Saturday, July 13, 2024
Homeಕ್ರೀಡಾ ಸುದ್ದಿಅಭ್ಯಾಸದ ವೇಳೆ ಅಭಿಮಾನಿಗಳ ಮನಗೆದ್ದ ಕೊಹ್ಲಿ

ಅಭ್ಯಾಸದ ವೇಳೆ ಅಭಿಮಾನಿಗಳ ಮನಗೆದ್ದ ಕೊಹ್ಲಿ

ಪುಣೆ, ಅ.18- ಅಭಿಮಾನಿಗಳ ಆಟಗಾರರಾಗಿರುವ ವಿರಾಟ್ ಕೊಹ್ಲಿ ಅವರು ಈಗ ಮತ್ತೊಮ್ಮೆ ಅವರ ಆಸೆಯನ್ನು ಈಡೇರಿಸುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‍ನಲ್ಲಿರುವ ವಿರಾಟ್ ಕೊಹ್ಲಿ ಅವರು ನಾಳೆ (ಅ.19) ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಪಂದ್ಯಕ್ಕಾಗಿ ನೆಟ್ಸ್‍ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ.

ವಿರಾಟ್ ಕೊಹ್ಲಿ ಅವರು ನೆಟ್ಸ್‍ನಲ್ಲಿ ಅಭ್ಯಾಸ ನಡೆಸುತ್ತಿರುವ ದೃಶ್ಯವನ್ನು ಕಂಡ ಅಭಿಮಾನಿಗಳು ಕಿಂಗ್ ಕೊಹ್ಲಿಯ ಹೆಸರನ್ನು ಮೈದಾನದಲ್ಲಿ ನೆರದಿದ್ದ ಅಭಿಮಾನಿಗಳು ಕೂಗಿದ್ದಾರೆ. ಆಗ ಅವರ ಬಳಿ ತೆರಳಿದ ವಿರಾಟ್ ಕೊಹ್ಲಿ ಅವರು ಅಭಿಮಾನಿಗಳೊಂದಿಗೆ ಸ್ವಲ್ಪ ಕಾಲ ಕಳೆದು ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದರ ಜೊತೆಗೆ ಹಸ್ತಾಕ್ಷರ ನೀಡಿ ಅವರ ಮನಸ್ಸನ್ನು ಗೆದ್ದಿದ್ದಾರೆ. ಈ ದೃಶ್ಯವು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಇಂಧನವಿಲ್ಲದ ಕಾರಣ 48 ವಿಮಾನ ಹಾರಾಟ ರದ್ದು ಮಾಡಿದ ಪಾಕಿಸ್ತಾನ

ಧರ್ಮಶಾಲಾ ಹಾಗೂ ಬಾಂಗ್ಲಾದೇಶ ವಿರುದ್ಧ ಉತ್ತಮ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಅವರು 2011ರಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಅಂದಿನಿಂದಲೂ ಬಾಂಗ್ಲಾದೇಶದ ವಿರುದ್ಧ ಉತ್ತಮ ದಾಖಲೆ ಹೊಂದಿರುನ ಕೊಹ್ಲಿಯು ವಿಶ್ವಕಪ್ ಟೂರ್ನಿಗಳಲ್ಲೂ ಆ ತಂಡದ ವಿರುದ್ಧ ಸ್ಪೋಟಕ ಇನ್ನಿಂಗ್ಸ್ ಆಡಿದ್ದು ನಾಳೆ ನಡೆಯಲಿರುವ ಪಂದ್ಯದಲ್ಲೂ ಬಿರುಸಿನ ಆಟ ಆಡಲು ಮುಂದಾಗಿದ್ದಾರೆ.

2023ರ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ವಿರುದ್ಧದ ಪಂದ್ಯಗಳನ್ನು ಗೆದ್ದಿದ್ದು ಬಾಂಗ್ಲಾದೇಶ ವಿರುದ್ಧವೂ ಗೆದ್ದು ಸೆಮಿಫೈನಲ್‍ಗೆ ಮತ್ತಷ್ಟು ಹತ್ತಿರವಾಗಲು ಹೊರಟಿದೆ.

RELATED ARTICLES

Latest News