Monday, July 8, 2024
Homeಕ್ರೀಡಾ ಸುದ್ದಿಮುಂಬೈ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ವಿರಾಟ್‌ಕೊಹ್ಲಿ

ಮುಂಬೈ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ವಿರಾಟ್‌ಕೊಹ್ಲಿ

ಮುಂಬೈ, ಜು.5– ವಿಶ್ವಕಪ್‌ ಸಂಭ್ರಮಾಚರಣೆ ವೇಳೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಮುಂಬೈ ಪೊಲೀಸರಿಗೆ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಮಿಕೊಂಡಿದ್ದ ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ರೋಡ್‌ ಶೋ ಮೂಲಕ ವಿಶ್ವ ಚಾಂಪಿಯನ್‌ರಿಗೆ ಅದ್ದೂರಿ ಸ್ವಾಗತ ಕೋರಿದ್ದರು.

ತಮ ಮೆಚ್ಚಿನ ಕ್ರಿಕೆಟಿಗರನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿ ಯಲ್ಲಿ ನೆರೆದಿದ್ದ ಸಾರ್ವಜನಿಕರಿಂದ ಯಾವುದೇ ತೊಂದರೆ ಆಗದಂತೆ ಮುಂಬೈ ಪೊಲೀಸರು ಬಿಗಿ ಪೊಲೀಸ್‌‍ ಬಂದೋಬಸ್ತ್‌ ಏರ್ಪಡಿಸಿ ದ್ದರು. ಈ ವ್ಯವಸ್ಥೆಯನ್ನು ಕೊಹ್ಲಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

RELATED ARTICLES

Latest News