Saturday, April 27, 2024
Homeಬೆಂಗಳೂರುಮತ್ತೆ ಗಾರ್ಬೆಜ್ ಸಿಟಿಯಾಗುತ್ತಾ ನಮ್ಮ ಬೆಂಗಳೂರು..?

ಮತ್ತೆ ಗಾರ್ಬೆಜ್ ಸಿಟಿಯಾಗುತ್ತಾ ನಮ್ಮ ಬೆಂಗಳೂರು..?

ಬೆಂಗಳೂರು,ಫೆ.20- ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಗಾರ್ಬೆಜ್ ಸಿಟಿ ಎಂಬ ಅಪಖ್ಯಾತಿಗೆ ಒಳಗಾಗುವ ಭೀತಿಗೆ ಸಿಲುಕಿಕೊಂಡಿದೆ. ನಗರದಲ್ಲಿ ಕಳೆದ ಮೂರು ದಿನಗಳಿಂದ ಕಸ ಸಂಗ್ರಹ ಸ್ಥಗಿತವಾಗಿರುವುದರಿಂದ ಇಡಿ ನಗರ ಗಬ್ಬೆದ್ದು ಹೋಗಿರುವುದು ಕಂಡು ಬರುತ್ತಿದೆ. ಕಸದ ಕ್ವಾರಿಗಳಲ್ಲಿ ಕಸ ಡಂಪ್ ಮಾಡಲು ಅವಕಾಶ ಸಿಗದಿರುವುದರಿಂದ ಪೌರ ಕಾರ್ಮಿಕರು ನಗರದಲ್ಲಿ ಮನೆ ಮನೆಯಿಂದ ಕಸ ಪಡೆಯುವ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ.

ನಗರದ ಕಸ ವಿಲೇವಾರಿ ಮಾಡುವ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ಡಂಪ್ ಮಾಡಲು ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಬೆಳ್ಳಳ್ಳಿ ಕ್ವಾರಿಯಲ್ಲೇ ಕಸದ ಲಾರಿಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಕಸದ ಲಾರಿಗಳು ಬಾರದ ಕಾರಣ, ಕಸ ಸಂಗ್ರಹ ಮಾಡಲು ಪೌರಕಾರ್ಮಿಕರು ನಿರಾಕರಿಸಿದ್ದಾರೆ. ಇದನ್ನು ಗಮನಿಸಿದರೆ ನಗರ ಮತ್ತೆ ಗಾರ್ಬೇಜ್ ಸಿಟಿ ಎಂಬ ಖ್ಯಾತಿಗೆ ಒಳಗಾಗುತ್ತ ಎಂಬ ಅನುಮಾನ ಎಲ್ಲರನ್ನೂ ಕಾಡತೊಡಗಿದೆ.

ಕಳೆದ ಎರಡು ದಿನಗಳಿಂದ ಬೆಳ್ಳಳ್ಳಿ ವೈಜ್ಞಾನಿಕ ಭೂ ಭರ್ತಿ ಘಟಕ ( ಡಂಪಿಂಗ್ ಯಾರ್ಡ್ ) ಗೆ ಕಸದ ವಾಹನಗಳಿಗೆ ಎಂಟ್ರಿ ನಿರ್ಬಂಧಿಸಲಾಗಿದೆ. ನಮ್ಮ ಪ್ರದೇಶದಲ್ಲಿ ಕಸ ಸುರಿಯಲು ಅನುಮತಿ ನೀಡುವುದಿಲ್ಲ ಎಂದು ಬೆಳ್ಳಳ್ಳಿ, ಮಿಟ್ಟಗಾನಹಳ್ಳಿ, ಹೊಸೂರು ಬಂಡೆ ಗ್ರಾಮಸ್ಥರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದ ಹಲವು ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗದೆ ಭಾರೀ ಅವ್ಯವಸ್ಥೆ ಎದುರಾಗಿದೆ ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಇಂದಿನಿಂದ ಮತ್ತೆ ಕಸದ ಡಂಪಿಂಗ್ ಗೆ ಬೆಳ್ಳಹಳ್ಳಿ ಡಂಪಿಂಗ್ ಯಾರ್ಡ್ ನಲ್ಲಿ ಅವಕಾಶ ನೀಡಲಾಗಿದೆ.

ಸಿಎಂ ಉತ್ತರಕ್ಕೆ ಅತೃಪ್ತಿ : ಬಿಜೆಪಿ – ಜೆಡಿಎಸ್ ಸಭಾತ್ಯಾಗ

ಪ್ರತಿನಿತ್ಯ ಟನ್‍ಗಟ್ಟಲೆ ಕಸ ತಂದು ಸುರಿಯುತ್ತಿರುವ ಹಿನ್ನೆಲೆ ತುಂಬಿ ಹೋಗಿರುವ ಬೆಳ್ಳ ಹಳ್ಳಿ, ಮಿಟ್ಟಗಾನ ಹಳ್ಳಿ ವೈಜ್ಞಾನಿಕ ಭೂ ಭರ್ತಿ ಘಟಕಗಳಲ್ಲಿ ಇನ್ನು ಕೇವಲ 10 ದಿನಗಳಿಗೆ ಮಾತ್ರ ಕಸ ಡಂಪ್ ಮಾಡಲು ಅವಕಾಶವಿದೆ. ತದನಂತರ ಬೇರೆಡೆಗೆ ಕಸ ಡಂಪ್ ಮಾಡುವುದಾಗಿ ಬಿಬಿಎಂಪಿ ಭರವಸೆ ನೀಡಿದೆ.

10 ದಿನಗಳ ಗಡುವು ಮುಗಿದ ನಂತರ ನಗರದ ಕಸವನ್ನು ಹಾಕಲು ಪ್ರತ್ಯೇಕ ಸ್ಥಳ ಹುಡುಕಿಕೊಳ್ಳದಿದ್ದರೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವಂತಾಗಿದೆ.

RELATED ARTICLES

Latest News