Sunday, December 1, 2024
Homeಕ್ರೀಡಾ ಸುದ್ದಿ | Sportsಇತಿಹಾಸ ಸೃಷ್ಟಿಸಲು ಹೊರಟ ವಿರಾಟ್‌ ಕೊಹ್ಲಿ

ಇತಿಹಾಸ ಸೃಷ್ಟಿಸಲು ಹೊರಟ ವಿರಾಟ್‌ ಕೊಹ್ಲಿ

ಬೆಂಗಳೂರು,ಮೇ 22- ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ತಮ್ಮ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಂಡಿರುವ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿ ನಿಂತಿದ್ದಾರೆ.

ಅಹಮದಾಬಾದ್‌ನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್‌್ಸ ವಿರುದ್ಧ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ 29 ರನ್‌ಗಳನ್ನು ಗಳಿಸಿದರೆ ಐಪಿಎಲ್‌ ಇತಿಹಾಸದಲ್ಲಿ 8000 ರನ್‌ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ವಿಶ್ವದ ಅತ್ಯಂತ ಟಿ20 ಐಷಾರಾಮಿ ಲೀಗ್‌ನಲ್ಲಿ ವಿರಾಟ್‌ ಕೊಹ್ಲಿ ಇದುವರೆಗೂ 243 ಇನಿಂಗ್ಸ್ ನಿಂದ 8 ಶತಕ ಹಾಗೂ 55 ಅರ್ಧಶತಕಗಳ ನೆರವಿನಿಂದ 7971 ರನ್‌ ಗಳಿಸುವ ಮೂಲಕ ಟಾಪ್‌ ಸ್ಕೋರ್‌ ಆಗಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌:
*7971 ರನ್‌- ವಿರಾಟ್‌ ಕೊಹ್ಲಿ
*6769 ರನ್‌- ಶಿಖರ್‌ಧವನ್‌- 221 ಇನಿಂಗ್ಸ್ – 2 ಶತಕ, 51 ಅರ್ಧಶತಕ
*6628 ರನ್‌- ರೋಹಿತ್‌ ಶರ್ಮಾ- 252 ಇನಿಂಗ್ಸ್ – 2 ಶತಕ, 43 ಅರ್ಧಶತಕ
*6565 ರನ್‌- ಡೇವಿಡ್‌ ವಾರ್ನರ್‌- 184 ಇನಿಂಗ್ಸ್ – 4 ಶತಕ, 65 ಅರ್ಧಶತಕ
*5528 ರನ್‌- ಸುರೇಶ್‌ ರೈನಾ- 200 ಇನಿಂಗ್ಸ್ – 1 ಶತಕ. 39 ಅರ್ಧಶತಕ.

RELATED ARTICLES

Latest News