Friday, November 22, 2024
Homeರಾಜ್ಯಮೋದಿಯ ಹಾದಿ ಸತ್ಯ, ಸಿದ್ದರಾಮಯ್ಯರ ಅವರದ್ದು ಮುಳ್ಳಿನ ದಾರಿ: ಕಾಗೇರಿ

ಮೋದಿಯ ಹಾದಿ ಸತ್ಯ, ಸಿದ್ದರಾಮಯ್ಯರ ಅವರದ್ದು ಮುಳ್ಳಿನ ದಾರಿ: ಕಾಗೇರಿ

ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ಅವರು ನುಡಿದಂತೆ ನಡೆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳಿನ ಭರವಸೆಗಳನ್ನು ನೀಡುವ ಮೂಲಕ ಜನರನ್ನು ಮುಳ್ಳಿನ ಹಾದಿಯಲ್ಲಿ ನಡೆಸುತ್ತಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

ಹೋಟೆಲ್ ಜಿ.ಎಂ. ರಿಜಾಯ್ಸ್ ನ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಸಂವಾದದಲ್ಲಿ ಅವರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನುಡಿದಂತೆ ನಡೆದಿದೆ. ಜಿ 20, ಉಜ್ವಲ, ಎಲ್‍ಪಿಜಿ, ಜನೌಷಧ, ಸುಕನ್ಯ ಸಮೃದ್ಧ್ಧಿ, ಮುದ್ರಾ ಯೋಜನೆಗಳಂತಹ ಇನ್ನೂ ಅನೇಕ ಪ್ರಮುಖ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ನುಡಿದರು.

2014 ರಲ್ಲಿ ಭಾರತದ ಪ್ರಧಾನಿಯಾಗಿ ಮೋದಿಯವರು ಪ್ರಮಾಣವಚನ ಸ್ವೀಕರಿಸಿದರು. ಅವರ ಹತ್ತು ವರ್ಷಗಳ ಆಡಳಿತದಲ್ಲಿ ಮಾಡಿದಂತಹ ಸಾಧನೆಗಳು ಜನಸಾಮಾನ್ಯರನ್ನು ತಲುಪಿದೆ. ಮಹಾತ್ಮ ಗಾಂಧೀಜಿ ಅವರ ಅಂತ್ಯೋದಯ ಅನ್ನ ಯೋಜನೆಯ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಿದೆ. ಆದರೆ ಕಾಂಗ್ರೆಸ್‍ನವರು ಗಾಂಧೀಜಿ ಅವರನ್ನು ಹೀಯಾಳಿಸುವಂಥÀ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ತಿಳಿಸಿದರು.

ರಾಜ್ಯದ 28ಕ್ಕೆ 28 ಮತ ಕ್ಷೇತ್ರಗಳು ಬಿಜೆಪಿಗೆ ಸುರಕ್ಷಿತ ಕ್ಷೇತ್ರಗಳು, 400ಕ್ಕೂ ಮೀರಿ ಕ್ಷೇತ್ರಗಳನ್ನು ಗೆದ್ದು ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ, ಪ್ರಕಾಶ್ ಶೇಷರಾಘವಾಚಾರ್, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕರುಣಾಕರ ಖಾಸಲೆ ಹಾಗೂ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News