ನವದೆಹಲಿ,ಏ.14-ಬೆಲ್ಲಿಯಂನಲ್ಲಿ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಬಂಧಿಸುತ್ತಿದ್ದಂತೆ ಬಡವರನ್ನು ಲೂಟಿ ಮಾಡಿದವರಿಂದ ಹಣವನ್ನು ವಸೂಲಿ ಮಾಡಿ ಅವರಿಗೆ ಹಿಂದಿರುಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಭರವಸೆಯನ್ನು ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಪುನರುಚ್ಚರಿಸಿದ್ದಾರೆ.
ಜನರಿಗೆ ಪ್ರಧಾನಿ ಮೋದಿಯವರ ಭರವಸೆಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರು,
ಬಡವರ ಹಣದೊಂದಿಗೆ ವಿದೇಶಕ್ಕೆ ಓಡಿಹೋದವರು ಅಂತಿಮವಾಗಿ ತಮ್ಮ ಹಣವನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ಹೇಳಿದರು.
ಬಡವರ ಹಣವನ್ನು ಲೂಟಿ ಮಾಡಿದವರು ಅದನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಈಗಾಗಲೇ ಹೇಳಿದ್ದಾರೆ. ದೇಶದಲ್ಲಿ ಬಹಳಷ್ಟು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಹುಲ್ ಚೋಕ್ಸಿ ಯನ್ನು ಬಂಧಿಸಲಾಗಿದೆ. ಇದು ಬಹಳ ದೊಡ್ಡ ಸಾಧನೆ ಎಂದು ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಬೆಲ್ಲಿಯಂ ಅಧಿಕಾರಿಗಳು ಚೋಕ್ಸಿ ಯನ್ನು ಬಂಧಿಸಿದ್ದಾರೆ. ಟೋಕ್ಸಿ ಪ್ರಸ್ತುತ ಬೆಲ್ಲಿಯಂ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯ ವಿಚಾರಣೆ ಒಂದು ವಾರದ ನಂತರ ನಡೆಯಲಿದೆ.