Friday, November 22, 2024
Homeರಾಷ್ಟ್ರೀಯ | Nationalಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ವಾಯುಪಡೆಯನ್ನು ಮರುಹೊಂದಿಸಬೇಕಿದೆ : ಅಮರ್‌ ಪ್ರೀತ್‌ ಸಿಂಗ್‌

ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ವಾಯುಪಡೆಯನ್ನು ಮರುಹೊಂದಿಸಬೇಕಿದೆ : ಅಮರ್‌ ಪ್ರೀತ್‌ ಸಿಂಗ್‌

We have lagged behind China in Technology, need to catch up, says Air chief

ಚೆನ್ನೈ, ಅ. 8 (ಪಿಟಿಐ) ಜಾಗತಿಕ ಭದ್ರತಾ ವಾತಾವರಣವು ನಿರಂತರ ಹರಿವು ಸ್ಥಿತಿಯಲ್ಲಿರುವುದರಿಂದ ಪ್ರಸ್ತುತ ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಭಾರತೀಯ ವಾಯುಪಡೆಯನ್ನು ಮರುಹೊಂದಿಸಲು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಕರೆ ನೀಡಿದ್ದಾರೆ.

ನಡೆಯುತ್ತಿರುವ ಘರ್ಷಣೆಗಳು ಬಲವಾದ ಮತ್ತು ಸಮರ್ಥ ವಾಯುಪಡೆಯನ್ನು ಹೊಂದುವ ಅಗತ್ಯವನ್ನು ಪ್ರದರ್ಶಿಸಿವೆ. ಆದ್ದರಿಂದ, ನಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸವಾಲು ಹಾಕುವ ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಐಎಎಫ್‌ ಸಿದ್ಧವಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಐಎಎಫ್‌ನ 92 ನೇ ವಾರ್ಷಿಕ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ತಾಂಬರಂನಲ್ಲಿರುವ ಏರ್‌ ಫೋರ್ಸ್‌ ಸ್ಟೇಷನ್‌ನಲ್ಲಿ ನಡೆದ ಪರೇಡ್‌ ಅನ್ನು ಪರಿಶೀಲಿಸಿದ ನಂತರ ಅವರು ಹೇಳಿದರು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನವೀನ ಮತ್ತು ಬಾಕ್ಸ್-ಆಫ್‌‍-ದಿ-ಬಾಕ್ಸ್‌‍ ಚಿಂತನೆಯು ಅಳವಡಿಸಿಕೊಂಡು ಜಾಗತೀಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.

RELATED ARTICLES

Latest News