Saturday, April 5, 2025
Homeಮನರಂಜನೆಬಾಲಿವುಡ್ ಕ್ರಾಂತಿಕಾರಿ ನಟ ಮನೋಜ್ ಕುಮಾ‌ರ್ ಇನ್ನಿಲ್ಲ

ಬಾಲಿವುಡ್ ಕ್ರಾಂತಿಕಾರಿ ನಟ ಮನೋಜ್ ಕುಮಾ‌ರ್ ಇನ್ನಿಲ್ಲ

Veteran Bollywood Actor Dies At 87 In Mumbai

ಮುಂಬೈ, ಏ.4- ದೇಶಭಕ್ತಿ ಚಿತ್ರಗಳನ್ನು ನಿರ್ದೇಶಿಸಿ, ನಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರತ್ ಕುಮಾರ್ ಎಂದೇ ಪ್ರಸಿದ್ದರಾಗಿದ್ದ ಬಾಲಿವುಡ್ ಹಿರಿಯ ನಟ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ ಅವರು ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಹಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮನೋಜ್ ಕುಮಾರ್ (87) ಮುಂಬೈನ ಕೋಕಿಲಾ ಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಮನೋಜ್ ಕುಮಾರ್ ಅವರ ನಿವಾಸದಲ್ಲಿ ಇಂದು ಪಾಥೀರ್ಘವ ಶರೀರದ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿಗಳು ಹಾಗೂ ಬಾಲಿವುಡ್ ನ ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ದರ್ಶನ ಪಡೆಯಲಿದ್ದು, ಅಗಲಿದ ನಟನಿಗೆ ಕಂಬನಿ ಮಿಡಿದಿದ್ದಾರೆ. ಮನೋಜ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ನಾಳೆ ಮಧ್ಯಾಹ್ನ 12ಕ್ಕ ಪವನ್ ಹನ್ಸ್ ನಲ್ಲಿ ನೆರವೇರಿಸಲಾಗುವುದು ಎಂದು ಪುತ್ರ ಕುನಾಲ್ ಗೋಸ್ವಾಮಿ ತಿಳಿಸಿದ್ದಾರೆ.

ಚಿತ್ರರಂಗದ ನಂಟು:
ಮನೋಜ್ ಕುಮಾರ್ ಅವರು 1937 ರಲ್ಲಿ ಈಗಿನ ಪಾಕಿಸ್ತಾನದ ಅಬ್ಬೋತ ಬಾದ್ ನಲ್ಲಿ ಪಂಜಾಬಿ ಹಿಂದೂ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು. ಹರಿಕೃಷ್ಣ ಗೋಸ್ವಾಮಿ (ಮನೋಜ್ ಕುಮಾರ್) ತಮ್ಮ 10ನೇ ವರ್ಷದಲ್ಲಿ ತಮ್ಮ ಪೋಷಕರೊಂದಿಗೆ ನವದೆಹಲಿಗೆ ಬಂದು ನೆಲೆಸಿದರು.1957 ರಿಂದ 1997 ವರೆಗೂ ಬಾಲಿವುಡ್ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಗೀತರಚನಕಾರರಾಗಿ ಗುರುತಿಸಿಕೊಂಡಿದ್ದರು.

ದೇಶಭಕ್ತಿ ಸಿನಿಮಾಗಳ ಪ್ರೇಮಿ:
ಮನೋಜ್ ಕುಮಾರ್ ಅವರು ತಮ್ಮ ಅಭಿನಯದ ಸಿನಿಮಾಗಳಲ್ಲಿ ದೇಶಭಕ್ತಿ ಮೂಡಿಸುವಂತಹ ಕಥೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದರಿಂದ ಅವರನ್ನು ಇಂಡಸ್ಟ್ರಿಯವರು ಪ್ರೀತಿಯಿಂದ ಭಾರತ್ ಕುಮಾರ್ ಎಂದೇ ಕರೆಯುತ್ತಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಉಪಕಾರ್ (1968) ಸಿನಿಮಾಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಪೂರವ್ ಔರ್ ಪಶ್ಚಿಮ್, ಶೋರ್, ಕ್ರಾಂತಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು.

ನಟನೆಯ ನಂಟು:
ಬಾಲ್ಯದಿಂದಲೂ ಬಣ್ಣದ ಲೋಕದ ನಂಟು ಇಟ್ಟುಕೊಂಡಿದ್ದ ಮನೋಜ್ ಕುಮಾರ್ ಅವರು ಫ್ಯಾಷನ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ನಟನ ವೃತ್ತಿ ಆರಂಭಿಸಿದರು. ಉಪಕಾರ್, ಆಫ್ರಿ, ಶೋರ್, ರೋಟಿ ಕಪಡಾ ಔರ್ ಮಕಾನ್, ಕ್ರಾಂತಿ, ಸನ್ಯಾಸಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗಮನಾರ್ಹ ಅಭಿನಯದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ನೆನಪು ಮೂಡಿಸಿದ್ದಾರೆ. 1995 ರಲ್ಲಿ ಬಿಡುಗಡೆಗೊಂಡ ಮೈದಾನ್ -ಇ- ಜಂಗ್ ಸಿನಿಮಾದಲ್ಲಿ ಮನೋಜ್ ಕುಮಾರ್ ಅಂತಿಮವಾಗಿ ನಟಿಸಿದ್ದರು.

ಸಂದ ಪ್ರಶಸ್ತಿಗಳು:
ಮನೋಜ್ ಕುಮಾರ್ ಅವರು ಚಿತ್ರರಂಗದಲ್ಲಿ ಸಲ್ಲಿಸಿದ ಆಮೋಘ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ 1992ರಲ್ಲಿ ಅವರಿಗೆ ಪದ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ 1968ರಲ್ಲಿ ತಮ್ಮ ಚೊಚ್ಚಲ ನಿರ್ದೇಶನದ ಉಪಕಾರ್ ಚಿತ್ರಕ್ಕಾಗಿ ಎರಡನೇ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ, 2016ರಲ್ಲಿ ಚಿತ್ರರಂಗದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಕೂಡ ಪಾತ್ರರಾಗಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ನೀಡುವ ಕಿಶೋರ್ ಕುಮಾರ್ ಪ್ರಶಸ್ತಿ (2008), ರಾಜ್‌ ಕಪೂರ್‌ ಪ್ರಶಸ್ತಿ (2010) ಅಲ್ಲದೆ 7ಬಾರಿ ಫಿಲಂಫೇರ್ ಪ್ರಶಸ್ತಿ, ಉಪಕಾರ್ ಸಿನಿಮಾದ ಅತ್ಯುತ್ತಮ ಸಂಭಾಷಣೆಗಾಗಿ ಬಿಎಫ್‌ಜೆಎ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮನೋಜ್ ಕುಮಾ‌ರ್ ಅವರಿಗೆ ಸಂದಿವೆ.

RELATED ARTICLES

Latest News