Thursday, December 12, 2024
Homeಮನರಂಜನೆಆಸ್ಪತ್ರೆಗೆ ದಾಖಲಾದ ನಟಿ ಕಾಜೋಲ್ ತಾಯಿ ತನುಜಾ

ಆಸ್ಪತ್ರೆಗೆ ದಾಖಲಾದ ನಟಿ ಕಾಜೋಲ್ ತಾಯಿ ತನುಜಾ

ಮುಂಬೈ,ಡಿ.18-ಹಿಂದಿ ಚಿತ್ರರಂಗದ ಖ್ಯಾತ ನಟಿ ಕಾಜೋಲ್ ಅವರ ತಾಯಿಯಾಗಿರುವ ಖ್ಯಾತ ಹಿರಿಯ ನಟಿ ತನುಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಬತ್ತು ವರ್ಷದ ತನುಜಾ ಅವರನ್ನು ವಯೋಸಹಜ ಸಮಸ್ಯೆಯಿಂದಾಗಿ ನಿನ್ನೆ ಇಲ್ಲಿನ ಜುಹು ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅವರು ನಿಗಾದಲ್ಲಿದ್ದಾರೆ. ಆರೋಗ್ಯ ಚೆನ್ನಾಗಿಯೇ ಇದೆ ಚಿಂತೆ ಮಾಡಲು ಏನೂ ಇಲ್ಲ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಹಲವಾರು ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ನಟಿಸಿರುವ ತನುಜಾ ಅವರು, ಹಿಂದಿನ ತಾರೆ ಶೋಭನಾ ಸಮರ್ಥ್ ಮತ್ತು ನಿರ್ಮಾಪಕ ಕುಮಾರ್ ಸೇನ್ ಸಮರ್ಥ್ ಅವರ ಪುತ್ರಿ. ಅವರು ನೂತನ್ ಅವರ ಸಹೋದರಿ ಮತ್ತು ಜನಪ್ರಿಯ ತಾರೆ ಕಾಜೋಲ್ ಅವರ ತಾಯಿ.

ಉಗ್ರರು ಅಪಹರಿಸಿದ್ದ ಯುವಕರ ರಕ್ಷಣೆ

ತನುಜಾ ಬಹರೇನ್ ಫಿರ್ ಭಿ ಆಯೆಂಗಿ, ಜ್ಯುವೆಲ್ ಥೀಫ್ ಹಾಥಿ ಮೇರೆ ಸಾಥಿ ಮತ್ತು ಮೇರೆ ಜೀವನ ಸಾಥಿ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

RELATED ARTICLES

Latest News