Tuesday, January 21, 2025
Homeರಾಜ್ಯಟಿಕೆಟ್ ಮೂಲಕ ಕೆಎಸ್‌ಆರ್‌ಟಿಸಿಯಿಂದ ಮತದಾನ ಜಾಗೃತಿ

ಟಿಕೆಟ್ ಮೂಲಕ ಕೆಎಸ್‌ಆರ್‌ಟಿಸಿಯಿಂದ ಮತದಾನ ಜಾಗೃತಿ

ಬೆಂಗಳೂರು, ಏ.3-ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಸಿದಂತೆ ಕೆಎಸ್‍ಆರ್‍ಟಿಸಿ ಪ್ರಯಾಣಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮತದಾನ ನಮ್ಮೆಲ್ಲರ ಹಕ್ಕು. ಏ. 26 ಮತ್ತು ಮೇ 7 ರಂದು ತಪ್ಪದೇ ಮತದಾನ ಮಾಡಿ ಎಂಬ ಸಂದೇಶವನ್ನು ಕೆಎಸ್‌ಆರ್‌ಟಿಸಿ ನೀಡುತ್ತಿದೆ.

ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲಿ ಈ ಮಾಹಿತಿ ಮುದ್ರಿಸಲಾಗುತ್ತಿದೆ. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿ ಕೆಎಸ್‌ಆರ್‌ಟಿಸಿಯು ಮತದಾನದ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿತ್ತು.

ಚುನಾವಣಾ ಆಯೋಗವು ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಥಾ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂಬುದು ಆಯೋಗದ ಆಶಯವಾಗಿದೆ.

RELATED ARTICLES

Latest News