Saturday, May 4, 2024
Homeಜಿಲ್ಲಾ ಸುದ್ದಿಗಳುಭಾರೀ ಬಿಸಿಲಿನಿಂದ ಕೆರೆಯಲ್ಲಿ ನೀರು ಖಾಲಿ, ಮೀನುಗಳ ಸಾವು

ಭಾರೀ ಬಿಸಿಲಿನಿಂದ ಕೆರೆಯಲ್ಲಿ ನೀರು ಖಾಲಿ, ಮೀನುಗಳ ಸಾವು

ಪಾವಗಡ, ಏ. 6- ತಾಲೂಕಿನ ಕನ್ನಮೇಡಿ ಕೆರೆಯಲ್ಲಿನ ನೀರಿನ ಮಟ್ಟ ಕುಸಿತದಿಂದ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.ಪಾವಗಡ ತಾಲೂಕಿನ ಕಸಬಾ ಕನ್ನಮೇಡಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ವಡಸಲಮ್ಮ ಕೆರೆ ಸುಮಾರು 80 ಎಕರೆಗೂ ಹೆಚ್ಚು ವಿಶಾಲವಾದ ಕೆರೆಯಾಗಿದ್ದು 2022-23ರಲ್ಲಿ ಧಾರಾಕಾರ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಮೀನು ಮರಿಗಳನ್ನು ಬಿಟ್ಟು ಹರಾಜು ಮಾಡಲಾಗಿತ್ತು.

ಟೆಂಡರ್ ಅವಧಿ ಮುಗಿದಿದೆ. ಆದರೆ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಕಳೆದ ವರ್ಷ ಮಳೆಯಿಲ್ಲದೆ ಕೆರೆ ತುಂಬದ ಹಿನ್ನೆಲೆಯಲ್ಲಿ ಬಿಸಿಲಿನ ತಾಪಕ್ಕೆ ಕೆರೆಯ ನೀರು ಇಂಗಿದ ಪರಿಣಾಮ ಮೀನುಗಳ ಸಾವನ್ನಪ್ಪಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮುಂಗಾರಿನಿಂದ ಹಿಂಗಾರಿನವರೆಗೆ ಮಳೆ ಬೀಳದ ಪರಿಣಾಮ ತುಂಬಿದ್ದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಇದೇ ದಿಕ್ಕಿನಲ್ಲಿ ಅಲ್ಪಸ್ವಲ್ಪ ನೀರಿನಲ್ಲಿ ಜೀವ ಉಳಿಸಿಕೊಂಡಿದ್ದ ಕನ್ನಮೇಡಿ ಕೆರೆಯಲ್ಲಿನ ಮೀನುಗಳು ಇತ್ತೀಚೆಗೆ ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆಯಲ್ಲಿನ ನೀರು ಸಂಪೂರ್ಣವಾಗಿ ಬತ್ತಿದ ಹಿನ್ನೆಲೆಯಲ್ಲಿ ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪಿವೆ.

ಕಳೆದ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಈ ವರ್ಷ ಜನವರಿಯಿಂದ ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆಯಲ್ಲಿನ ನೀರು ಬತ್ತಿದ ಪರಿಣಾಮ ಮೀನು ಸಾವನ್ನಪ್ಪಿವೆ ಎಂದು ಗ್ರಾಮಸ್ಥ ಸುರೇಶ್ ಕನ್ನಮೇಡಿ ತಿಳಿಸಿದ್ದಾರೆ. ಬಿಸಿಲಿನ ತಾಪಮಾನದಿಂದ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಮೀನುಗಳು ಸಾವನ್ನಪ್ಪಿವೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

RELATED ARTICLES

Latest News