಹಾಕಿದರೂ ಹೋಗುವುದಿಲ್ಲ ಎಂದು ಕುಹಕವಾಡಿದರು.

ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಮಹಿಳೆಯರ ಖಾತೆಗೆ ಟಕಾ ಟಕ್‌ ಹಣ ಹಾಕುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ದಲಿತರ ಹಣವನ್ನು ಖಾಸಗಿ ಕಂಪೆನಿಗಳಿಗೆ ಟಕಾ ಟಕ್‌ ಎಂದು ವರ್ಗಾವಣೆ ಮಾಡಿದ್ದಾರೆ. ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದಕ್ಕೆ ಸ್ಪಷ್ಟ ದಾಖಲೆಗಳು ಇವೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಸಚಿವರ ವಿರುದ್ಧ ಕ್ರಮಕ್ಕೆ ಇನ್ನು ಏನು ಬೇಕು? ಏತಕ್ಕಾಗಿ ಸರ್ಕಾರ ಕಾಯುತ್ತಿದೆ? ಎಂದು ಪ್ರಶ್ನೆ ಮಾಡಿದರು. ನಾನು ಶುಕ್ರವಾರ ಆತಹತ್ಯೆ ಮಾಡಿಕೊಂಡ ಚಂದ್ರಶೇಖರನ್‌ ಮನೆಗೆ ಭೇಟಿ ಕೊಟ್ಟ್ದೆಿ. ಅವರ ಪತ್ನಿ ಬೇಡಿಕೆ ಒಂದೇ, ಮಾಡದಿರುವ ತಪ್ಪಿಗೆ ಜೀವ ಕಳೆದುಕೊಂಡಿದ್ದಾರೆ. ಮಾಡದಿರುವ ತಪ್ಪಿಗೆ ರಾಜ್ಯ ಸರ್ಕಾರ ನಮನ್ನು ದೂಡಿದೆ. ಕೋವಿಡ್‌ ನಲ್ಲಿ ಮಾಡಿದ ಸಾಲವನ್ನು ಇದುವರೆಗೆ ನಾವು ತೀರಿಸಿಲ್ಲ ಎಂದು ನೋವನ್ನು ಹೊರಹಾಕಿದ್ದಾರೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಎಂದು ಆಶೋಕ್‌ ವಾಗ್ದಳಿ ನಡೆಸಿದರು.

RELATED ARTICLES

Latest News