Tuesday, October 8, 2024
Homeಮನರಂಜನೆಟಿಕೆಟ್ ಬುಕಿಂಗ್‌ನಲ್ಲಿ ಸಂಚಲನ ಸೃಷ್ಟಿಸಿದ ರಜನಿ ಚಿತ್ರ

ಟಿಕೆಟ್ ಬುಕಿಂಗ್‌ನಲ್ಲಿ ಸಂಚಲನ ಸೃಷ್ಟಿಸಿದ ರಜನಿ ಚಿತ್ರ

Vettaiyan Advance Bookings Open: Rajinikanth, Amitabh Bachchan Setting Record Trend

ಬೆಂಗಳೂರು, ಅ.8- ಬಿಡುಗಡೆಗೂ ಮುನ್ನವೇ ರಜನಿಕಾಂತ್ ಅಭಿನಯದ ವೆಟ್ಟೆಯನ್ ಚಿತ್ರ ಸಂಚಲನ ಸೃಷ್ಟಿಸಿದೆ.ವೆಟ್ಟೈಯನ್ ಚಿತ್ರದ ಟಿಕೆಟ್ಗಳಿಗಾಗಿ ಜನರು ಮುಗಿಬಿದ್ದಿದ್ದು ಬೆಂಗಳೂರು ಮತ್ತು ಚೆನ್ನೆ ಮತ್ತಿತರ ನಗರಗಳಲ್ಲಿ ಆನ್ಲೈನ್ ಮೂಲಕ ತಮ್ಮ ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ.

ನಿನ್ನೆ ಒಂದೇ ದಿನ ದೇಶದಾದ್ಯಂತ 1.60 ಲಕ್ಷಕ್ಕೂ ಹೆಚ್ಚು ಟಿಕಟ್ ಕಾಯ್ದಿರಿಸಲಾಗಿದೆಯಂತೆ. ಚೆನ್ನೆ ಮತ್ತು ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ 750 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ.

ದೇಶದಾದ್ಯಂತ ಈಗಾಗಲೇ ಸುಮಾರು 3.5 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು ಅದರಾಚೆಯೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 6.5 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಟಿಕೆಟ್ ಮಾರಾಟ ಮಾಡಲಾಗಿದೆ.

ತಮಿಳುನಾಡಿನಲ್ಲಿ 2.51 ಕೋಟಿ ರೂ.ಮೌಲ್ಯದ ಟಿಕೆಟ್ ಮಾರಾಟವಾಗಿದ್ದರೆ, ಕರ್ನಾಟಕದಲ್ಲಿ 2.27 ಕೋಟಿ ರೂ.ಗಳಷ್ಟು ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

ಲೈಕಾ ಪ್ರೊಡಕ್ಷನ್ ನಿರ್ಮಾಣದ 30 ನೇ ಚಿತ್ರವಾಗಿರುವ ವೆಟ್ಟೈಯನ್ ಒಂದು ಸಾಹಸಮಯ ಚಿತ್ರವಾಗಿದ್ದು, ಚಿತ್ರದಲ್ಲಿ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್, – ಫಹಾದ್ ಫಾಸಿಲ್ , ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರಾ ವಿಜಯನ್ ಮತ್ತು ಅಭಿರಾಮಿ ಸೇರಿದಂತೆ ಬೃಹತ್ ತಾರಾ ಬಳಗವಿದೆ.

RELATED ARTICLES

Latest News