Friday, May 24, 2024
Homeಜಿಲ್ಲಾ ಸುದ್ದಿಗಳುRCB ಸೋಲಿಗೆ ವಿದೇಶಿ ಮೋಹವೇ ಕಾರಣ : ಸೆಹ್ವಾಗ್

RCB ಸೋಲಿಗೆ ವಿದೇಶಿ ಮೋಹವೇ ಕಾರಣ : ಸೆಹ್ವಾಗ್

ಬೆಂಗಳೂರು, ಏ.17- ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 3 ಬಾರಿ ಫೈನಲಿಸ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಟ್ರೋಫಿ ಗೆಲ್ಲುವ ಅವಕಾಶವನ್ನು ತಮ್ಮ ಸ್ವಯಂಕೃತ ಅಪರಾಧದಿಂದಾಗಿಯೇ ಕಳೆದುಕೊಂಡಿದೆ. ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಟ್ರೋಫಿ ಗೆಲ್ಲದೆ ಉಳಿಯಲು ವಿದೇಶಿ ಆಟಗಾರರು ಹಾಗೂ ಸಿಬ್ಬಂದಿಗಳ ಮೋಹವೇ ಕಾರಣ ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

2024ರ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡುಪ್ಲೆಸಿಸ್ ಪಡೆ ಆಡಿರುವ 7 ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಸೇರಿದಂತೆ 6 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಕೂಡ ಪ್ಲೇಆಫ್ಗೇರುವ ಭರವಸೆ ಇಲ್ಲ , ಈ ನಡುವೆ ಆ ತಂಡದ ದಯನೀಯ ಸೋಲಿಗೆ ಕಾರಣವನ್ನು ಸೆಹ್ವಾಗ್ ತಿಳಿಸಿದ್ದಾರೆ.

ಆರ್ಸಿಬಿ ಫ್ರಾಂಚೈಸಿ ಯು 12 ರಿಂದ 15 ದೇಶಿ ಹಾಗೂ 10 ವಿದೇಶಿ ಆಟಗಾರರನ್ನು ತಂಡದಲ್ಲಿ ಹೊಂದಿದೆ. ಅಲ್ಲದೆ ತಂಡದಲ್ಲಿರುವ ಸಂಪೂರ್ಣ ಕೋಚಿಂಗ್ ಸಿಬ್ಬಂದಿಗಳಾದ ಆಂಡಿ ಫ್ಲವರ್ ಹಾಗೂ ವೆಫ್ ಬೊಬಾಟ್ ಅವರು ಕೂಡ ವಿದೇಶಿಗಳಾಗಿದ್ದಾರೆ. ಇದೇ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ ತಂಡದಲ್ಲಿ ಕೆಲವರು ಮಾತ್ರ ಅಂತಾರಾಷ್ಟ್ರೀಯ ಆಟಗಾರರಾಗಿದ್ದು, ಸಾಕಷ್ಟು ಮಂದಿ ದೇಶಿ ಆಟಗಾರರಾಗಿದ್ದಾರೆ. ಆದರೆ ಅವರಲ್ಲಿ ಅರ್ಧದಷ್ಟು ಮಂದಿಗೆ ಇಂಗ್ಲೀಷ್ ಅರ್ಥವಾಗುವುದಿಲ್ಲ ಇದೂ ಕೂಡ ತಂಡದ ದೊಡ್ಡ ಸಮಸ್ಯೆಯಾಗಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ನೀವು ದೇಶೀಯ ಆಟಗಾರ ರನ್ನು ಹೇಗೆ ಪ್ರೇರೇಪಿಸುತ್ತೀರಿ? ಅವರೊಂದಿಗೆ ಸಮಯ ಕಳೆಯು ವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ಆರ್ಸಿಬಿ ತಂಡದಲ್ಲಿ ನಾನು ಒಬ್ಬ ಭಾರತೀಯ ಕೋಚಿಂಗ್ ಸ್ಟಾಫ್ ನೋಡಲು ಸಾಧ್ಯವಿಲ್ಲ. ಕನಿಷ್ಠ ಆಟಗಾರರು ನಂಬುವ ಯಾರಾದರೂ ಒಬ್ಬರು ಇರಬೇಕಲ್ಲವೇ?, ಎಂದು ವೀರೇಂದ್ರ ಸೆಹ್ವಾಗ್ ಕ್ರಿಕ್ಬಝ್ನಲ್ಲಿ ಪ್ರಶ್ನಿಸಿದ್ದಾರೆ.

RELATED ARTICLES

Latest News